World Cup 2023: ಕೊನೆಯ ಅಭ್ಯಾಸ ಪಂದ್ಯಕ್ಕಾಗಿ ತಿರುವನಂತಪುರಕ್ಕೆ ಹೊರಟ ಟೀಮ್ ಇಂಡಿಯಾ
ಮಂಗಳವಾರ, ಅಕ್ಟೋಬರ್ 3ರಂದು ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ನಡೆಯಲಿರುವ ನೆದರ್ಲ್ಯಾಂಡ್ಸ್ ವಿರುದ್ಧದ ಕೊನೆಯ ವಿಶ್ವಕಪ್ ಅಭ್ಯಾಸ ಪಂದ್ಯಕ್ಕಾಗಿ ಭಾರತ ತಂಡ ಗುವಾಹಟಿಯಿಂದ ತಿರುವನಂತಪುರಕ್ಕೆ ಪ್ರಯಾಣ ಬೆಳೆಸಿದೆ.
ಆದರೆ, ಎರಡೂ ತಂಡಗಳು ಮಳೆ ರೂಪದ ಅನಿರೀಕ್ಷಿತ ಎದುರಾಳಿಯೊಂದಿಗೆ ಸೆಣಸಾಡಬೇಕಿದೆ. ಇದಕ್ಕೂ ಮುನ್ನ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಭ್ಯಾಸ ಪಂದ್ಯವು ಪ್ರತಿಕೂಲ ಹವಾಮಾನದಿಂದ ಒಂದು ಎಸೆತವೂ ಕಾಣದೆ ರದ್ದಾಯಿತು.

ಅದೇ ರೀತಿ, ನೆದರ್ಲ್ಯಾಂಡ್ಸ್ ತಂಡವು ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸದ ಪಂದ್ಯವು ಎರಡನೇ ಇನ್ನಿಂಗ್ಸ್‌ನಲ್ಲಿ ಅನಿರೀಕ್ಷಿತವಾಗಿ ಬಂದ ಮಳೆಗೆ ಬಲಿಯಾಯಿತು.
ಭಾನುವಾರ, ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ಮಳೆ ಭೀತಿ ಇಲ್ಲದ ಪಂದ್ಯದ ಭರವಸೆಯೊಂದಿಗೆ ತಿರುವನಂತಪುರಕ್ಕೆ ಹೋಗುವ ಮುನ್ನ ಗುವಾಹಟಿ ವಿಮಾನ ನಿಲ್ದಾಣದಲ್ಲಿ ಭಾರತೀಯ ತಂಡ ಕಾಣಿಸಿತು.
2023ರ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಇಂಗ್ಲೆಂಡ್ ವಿರುದ್ಧದ ತಮ್ಮ ಮೊದಲ ಅಭ್ಯಾಸ ಪಂದ್ಯವನ್ನು ನೆನಪಿಸಿಕೊಳ್ಳುವುದಾದರೆ, ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡರು. ಆದರೆ, ಬಿಟ್ಟುಬಿಡದೆ ಸುರಿದ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.

ಮೊದಲ ಅಭ್ಯಾಸ ಪಂದ್ಯ ರದ್ದಾದ ಹೊರತಾಗಿಯೂ, ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಮುಂಬರುವ ಪಂದ್ಯದ ಮೇಲೆ ಈಗ ಎಲ್ಲರ ಕಣ್ಣುಗಳು ನೆಟ್ಟಿವೆ.
ಮುಖ್ಯ ಪಂದ್ಯಾವಳಿಯಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ತಮ್ಮ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.
2023ರ ವಿಶ್ವಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಭಾರತ ತಂಡ
ಭಾರತ ತಂಡಕ್ಕೆ ಮಹತ್ವದ ಬೆಳವಣಿಗೆಯೊಂದರಲ್ಲಿ ಅನುಭವಿ ಬೌಲರ್ ರವಿಚಂದ್ರನ್ ಅಶ್ವಿನ್ ಅವರನ್ನು ಕಳೆದ ಗುರುವಾರ ಅಂತಿಮ 15 ಸದಸ್ಯರ ತಂಡಕ್ಕೆ ಆಯ್ಕೆ ಮಾಡಲಾಯಿತು.
ಎಡಗೈ ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರು ಪಂದ್ಯಾವಳಿಯಲ್ಲಿ ಭಾಗವಹಿಸಲು ಸಾಧ್ಯವಾಗದ ದುರದೃಷ್ಟಕರ ಗಾಯದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ. ಆದರೂ, 12 ವರ್ಷಗಳ ನಂತರ ವಿಶ್ವಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿದೆ.
ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರು ಮತ್ತೆ ತಂಡಕ್ಕೆ ಪುನರಾಗಮನ ಮಾಡಿದರೆ ಹೊರತಾಗಿ, ರವಿಚಂದ್ರನ್ ಅಶ್ವಿನ್ ಅವರ ಸೇರ್ಪಡೆಯು ದೊಡ್ಡ ಬಲ ತುಂಬಲಿದೆ.
ಭರ್ಜರಿ ಬ್ಯಾಟಿಂಗ್‌ನೊಂದಿಗೆ ಹಿಂದಿರುಗಿದ ಕೆಎಲ್ ರಾಹುಲ್, ಏಷ್ಯಾಕಪ್ ಸೂಪರ್ ಫೋರ್ ಹಣಾಹಣಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಶತಕ ಗಳಿಸಿದರು.
ಶ್ರೇಯಸ್ ಅಯ್ಯರ್ ಕೂಡ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅಮೋಘ ಶತಕ ಬಾರಿಸುವ ಮೂಲಕ ತಮ್ಮ ಪರಾಕ್ರಮ ಪ್ರದರ್ಶಿಸಿದರು. ಜಸ್ಪ್ರೀತ್ ಬುಮ್ರಾ ಕೂಡ ತಮ್ಮ ವಿಂಟೇಜ್ ಫಾರ್ಮ್‌ನ ನೋಟವನ್ನು ಪ್ರದರ್ಶಿಸಿದರು. ಏಷ್ಯಾ ಕಪ್‌ನ ಸೂಪರ್ ಫೋರ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅತ್ಯದ್ಭುತ ಪ್ರದರ್ಶನ ನೀಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications