ವಿಶ್ವಕಪ್ 2023: ಆರು ಪಂದ್ಯ ಆಡಿದ ಬಳಿಕವೂ ಈ ಸಾಧನೆ ಮಾಡಿದ ಏಕೈಕ ತಂಡ ಟೀಮ್ ಇಂಡಿಯಾ
ಟೀಮ್ ಇಂಡಿಯಾ ಈ ಬಾರಿಯ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು ಅಗ್ರ ತಂಡವಾಗಿ ಮುಂದುವರಿದಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಲಕ್ನೋದ ಬ್ಯಾಟಿಂಗ್‌ಗೆ ಸವಾಲಾದ ಪಿಚ್‌ನಲ್ಲಿ ಟೀಮ್ ಇಂಡಿಯಾ ಸಾಧಾರಣ ಮೊತ್ತವನ್ನು ಮಾತ್ರವೇ ಗಳಿಸಲು ಶಕ್ತವಾಯಿತು. ಆದರೆ ಇದರ ಮಧ್ಯೆಯೂ ಟೀಮ್ ಇಂಡಿಯಾ ಈ ಪಂದ್ಯದಲ್ಲಿಯೂ ಆಲೌಟ್ ಆಗದೆಯೇ ಉಳಿದುಕೊಂಡಿದೆ.
ಈ ಮೂಲಕ ಈ ಬಾರಿಯ ವಿಶ್ವಕಪ್‌ನಲ್ಲಿ ಒಮ್ಮೆಯೂ ಆಲೌಟ್ ಆಗದೆ ಉಳಿದುಕೊಂಡಿರುವ ಏಕೈಕ ತಂಡ ಎನಿಸಿಕೊಂಡಿದೆ ಟೀಮ್ ಇಂಡಿಯಾ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗದ ವಿರುದ್ಧ ಇಂಗ್ಲೆಂಡ್ ಬೌಲರ್‌ಗಳು ಮೇಲುಗೈ ಸಾಧಿಸಿದರೂ ತಂಡವನ್ನು ಆಲೌಟ್ ಮಾಡಲು ಸಾಧ್ಯವಾಗಲಿಲ್ಲ. ನಿಗದಿತ 50 ಓವರ್‌ಗಳನ್ನು ಪೂರ್ಣವಾಗಿ ಆಡಿದ ಟೀಮ್ ಇಂಡಿಯಾ 9 ವಿಕೆಟ್ ಕಳೆದುಕೊಂಡು 229 ರನ್‌ಗಳನ್ನು ಗಳಿಸಲು ಶಕ್ತವಾಯಿತು.

ಆಸ್ಟ್ರೇಲಿಯಾ ವಿರುದ್ಧ 41.2 ಓವರ್‌ಗಳಲ್ಲಿ 201/4
ಅಫ್ಘಾನಿಸ್ತಾನ ವಿರುದ್ಧ 35 ಓವರ್‌ಗಳಲ್ಲಿ 273/2
ಪಾಕಿಸ್ತಾನ ವಿರುದ್ಧ 30.3 ಓವರ್‌ಗಳಲ್ಲಿ 192/3
ಬಾಂಗ್ಲಾದೇಶ ವಿರುದ್ಧ 41.3 ಓವರ್‌ಗಳಲ್ಲಿ 261/3
ನ್ಯೂಜಿಲೆಂಡ್ ವಿರುದ್ಧ 48 ಓವರ್‌ಗಳಲ್ಲಿ 274/6
ಇಂಗ್ಲೆಂಡ್ ವಿರುದ್ಧ 50 ಓವರ್‌ಗಳಲ್ಲಿ 229/9
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಪಡೆದ ಭಾರತ ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಶುಬ್ಮನ್ ಗಿಲ್ 9 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದರು. ಅದಾದ ಬಳಿಕ ಬಂದ ಶ್ರೇಯಸ್ ಐಯ್ಯರ್ ಕೂಡ ನಾಲ್ಕೇ ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಅಲ್ಲಿಗೆ ಟೀಮ್ ಇಂಡಿಯಾ 40 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಆದರೆ ಅದಾದ ಬಳಿಕ ನಾಯಕ ರೋಹಿತ್ ಶರ್ಮಾ ಜೊತೆಗೆ ಕೆಎಲ್ ರಾಹುಲ್ ಉತ್ತಮ ಜೊತೆಯಾಟವೊಂದರಲ್ಲಿ ಭಾಗಿಯಾದರು. 91 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದ ಈ ಜೋಡಿಯನ್ನು ವಿಲ್ಲಿ ರಾಹುಲ್ ಅವರನ್ನು ಔಟ್ ಮಾಡುವ ಊಲಕ ಬೇರ್ಪಡಿಸಿದರು. 39 ರನ್‌ಗಳ ಗಮನಾರ್ಹ ಕೊಡುಗೆ ನೀಡಿದ ರಾಹುಲ್ ದೊಡ್ಡ ಮೊತ್ತ ಗಳಿಸಲು ವಿಫಲವಾದರು.
ಇನ್ನು ರಾಹುಲ್ ವಿಕೆಟ್ ಕಳೆದುಕೊಂಡ ಬಳಿಕ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಕೂಡ ಅದ್ಭುತ ಪ್ರದರ್ಶನ ನೀಡಿ ತಂಡಕ್ಕೆ ಆಸರೆಯಾದರು. ಈ ಮಧ್ಯೆ ರೋಹಿತ್ ಶರ್ಮಾ 87 ರನ್‌ಗಳನ್ನು ಗಳಿಸಿ ಶತಕದಂಚಿನಲ್ಲಿ ಎಡವಿದರು. 101 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 10 ಬೌಂಡರಿ ಹಾಗೂ 3 ಸಿಕ್ಸರ್ ಬಾರಿಸಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್ 49 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ಅಂತಿಮವಾಗಿ ಟೀಮ್ ಇಂಡಿಯಾ 229 ರನ್‌ಗಳಿಗೆ ಇನ್ನಿಂಗ್ಸ್ ಅಂತ್ಯಗೊಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications