ಇಂದು ಮುಂಬರುವ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ತೀವ್ರ ಕುತೂಹಲ ಮೂಡಿಸಿದೆ. 15 ಆಟಗಾರರ ತಂಡವನ್ನು ಪ್ರಕಟಿಸಬೇಕಿದ್ದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮಾಧ್ಯಮಗೋಷ್ಠಿ ನಡೆಸಿ ತಂಡ ಪ್ರಕಟಿಸುವ ಸಾಧ್ಯತೆಯಿದೆ. ಶ್ರೀಲಂಕಾಗೆ ತೆರಳಿರುವ ಅಗರ್ಕರ್ ಅಲ್ಲಿಯೇ ಮಧ್ಯಾಗ್ನ 1:30ರ ವೇಳೆಗೆ ಮಾಧ್ಯಮಗೋಷ್ಠಿ ನಡೆಸುವ ನಿರೀಕ್ಷೆಯಿದೆ.
ಭಾರತ ಪುರುಷರ ಕ್ರಿಕೆಟ್‌ನ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಕಳೆದ ವಾರವೇ ಶ್ರೀಲಂಕಾಗೆ ತೆರಳಿದ್ದು ಅಲ್ಲಿ ನಾಯಕ ರೋಹಿತ್ ಶರ್ಮಾ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಭೇಟಿ ಮಾಡಿದ್ದು ತಂಡದ ಆ್ಕೆ ವಿಚಾರವಾಗಿ ಚರ್ಚೆಗಳನ್ನು ನಡೆಸಿದ್ದಾರೆ. ಇನ್ನು ಗಾಯದ ಆತಂಕವೂ ಇರುವ ಕಾರಣ ಮೀಸಲು ಆಟಗಾರರನ್ನು ಕುಡ ಹೊಂದಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಅಕ್ಟೋಬರ್ 5ರಿಂದ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು ಸೆಪ್ಟಂಬರ್ 5ರಂದು ತಂಡಗಳ ಪ್ರಕಟಣೆಗೆ ಅಂತಿಮ ದಿನವಾಗಿರಲಿದೆ. ಆದರೆ ಈ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಸೆಪ್ಟೆಂಬರ 28ರವರೆಗೂ ಅವಕಾಶವಿದೆ.
ಇನ್ನು ಟೀಮ್ ಇಂಡಿಯಾ ಏಷ್ಯಾಕಪ್‌ನಲ್ಲಿ ಪ್ರಸ್ತುತ ಭಾಗವಹಿಸುತ್ತಿದ್ದು 17 ಆಟಗಾರರ ಪಡೆಯನ್ನು ಹೊಂದಿದೆ. ಈ ಪೈಕಿ ಇಬ್ಬರು ಆಟಗಾರರು ತಂಡದಿಂದ ಹೊರಗುಳಿಯುವುದು ಅಗತ್ಯವಾಗಿದೆ. ಅದನ್ನು ಹೊರತುಪಡಿಸಿ ಯಾವುದಾದರೂ ಅಚ್ಚರಿಯ ಬದಲಾವನೆಗಳಾಗುವ ಸಂಭವವಿದೆಯಾ ಎನ್ನುವ ಕುತೂಹಲವಿದ್ದರೆ ಅದಕ್ಕೂ ಇಂದು ಮಧ್ಯಾಹ್ನ ಉತ್ತರ ದೊರೆಯಲಿದೆ.
ಸದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಪ್ರಶ್ನೆಯಿರುವುದು ಕೆಎಲ್ ರಾಹುಲ್ ಸ್ಥಾನದ ಬಗ್ಗೆ. ಏಷ್ಯಾಕಪ್ ತಂಡದಲ್ಲಿ ಕೆಎಲ್ ರಾಹುಲ್ ಸ್ಥಾನನ್ನು ಪಡೆದುಕೊಂಡಿದ್ದರೂ ಆರಂಭಿಕ ಎರಡು ಪಂದ್ಯಗಳಿಂದ ಅವರು ಹೊರಗುಳಿದಿದ್ದರು. ಗಾಯದ ಕಾರಣದಿಂದಾಗಿಯೇ ರಾಹುಲ್ ಹೊರಗುಳಿದಿದ್ದಾರೆ ಎನ್ನುವುದನ್ನು ಸ್ವತಃ ನಾಯಕ ರೋಹಿತ್ ಶರ್ಮಾ ಬಹಿರಂಗಪಡಿಸಿದ್ದು ಸೂಪರ್ 4 ಹಂತದಲ್ಲಿ ಲಭ್ಯವಾಗಲಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಿದ್ದರು.
ಇನ್ನು ಏಷ್ಯಾಕಪ್ ಟೂರ್ನಿಯಲ್ಲಿ ಸೋಮವಾರ ನಡದ ಪಂದ್ಯದಲ್ಲಿ ನೇಪಾಳ ವಿರುದ್ಧ 10 ವಿಕೆಟ್‌ಗಳ ಅಂತರದಿಂದ ಗೆದ್ದು ಭಾರತ ಸೂಪರ್ 4 ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಹಾಗಿದ್ದರೂ ವಿಶ್ವಕಪ್‌ನ ದೃಷ್ಟಿಯಿಮದ ತಂಡದ ಸಂಯೋಜನೆಗೆ ಸಂಬಂಧಿಸಿದಂತೆ ಕೆಲ ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿದೆ. ಗ್ರೂಪ್ ಹಂತದಲ್ಲಿ ಆಡಿದ ಎರಡು ಪಂದ್ಯಗಳಿಗೂ ಮಳೆ ಅಡ್ಡಿಯಾಗಿರುವ ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ಆಟಗಾರರಿಗೆ ಅವಕಾಶ ದೊರೆಯದಿರುವುದು ಇದಕ್ಕೆ ಕಾರಣ.
ವಿರ್ಶವಕಪ್‌ಗೆ ಭಾರತದ ಸಂಭಾವ್ಯ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್).
ಸಂಭಾವ್ಯ ಬ್ಯಾಕಪ್ ಆಟಗಾರರು: ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಹಾಲ್