Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲಂಕಾಗೆ ಗಾಯದ ಗುಮ್ಮ: ಮತ್ತೋರ್ವ ಬೌಲರ್ ಗಾಯದಿಂದ ಔಟ್!!

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿರುವ ಶ್ರೀಲಂಕಾ ತಂಡಕ್ಕೆ ಗಾಯದ ಆಘಾತ ಮುಂದುವರಿದಿದೆ. ತಂಡದ ವೇಗದ ಬೌಲರ್ ಲಹಿರು ಕುಮಾರ ಕೂಡ ಗಾಯಕ್ಕೆ ತುತ್ತಾಗಿದ್ದು ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ತೊಡೆ ನೋವಿಗೆ ತುತ್ತಾದ ಲಹಿರು ಕುಮಾರ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬೀಳುವಂತಾಗಿದೆ.

ಅಫ್ಘಾನಿಸ್ತಾನ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಅಭ್ಯಾಸದ ಸಂದರ್ಭದಲ್ಲಿ ಲಹಿರು ಕುಮಾರ ಗಾಯಕ್ಕೆ ತುತ್ತಾಗಿದ್ದಾರೆ ಎನ್ನುವುದು ತಿಳಿದುಬಂದಿದೆ. ಹೀಗಾಗಿ ಐಸಿಸಿ ತಾಂತ್ರಿಕ ಸಮಿಒತಿಯ ಒಪ[್ಪಿಗೆಯ ಮೇರೆಗೆ ಇದೀಗ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ದುಶ್ಮಂತ ಚಮೀರಾ ಶ್ರೀಲಂಕಾದ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

World Cup 2023: Sri Lanka pacer Lahiru Kumara ruled out due to injury; replacement announced

ಲಹಿರು ಕುಮಾರ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿದ್ದರು. ಅಕ್ಟೋಬರ್ 26ರಂದು ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾದ ಎಂಟು ವಿಕೆಟ್‌ಗಳ ಅದ್ಭುತ ಗೆಲುವಿನಲ್ಲಿ ಕುಮಾರ ಮೂರು ವಿಕೆಟ್‌ಗಳ (3/35) ನೊಂದಿಗೆ ಗಮನಾರ್ಹ ಕೊಡುಗೆಯನ್ನು ನೀಡಿದ್ದಾರೆ. ಕುಮಾರ ಅವರ ಈ ಪ್ರದರ್ಶನ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 156 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿತ್ತು.

ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಗಾಯಗೊಂಡಿದ್ದ ಚಮೀರಾ ಶ್ರೀಲಂಕಾದ 15 ಸದಸ್ಯರ ವಿಶ್ವಕಪ್ ತಂಡದ ಭಾಗವಾಗಿರಲಿಲ್ಲ. ಆದರೆ ಅನುಭವಿ ಏಂಜೆಲೊ ಮ್ಯಾಥ್ಯೂಸ್ ಜೊತೆಗೆ ಮೀಸಲು ಆಟಗಾರನಾಗಿ ಸೇರಿಕೊಂಡಿದ್ದರು. ಇಂಗ್ಲೆಂಡ್ ಪಂದ್ಯಕ್ಕೂ ಮುನ್ನ ಗಾಯಗೊಂಡಿರುವ ವೇಗಿ ಮಥೀಶ ಪತಿರಾನ ಅವರ ಬದಲಿ ಆಟಗಾರನಾಗಿ ಮ್ಯಾಥ್ಯೂಸ್ ಅವರನ್ನು ಶ್ರೀಲಂಕಾ ತಂಡಕ್ಕೆ ಕರೆತರಲಾಗಿತ್ತು. ಇದೀಗ ಚಮೀರಾ ಕೂಡ ಆಡುವ ಬಳಗದಲ್ಲಿ ಸೇರ್ಪಡೆಗೊಂಡಿದ್ದಾರೆ.

Story first published: Sunday, October 29, 2023, 17:49 [IST]
Other articles published on Oct 29, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+