For Quick Alerts
ALLOW NOTIFICATIONS  
For Daily Alerts
 

World Cup 2023: ಇದೇ ಮೊದಲ ಬಾರಿಗೆ ವಿಶ್ವಕಪ್ ಪಂದ್ಯದ ಆತಿಥ್ಯ ವಹಿಸಲಿರುವ 3 ಮೈದಾನಗಳು!

ಮಂಗಳವಾರ, ಜೂನ್ 27ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗೆ 100 ದಿನಗಳು ಬಾಕಿ ಇರುವಾಗ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿತು.

ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದ ಪ್ರಮುಖ 10 ಸ್ಥಳಗಳಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಲಿದ್ದು, ಫೈನಲ್ ಪಂದ್ಯ ಸೇರಿದಂತೆ 48 ಪಂದ್ಯಗಳನ್ನು ಒಳಗೊಂಡಿರುತ್ತದೆ.

World Cup 2023: These 3 Venues To Host World Cup Match For The First Time

ಭಾರತವು ಹಲವು ಸಂದರ್ಭಗಳಲ್ಲಿ ಐಸಿಸಿ ಪಂದ್ಯಾವಳಿಗೆ ಆತಿಥ್ಯ ವಹಿಸಿದೆ ಮತ್ತು ಜಂಟಿಯಾಗಿಯೂ ಆಯೋಜಿಸಿದೆ. ಈ ಹಿಂದೆ ಪುರುಷ ಮತ್ತು ಮಹಿಳೆಯರ ಏಕದಿನ ಮತ್ತು ಟಿ20 ಪ್ರೀಮಿಯರ್ ಟೂರ್ನಿಗಳನ್ನು ಆಯೋಜಿಸಿದ ಅಪರೂಪದ ರಾಷ್ಟ್ರಗಳಲ್ಲಿ ಭಾರತ ಒಂದಾಗಿದೆ.

2023ರ ಆವೃತ್ತಿಯು ಭಾರತವು ನಾಲ್ಕನೇ ಬಾರಿಗೆ ಐಸಿಸಿ ಪಂದ್ಯಾವಳಿಯನ್ನು ಆಯೋಜಿಸುವ ಅವಕಾಶ ಪಡೆದುಕೊಂಡಿದೆ. ಮೊದಲ ಬಾರಿಗೆ ಏಕೈಕ ಆತಿಥ್ಯ ರಾಷ್ಟ್ರವಾಗಿ ಗುರುತಿಸುತ್ತದೆ. ಇದಕ್ಕೂ ಮೊದಲು ಭಾರತವು 1987, 1996 ಮತ್ತು 2011ರಲ್ಲಿ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸಿತ್ತು.

World Cup 2023: These 3 Venues To Host World Cup Match For The First Time

ತನ್ನಲ್ಲಿ ಹೆಚ್ಚಿನ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಸ್ಥಳಗಳನ್ನು ಹೊಂದಿರುವ ದೇಶಗಳಲ್ಲಿ ಭಾರತ ಅಗ್ರಜ. ಹೀಗಾಗಿ ವಿಶ್ವಕಪ್ ಪಂದ್ಯಗಳನ್ನು ವ್ಯಾಪಕವಾಗಿ ಹಂಚಿಕೆ ಮಾಡಿದೆ. ವಾಂಖೆಡೆ ಸ್ಟೇಡಿಯಂ ಮತ್ತು ಈಡನ್ ಗಾರ್ಡನ್ಸ್‌ನಂತಹ ಎ ಶ್ರೇಣಿ ಸ್ಥಳಗಳು ಕೆಲವು ಉನ್ನತ ಮಟ್ಟದ ಪಂದ್ಯಗಳನ್ನು ಆಯೋಜಿಸಿವೆ. ಇದೇ ವೇಳೆ ಇತರ ಸ್ಥಳಗಳು ಸಹ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದ್ದವು.

ಇದೀಗ 2023ರ ವಿಶ್ವಕಪ್ ಆವೃತ್ತಿಯಲ್ಲಿ ತಮ್ಮ ಮೊದಲ ವಿಶ್ವಕಪ್ ಪಂದ್ಯವನ್ನು ಆಯೋಜಿಸುವ ಮೂರು ಸ್ಥಳಗಳನ್ನು ತಿಳಿದುಕೊಳ್ಳೋಣ.

1) ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ - ಪುಣೆ

ಮಹಾರಾಷ್ಟ್ರದ ಪುಣೆ ನಗರವು 1987ರಿಂದ 1996ರವರೆಗೆ ಕೆಲವು ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಆದರೆ ಅವುಗಳನ್ನು ನೆಹರು ಕ್ರೀಡಾಂಗಣದಲ್ಲಿ ಆಡಲಾಗಿತ್ತು. 1996ರ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೀನ್ಯಾ ತಂಡದ ಸೋಲಿಗೆ ಆತಿಥ್ಯ ವಹಿಸಿದ್ದ ಈ ಸ್ಥಳವು ಕೊನೆಯದಾಗಿ 2005ರಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನು ಎದುರಿಸಿತು.

2012ರಲ್ಲಿ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ ಸ್ಥಾಪಿಸಲಾಯಿತು. ಸೌಲಭ್ಯಗಳು ಮತ್ತು ಸಾಮರ್ಥ್ಯದ ದೃಷ್ಟಿಯಿಂದ ನೆಹರು ಕ್ರೀಡಾಂಗಣಕ್ಕಿಂತ ದೊಡ್ಡ ನವೀಕರಣವಾಗಿದೆ.

World Cup 2023: These 3 Venues To Host World Cup Match For The First Time

ಈ ಸ್ಥಳವು ಇತ್ತೀಚಿನ ವರ್ಷಗಳಲ್ಲಿ ಹಲವಾರು ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಐಪಿಎಲ್ ಪಂದ್ಯಗಳನ್ನು ಆಯೋಜಿಸಿದೆ. ಮುಂಬರುವ 2023ರ ಆವೃತ್ತಿಯ ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸುವ ಅವಕಾಶವನ್ನು ಪಡೆದುಕೊಂಡಿದೆ.

ಈ ಮೈದಾನವು ಒಟ್ಟು ಐದು ಪಂದ್ಯಗಳನ್ನು ಆಯೋಜಿಸಲಿದ್ದು, ಇದರಲ್ಲಿ ಅಕ್ಟೋಬರ್ 19ರ ಗುರುವಾರದಂದು ನಡೆಯುವ ಬಾಂಗ್ಲಾದೇಶ ವಿರುದ್ಧ ಭಾರತ ತಂಡದ ಪಂದ್ಯವೂ ಸೇರಿದೆ. ಭಾನುವಾರ, ನವೆಂಬರ್ 12ರಂದು ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿರುವ ಲೀಗ್ ಹಂತದ ಅಂತಿಮ ಪಂದ್ಯಕ್ಕೂ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

2) ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ - ಹೈದರಾಬಾದ್

ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಹೈದರಾಬಾದ್, ಈ ಹಿಂದೆ 1978ರಿಂದ 1996ರವರೆಗೆ ವಿಶ್ವಕಪ್ ಪಂದ್ಯಗಳಿಗೆ ಸಾಕ್ಷಿಯಾಗಿತ್ತು. ಆದರೆ ಆ ಪಂದ್ಯಗಳನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಆಡಿಸಲಾಗಿತ್ತು. ಅದು ಕೊನೆಯದಾಗಿ ಸುಮಾರು ಎರಡು ದಶಕಗಳ ಹಿಂದೆ ಅಂತಾರಾಷ್ಟ್ರೀಯ ಪಂದ್ಯವನ್ನು ಆಯೋಜಿಸಿತ್ತು. ಆ ಬಳಿಕ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದತ್ತ ಎಲ್ಲರ ಚಿತ್ತ ನೆಟ್ಟಿತು.

2003ರಲ್ಲಿ ಸ್ಥಾಪನೆಗೊಂಡ 55,000 ಆಸನಗಳ ಸಾಮರ್ಥ್ಯದ ರಾಜೀವ್ ಗಾಂಧಿ ಕ್ರೀಡಾಂಗಣವು ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ತವರು ಮೈದಾನವಾಗಿದೆ. ಈ ಮೈದಾನವು ಕೆಲವು ರೋಚಕ ಪಂದ್ಯಗಳು ಮತ್ತು ವೈಯಕ್ತಿಕ ದಾಖಲೆಗಳಿಗೆ ಸಾಕ್ಷಿಯಾಗಿದೆ. ಸುದೀರ್ಘ ಸಮಯದ ನಂತರ ವಿಶ್ವಕಪ್ ಪಂದ್ಯವನ್ನು ಆಯೋಜಿಸಲು ಅವಕಾಶ ಪಡೆದುಕೊಂಡಿದೆ.

ವಿಶ್ವಕಪ್ ಪಂದ್ಯಾವಳಿಯ ಆರಂಭಿಕ ಹಂತದಲ್ಲಿ ಒಟ್ಟು ಮೂರು ಪಂದ್ಯಗಳನ್ನು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಆಯೋಜಿಸಲಿದೆ. ಆದರೆ ಇಲ್ಲಿ ಭಾರತ ತಂಡದ ಪಂದ್ಯಗಳು ನಡೆಯುವುದಿಲ್ಲ.

3) ಏಕನಾ ಸ್ಟೇಡಿಯಂ - ಲಕ್ನೋ

2017ರಲ್ಲಿ ಸ್ಥಾಪನೆಯಾದ ಲಕ್ನೋದ ಏಕನಾ ಕ್ರೀಡಾಂಗಣವು ಬೇಗವಾಗಿ ಬೆಳೆಯುತ್ತಿದೆ. ಈ ಸ್ಥಳವು 2023ರ ಆವೃತ್ತಿಯಲ್ಲಿ ತನ್ನ ಮೊದಲ ಐಪಿಎಲ್ ಪಂದ್ಯವನ್ನು ಆಯೋಜಿಸಿತು ಮತ್ತು ಒಂದೆರಡು ತಿಂಗಳ ಅವಧಿಯಲ್ಲಿಯೇ ತನ್ನ ಮೊದಲ ವಿಶ್ವಕಪ್ ಪಂದ್ಯಕ್ಕೆ ಆತಿಥ್ಯ ವಹಿಸಲು ಸಿದ್ಧವಾಗಿದೆ.

ಈ ಹಿಂದೆ ಲಕ್ನೋ ನಗರವು ಹಲವು ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಿದೆ. ಆದರೆ ಅವುಗಳೆಲ್ಲವೂ ಕೆ.ಡಿ. ಸಿಂಗ್ ಬಾಬು ಕ್ರೀಡಾಂಗಣದಲ್ಲಿ ನಡೆದವು. ಈ ಸ್ಥಳದಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ನಡೆದಿದ್ದು, 2005ರಲ್ಲಿ ಮಹಿಳಾ ಏಕದಿನ ಪಂದ್ಯದ ರೂಪದಲ್ಲಿ ನಡೆದಿತ್ತು.

ಏಕನಾ ಸ್ಟೇಡಿಯಂ ಮುಂಬರುವ ಪಂದ್ಯಾವಳಿಯಲ್ಲಿ ಕೆಲವು ರೋಚಕ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಇದರಲ್ಲಿ ಭಾನುವಾರ, ಅಕ್ಟೋಬರ್ 29ರಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಸೆಣಸಾಡಲಿದ್ದರೆ, ಇದಕ್ಕೂ ಮುನ್ನ ಶುಕ್ರವಾರ, ಅಕ್ಟೋಬರ್ 13ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ತಂಡ ಮುಖಾಮುಖಿಯಾಗಲಿದೆ.

Story first published: Wednesday, June 28, 2023, 9:52 [IST]
Other articles published on Jun 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+