World Cup 2023: ಭಾರತ ತಂಡದಲ್ಲಿ ಹೊಸ ಆವಿಷ್ಕಾರ; ಮೊದಲ ಪದಕ ಗೆದ್ದ ವಿರಾಟ್ ಕೊಹ್ಲಿ; ಕಾರಣವೇನು?
ಭಾನುವಾರ, ಅಕ್ಟೋಬರ್ 8ರಂದು ಚೆನ್ನೈನ ಚೆಪಾಕ್‌ನಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ಮುಖಾಮುಖಿಯಾಗಿದ್ದವು. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಡುವಿನ ಅತ್ಯುತ್ತಮ ಜೊತೆಯಾಟವು ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಲು ಭಾರತಕ್ಕೆ ನೆರವಾಯಿತು.
ಇದೇ ವೇಳೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ನಂತರ, ಅತ್ಯಂತ ಫಿಟ್ ಆಗಿರುವ ವಿರಾಟ್ ಕೊಹ್ಲಿ "ಪಂದ್ಯದ ಅತ್ಯುತ್ತಮ ಫೀಲ್ಡರ್' ಪದಕ ಗೆದ್ದ ಮೊದಲ ಆಟಗಾರರಾದರು.

ಫೀಲ್ಡಿಂಗ್ ಆಧುನಿಕ ಕ್ರಿಕೆಟ್‌ನಲ್ಲಿ ಅವಿಭಾಜ್ಯ ಕೌಶಲ್ಯವಾಗಿದೆ ಮತ್ತು ಬ್ಯಾಟಿಂಗ್ ಮತ್ತು ಬೌಲಿಂಗ್‌ಗೆ ಸಮಾನವಾದ ತೂಕವನ್ನು ಹೊಂದಿರುತ್ತದೆ. ಅತ್ಯುತ್ತಮ ಫೀಲ್ಡಿಂಗ್ ಮಾಡುವ ತಂಡ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ.
ಎಂಎಸ್ ಧೋನಿ ನಾಯಕತ್ವದ ನಂತರ ಭಾರತ ತಂಡವು ಫೀಲ್ಡಿಂಗ್ ಘಟಕದಲ್ಲಿ ಸುಧಾರಣೆಗಳನ್ನು ತೋರಿಸಲು ಪ್ರಾರಂಭಿಸಿತು. ಆದಾಗ್ಯೂ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ವಿಶ್ವ ಕ್ರಿಕೆಟ್‌ನ ಅಗ್ರ ಫೀಲ್ಡಿಂಗ್ ತಂಡಗಳಲ್ಲಿ ಒಂದೆನಿಸಿತು. ಫೀಲ್ಡಿಂಗ್‌ಗೆ ಆದ್ಯತೆ ನೀಡುವ ಪ್ರವೃತ್ತಿ ಇದೀಗ ರೋಹಿತ್ ಶರ್ಮಾ ನಾಯಕತ್ವದಲ್ಲೂ ಮುಂದುವರೆದಿದೆ.
ಫೀಲ್ಡಿಂಗ್‌ಗೆ ಹೆಚ್ಚಿನ ಒತ್ತು ನೀಡಲು, ಭಾರತ ತಂಡದ ಮ್ಯಾನೇಜ್‌ಮೆಂಟ್ ತಮ್ಮ ಪ್ರತಿಯೊಂದು ಪಂದ್ಯದಲ್ಲೂ ಉತ್ತಮ ಫೀಲ್ಡರ್‌ಗೆ ಪದಕ ನೀಡಲು ನಿರ್ಧರಿಸಿದೆ.

ಈ ಪ್ರಕ್ರಿಯೆ ಭಾನುವಾರ, ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ 2023ರ ಏಕದಿನ ವಿಶ್ವಕಪ್‌ನ ಭಾರತದ ಆರಂಭಿಕ ಪಂದ್ಯದೊಂದಿಗೆ ಪ್ರಾರಂಭವಾಯಿತು.
"ನಾವು ಕೆಲಸ ಮಾಡುವ ವಿಧಾನದಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ದಿಲೀಪ್ ಅತ್ಯುತ್ತಮ ಫೀಲ್ಡರ್ ಪದಕವನ್ನು ಹಸ್ತಾಂತರಿಸಲಿದ್ದಾರೆ," ಎಂದು ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.
"ಇಂದಿನ ಪಂದ್ಯದಲ್ಲಿ ಇಶಾನ್ ಕಿಶನ್ ಅತ್ಯುತ್ತಮ ಫೀಲ್ಡಿಂಗ್ ಪ್ರದರ್ಶನ ನೀಡಿದರು. ಶ್ರೇಯಸ್ ಅಯ್ಯರ್ ತಮ್ಮ ಎರಡು ಕ್ಯಾಚ್‌ಗಳಿಂದ ಅಮೋಘವಾಗಿದ್ದರು. ಆದರೆ ನಾವು ನಮ್ಮ ತಂಡದ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ ಸ್ಥಿರತೆಯ ಬಗ್ಗೆ, ಇದು ಕೇವಲ ಒಂದು ಕ್ಯಾಚ್ ಬಗ್ಗೆ ಅಲ್ಲ. ಹಿಂದಿನ ಪಂದ್ಯಗಳನ್ನು ಪರಿಗಣಿಸಲಾಗುತ್ತದ".
"ಇದು ನಿಮ್ಮ ಕೆಲಸವನ್ನು ಮಾಡುವುದಲ್ಲದೆ, ನೀವು ಸರಿಯಾದ ಜಾಗದಲ್ಲಿ ಸರಿಯಾದ ಫೀಲ್ಡರ್‌ಗಳನ್ನು ಪ್ರೋತ್ಸಾಹಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳುವುದು. ಈ ಪದಕ ವಿರಾಟ್ ಕೊಹ್ಲಿಗೆ ಹೋಗುತ್ತದೆ," ಎಂದು ಭಾರತ ತಂಡದ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಹೇಳಿದರು.
ವಿರಾಟ್ ಕೊಹ್ಲಿ ನಗುಮುಖದಲ್ಲಿ ಪದಕವನ್ನು ಫೀಲ್ಡಿಂಗ್ ಕೋಚ್‌ನಿಂದ ಕೊರಳಿಗೆ ಹಾಕಿಸಿಕೊಂಡರು. ವಿಡಿಯೋದ ಕೊನೆಯ ಕ್ಷಣಗಳಲ್ಲಿ ಅವರು ಪದಕವನ್ನು ಕಚ್ಚುವುದನ್ನು ನೋಡಿದಾಗ ಅವರ ತಂಡದ ಸದಸ್ಯರು ಸ್ಟಾರ್ ಕ್ರಿಕೆಟರ್‌ಗೆ ಹುರಿದುಂಬಿಸಿದರು.
34 ವರ್ಷದ ವಿರಾಟ್ ಕೊಹ್ಲಿ ಮೈದಾನದಲ್ಲಿ ಮಿಂಚಿನಂತೆ ಓಡಾಡುತ್ತಾರೆ. ಆಸ್ಟ್ರೇಲಿಯಾ ವಿರುದ್ಧ ಎರಡು ಕ್ಯಾಚ್‌ಗಳನ್ನು ತೆಗೆದುಕೊಂಡು ರನ್‌ಗಳನ್ನು ನಿಯಂತ್ರಿಸಲು ನೆರವಾದರು. ನಂತರ ಬ್ಯಾಟ್‌ನೊಂದಿಗೆ 116 ಎಸೆತಗಳಲ್ಲಿ 85 ರನ್ ಗಳಿಸುವುದರೊಂದಿಗೆ ಕುಸಿದಿದ್ದ ತಂಡಕ್ಕೆ ಆಸರೆಯಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications