World Cup 2023: ವಿಶ್ವಕಪ್ ನಲ್ಲಿ 'ಹಿಟ್ ಮ್ಯಾನ್' ರೋಹಿತ್ ಶರ್ಮಾ ಟ್ರ್ಯಾಕ್ ರೆಕಾರ್ಡ್
ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ 2023ರ ಏಕದಿನ ವಿಶ್ವಕಪ್‌ನಲ್ಲಿ ಆಡಲಿದೆ. ರೋಹಿತ್ ಶರ್ಮಾ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ. ಇಲ್ಲಿಯವರೆಗೆ ಅವರು ಬ್ಯಾಟ್ಸ್‌ಮನ್ ಆಗಿ ವಿಶ್ವಕಪ್ ಪಂದ್ಯಗಳಲ್ಲಿ ಆಡಿದ್ದಾರೆ.
ರೋಹಿತ್ ಶರ್ಮಾ ಬ್ಯಾಟ್ಸ್‌ಮನ್ ಆಗಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಹಿಟ್‌ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ರೋಹಿತ್ ಶರ್ಮಾ ಇದುವರೆಗೆ ಏಕದಿನ ವಿಶ್ವಕಪ್‌ನ 17 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ, ಅದರಲ್ಲಿ ಅವರು ಅದ್ಭುತ ಬ್ಯಾಟಿಂಗ್ ನಡೆಸಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ 6 ಶತಕ ಸಿಡಿಸಿದ ಆಟಗಾರ ರೋಹಿತ್.

ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಅವರ ಅಂಕಿಅಂಶಗಳು ಅದ್ಭುತವಾಗಿವೆ. ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ 17 ಇನ್ನಿಂಗ್ಸ್ ಗಳಲ್ಲಿ 65.20 ಸರಾಸರಿಯಲ್ಲಿ 987 ರನ್ ಗಳಿಸಿದ್ದಾರೆ. ಈ ವೇಳೆ, ಅವರು 6 ಶತಕ ಮತ್ತು 3 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.
ಇದರಲ್ಲಿ ಅವರು ಪಾಕಿಸ್ತಾನದ ವಿರುದ್ಧ 140 ರನ್‌ಗಳ ಬಿಗ್ ಇನ್ನಿಂಗ್ಸ್ ಸಹ ಸೇರಿದೆ. ಉತ್ತಮ ಸರಾಸರಿಯ ಜೊತೆಗೆ ರೋಹಿತ್ ಶರ್ಮಾ ಅವರ ಸ್ಟ್ರೈಕ್ ರೇಟ್ ಕೂಡ ಉತ್ತಮವಾಗಿದೆ. ಅವರು 95.97 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸುತ್ತಿದ್ದಾರೆ.
ರೋಹಿತ್ ಶರ್ಮಾ ಪ್ರಸಕ್ತ ವಿಶ್ವಕಪ್ ನಲ್ಲಿ ಹಲವು ದಾಖಲೆಗಳನ್ನು ಬರೆಯಬಹುದು. ಅದರಲ್ಲಿ ಎದ್ದು ಕಾಣುವ ದಾಖಲೆ ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಅಳಿಸಿ ಹಾಕುವ ಸನಿಹದಲ್ಲಿದ್ದಾರೆ.
ಭಾರತದ ಮಾಜಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್
ಭಾರತದ ಮಾಜಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಮತ್ತು ಹಾಲಿ ನಾಯಕ ರೋಹಿತ್ ಶರ್ಮಾ ವಿಶ್ವಕಪ್‌ನಲ್ಲಿ ಜಂಟಿಯಾಗಿ ಗರಿಷ್ಠ 6 ಶತಕಗಳನ್ನು ಗಳಿಸಿದ ಆಟಗಾರರಾಗಿದ್ದಾರೆ. ಈ ವಿಶ್ವಕಪ್‌ನಲ್ಲಿ ಶತಕ ಬಾರಿಸುವ ಮೂಲಕ ಅವರು ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಬಹುದು.
2019ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ 9 ಇನ್ನಿಂಗ್ಸ್ ಗಳಲ್ಲಿ 5 ಶತಕ ಸಿಡಿಸಿದ್ದರು. ಅವರು 9 ಇನ್ನಿಂಗ್ಸ್ ಗಳಲ್ಲಿ 81 ರ ಸರಾಸರಿಯಲ್ಲಿ 648 ರನ್ ಗಳಿಸಿದ್ದರು. ಒಟ್ಟಾರೆ ಟೂರ್ನಿಯಲ್ಲಿ ಅವರ ಬ್ಯಾಟ್‌ನಿಂದ 67 ಬೌಂಡರಿ ಹಾಗೂ 14 ಸಿಕ್ಸರ್‌ಗಳು ಸಿಡಿದಿದ್ದವು. ಅವರು ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದರು.
ವಿಶ್ವಕಪ್ ನಲ್ಲಿ ರೋಹಿತ್ ಸ್ಥಿರ ಪ್ರದರ್ಶನ
ಇಲ್ಲಿಯವರೆಗೆ ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದಲ್ಲಿ 251 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳ 243 ಇನ್ನಿಂಗ್ಸ್ ಗಳಲ್ಲಿ ಅವರು 48.85 ಸರಾಸರಿಯಲ್ಲಿ 10,112 ರನ್ ಗಳಿಸಿದ್ದಾರೆ. ಅವರು 30 ಶತಕ ಮತ್ತು 52 ಅರ್ಧ ಶತಕಗಳನ್ನು ಗಳಿಸಿದ್ದಾರೆ.
ಇನ್ನು ಪ್ರಸಕ್ತ ವರ್ಷ ರೋಹಿತ್ ಶರ್ಮಾ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಕ್ರೀಸ್ ನಲ್ಲಿ ನಿಂತು ಎದುರಾಳಿಗಳಿಗೆ ಕಾಡುವುದು ಹಿಟ್ ಮ್ಯಾನ್‌ಗೆ ಇಷ್ಟದ ಕೆಲಸ. ಮುಗಿಲೆತ್ತರದ ಸಿಕ್ಸರ್ ಹಾಗೂ ರನ್ ರೇಟ್ ಹಿಗ್ಗಿಸುತ್ತಾ ಸಾಗುವ ಕ್ಷಮತೆ ಹೊಂದಿದ್ದಾರೆ. ಈ ಬಾರಿ ವಿಶ್ವಕಪ್ ನಲ್ಲಿ ರೋಹಿತ್ ಸ್ಥಿರ ಪ್ರದರ್ಶನ ಮುಂದುವರೆಸಿ, ಭಾರತಕ್ಕೆ ವಿಶ್ವಕಪ್ ಮುಕುಟ ತೊಡಿಸಲಿ ಎಂಬುದೇ ಎಲ್ಲರ ಆಶಯ..
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications