For Quick Alerts
ALLOW NOTIFICATIONS  
For Daily Alerts
 

World Cup 2023: ಭಾರತದ ಸ್ಟಾರ್ ಬ್ಯಾಟರ್‌ಗೆ ಡೆಂಗ್ಯೂ ಜ್ವರ; ಆಸೀಸ್ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನ!

ಗುರುವಾರ, ಅಕ್ಟೋಬರ್ 5ರಂದು 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಭಾರತದಲ್ಲಿ ಚಾಲನೆ ಸಿಕ್ಕಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಕಳೆದ ಬಾರಿಯ ರನ್ನರ್-ಅಪ್ ನ್ಯೂಜಿಲೆಂಡ್ ತಂಡಗಳು ಸೆಣಸಾಡಿದವು.

ಇನ್ನು 2023ರ ವಿಶ್ವಕಪ್‌ನಲ್ಲಿ ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧದ ತನ್ನ ಮೊದಲ ಪಂದ್ಯಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡಕ್ಕೆ ಭಾರೀ ಹಿನ್ನಡೆ ಎದುರಾಗಿದೆ. ಸ್ಟಾರ್ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಮೊದಲ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ.

World Cup 2023: Shubman Gill Suffering Dengue Fever; Big Blow For India Before Match Against Australia

ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್‌ಗೆ ಡೆಂಗ್ಯೂ ಪಾಸಿಟಿವ್ ಪತ್ತೆಯಾಗಿದೆ. ಪಂಜಾಬ್ ಮೂಲದ ಬ್ಯಾಟರ್ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ. ಇದೇ ಕಾರಣಕ್ಕಾಗಿ ಗುರುವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನೆಟ್ಸ್ ಅಭ್ಯಾಸದ ಅವಧಿಯನ್ನು ತಪ್ಪಿಸಿಕೊಂಡರು.

ಶುಭ್ಮನ್ ಗಿಲ್ ಪ್ರಸ್ತುತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಾರದ ಆರಂಭದಲ್ಲಿ ಶುಭ್ಮನ್ ಗಿಲ್ ಡೆಂಗ್ಯೂ ಪಾಸಿಟಿವ್ ಪರೀಕ್ಷೆ ನಡೆಸಲಾಯಿತು ಮತ್ತು ಶುಕ್ರವಾರ ಮತ್ತೊಂದು ಸುತ್ತಿನ ಪರೀಕ್ಷೆಗಳು ನಡೆಯಲಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.

World Cup 2023: Shubman Gill Suffering Dengue Fever; Big Blow For India Before Match Against Australia

ಭಾನುವಾರ, ಅಕ್ಟೋಬರ್ 8ರಂದು ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಆಡುವ 11ರ ಬಳಗದಲ್ಲಿ ಶುಭ್ಮನ್ ಗಿಲ್ ಅವರ ಆಯ್ಕೆಯು ಡೆಂಗ್ಯೂ ಪರೀಕ್ಷೆಯ ಫಲಿತಾಂಶವನ್ನು ಅವಲಂಬಿಸಿರುತ್ತದೆ.

ಶುಭ್ಮನ್ ಗಿಲ್ ಮೊದಲ ಪಂದ್ಯದ ವೇಳೆಗೆ ಚೇತರಿಸಿಕೊಳ್ಳಲು ವಿಫಲವಾದರೆ, ನಾಯಕ ರೋಹಿತ್ ಶರ್ಮಾ ಜೊತೆಗೆ ಆಸ್ಟ್ರೇಲಿಯಾ ವಿರುದ್ಧ ಇನ್ನಿಂಗ್ಸ್ ಆರಂಭಿಸುವವರು ಯಾರು ಎಂಬುದು ಕುತೂಹಲಕಾರಿಯಾಗಿದೆ.

ಭಾರತ ತಂಡಕ್ಕೆ ಎರಡು ಆರಂಭಿಕ ಆಯ್ಕೆಗಳಿವೆ ಅದು ಎಡಗೈ ಬ್ಯಾಟರ್ ಇಶಾನ್ ಕಿಶನ್ ಮತ್ತು ಬಲಗೈ ಬ್ಯಾಟರ್ ಕೆಎಲ್ ರಾಹುಲ್. ಈಗಾಗಲೇ 5ನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ತನ್ನ ಸ್ಥಾನವನ್ನು ಭದ್ರಪಡಿಸಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಭಾರತದ ಬ್ಯಾಟಿಂಗ್ ಇನ್ನಿಂಗ್ಸ್ ತೆರೆಯುವ ಸಾಧ್ಯತೆಗಳೇ ಹೆಚ್ಚು.

ಶುಭ್ಮನ್ ಗಿಲ್ ಅನುಪಸ್ಥಿತಿಯು ಖಂಡಿತವಾಗಿಯೂ ಭಾರತ ತಂಡಕ್ಕೆ ನಷ್ಟ ಉಂಟುಮಾಡಲಿದೆ. ಗಿಲ್ ಈ ವರ್ಷ ವಿಶೇಷವಾಗಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 2023ರಲ್ಲಿ ಒಟ್ಟು 890 ರನ್‌ಗಳೊಂದಿಗೆ ಶುಭ್ಮನ್ ಗಿಲ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು ಎಂಬುದನ್ನು ಮರೆಯಬಾರದು.

ಅಲ್ಲದೆ, 2023ರ ಏಷ್ಯಾ ಕಪ್‌ನಲ್ಲಿ ಒಟ್ಟು 302 ರನ್‌ಗಳೊಂದಿಗೆ ಅಗ್ರ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕಳೆದ ಕೆಲವು ಇನ್ನಿಂಗ್ಸ್‌ಗಳಲ್ಲಿ ಶುಭ್ಮನ್ ಗಿಲ್ ಅಜೇಯ 104, 74, 27, 121, 19, 58 ಮತ್ತು 67 ರನ್ ಗಳಿಸಿದ್ದಾರೆ.

ವೆಸ್ಟ್ ಇಂಡೀಸ್‌ನಲ್ಲಿ ಶುಭ್ಮನ್ ಗಿಲ್ ಕಳಪೆ ಫಾರ್ಮ್ ಹೊಂದಿದ್ದರು. ಆದರೆ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಅದ್ಭುತವಾಗಿ ಪುನರಾಗಮನ ಮಾಡಿದರು.

ಇನ್ನು ಭಾರತಕ್ಕೆ ಶುಭ ಸುದ್ದಿ ಏನೆಂದರೆ, ತಂಡದಲ್ಲಿ ಬೇರೆ ಯಾವುದೇ ಗಾಯದ ಆತಂಕವಿಲ್ಲ. ಇತ್ತೀಚಿನ ದಿನಗಳಲ್ಲಿ ವಿಭಿನ್ನ ಬ್ಯಾಟಿಂಗ್ ಸ್ಥಾನದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಇಶಾನ್ ಕಿಶನ್ ಸಮರ್ಥ ಬದಲಿ ಆಟಗಾರನಾಗಲಿದ್ದಾರೆ.

ವಿಶ್ವಕಪ್‌ನಲ್ಲಿ ಗೆಲುವಿನ ಶುಭಾರಂಭಕ್ಕಾಗಿ ಎದುರು ನೋಡುತ್ತಿರುವ ಆತಿಥೇಯ ಭಾರತಕ್ಕೆ ಅಗ್ರ ಕ್ರಮಾಂಕದಲ್ಲಿ ಎಡಗೈ-ಬಲಗೈ ಸಂಯೋಜನೆಯು ವರವಾಗಿ ಪರಿಣಮಿಸಬಹುದು.

ಭಾರತ ಪರ ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದು, ನಂತರ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡಲಿದ್ದಾರೆ. ಭಾರತ ತಂಡದ ಶಕ್ತಿ ಅವರ ಬ್ಯಾಟಿಂಗ್. ಈ ಪಂದ್ಯಾವಳಿಯಲ್ಲಿ ಮಿಂಚುವ ಭರವಸೆಯಲ್ಲಿದ್ದಾರೆ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ.

ಭಾರತ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡುತ್ತದೆ ಮತ್ತು ಆ ಪಂದ್ಯದ ವೇಳೆಗೆ ಶುಭ್ಮನ್ ಗಿಲ್ ಗುಣಮುಖರಾಗಿರುತ್ತಾರೆ ಎಂದು ಆಶಿಸಬಹುದು.

Story first published: Friday, October 6, 2023, 8:52 [IST]
Other articles published on Oct 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+