World Cup 2023 Ticket Prices: ಈಡನ್ ಗಾರ್ಡನ್ಸ್‌ನಲ್ಲಿ ನಡೆಯುವ ವಿಶ್ವಕಪ್ ಪಂದ್ಯಗಳ ಟಿಕೆಟ್ ಬೆಲೆ ಪ್ರಕಟ
ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಜೂನ್ 27ರಂದು ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 5ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ.

ಇನ್ನು ಅಕ್ಟೋಬರ್ 8ರಂದು ಟೀಂ ಇಂಡಿಯಾ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಅನಂತರ ಅಕ್ಟೋಬರ್ 15ರಂದು ಅಹಮದಾಬಾದ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯವೂ ನಡೆಯಲಿದೆ.
ಭಾರತದ 10 ಸ್ಥಳಗಳಲ್ಲಿ ವಿಶ್ವದ 10 ಪ್ರಮುಖ ತಂಡಗಳು ಐಸಿಸಿ ಪಂದ್ಯಾವಳಿಯಲ್ಲಿ ಸೆಣಸಾಡಲಿವೆ. ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವ ಸ್ಥಳಗಳಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನವೂ ಒಂದು.
ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣವು ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಒಂದು ಸೆಮಿಫೈನಲ್ ಸೇರಿದಂತೆ ಐದು ಪಂದ್ಯಗಳನ್ನು ಆಯೋಜಿಸಲಿದೆ. ಇದೀಗ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಸಿಎಬಿ) ಮುಖ್ಯಸ್ಥ ಸ್ನೇಹಶಿಶ್ ಗಂಗೂಲಿ ಅವರು ವಿಶ್ವಕಪ್ ಪಂದ್ಯಗಳ ಟಿಕೆಟ್‌ಗಳ ಬೆಲೆಯನ್ನು ಘೋಷಿಸಿದ್ದಾರೆ.
ಈಡನ್ ಗಾರ್ಡನ್ಸ್ ಸ್ಥಳದಲ್ಲಿ ನಿಗದಿಪಡಿಸಲಾದ ಎಲ್ಲಾ ಪಂದ್ಯಗಳ ಬೆಲೆಗಳು 650 ರೂಪಾಯಿಗಳಿಂದ 3000 ರೂಪಾಯಿಗಳವರೆಗೆ ಇರುತ್ತದೆ.
ಬಾಂಗ್ಲಾದೇಶ vs ಕ್ವಾಲಿಫೈಯರ್ 1 ಪಂದ್ಯದ ಟಿಕೆಟ್ ದರಗಳು
ಎಲ್ಲಾ ಮೇಲಿನ ಶ್ರೇಣಿಗಳಿಗೆ 650 ರೂ.
ಡಿ ಮತ್ತು ಎಚ್ ಬ್ಲಾಕ್‌ಗಳಿಗೆ 1000 ರೂ.
ಬಿ, ಸಿ, ಕೆ, ಎಲ್ ಬ್ಲಾಕ್‌ಗಳಿಗೆ 1500 ರೂ.
ಇಂಗ್ಲೆಂಡ್ vs ಪಾಕಿಸ್ತಾನ ಪಂದ್ಯದ ಟಿಕೆಟ್ ದರಗಳು
ಮೇಲಿನ ಶ್ರೇಣಿಗಳು 800 ರೂ.
ಡಿ, ಎಚ್ ಬ್ಲಾಕ್‌ಗಳು 1200 ರೂ.
ಸಿ, ಕೆ, ಬ್ಲಾಕ್‌ಗಳು 2000 ರೂ.
ಬಿ ಎಲ್ ಬ್ಲಾಕ್‌ಗಳು 2200 ರೂ.
ಬಾಂಗ್ಲಾದೇಶ vs ಪಾಕಿಸ್ತಾನ ಪಂದ್ಯದ ಟಿಕೆಟ್ ದರಗಳು
ಮೇಲಿನ ಶ್ರೇಣಿಗಳು 800 ರೂ.
ಡಿ, ಎಚ್ ಬ್ಲಾಕ್‌ಗಳು 1200 ರೂ.
ಸಿ, ಕೆ, ಬ್ಲಾಕ್‌ಗಳು 2000 ರೂ.
ಬಿ ಎಲ್ ಬ್ಲಾಕ್‌ಗಳು 2200 ರೂ.
ಭಾರತ vs ದಕ್ಷಿಣ ಆಫ್ರಿಕಾ ಪಂದ್ಯದ ಟಿಕೆಟ್ ದರಗಳು
ಮೇಲಿನ ಶ್ರೇಣಿಗಳು 900 ರೂ .
ಡಿ, ಎಚ್ ಬ್ಲಾಕ್‌ಗಳು 1500 ರೂ.
ಸಿ, ಕೆ, ಬ್ಲಾಕ್‌ಗಳು 2500 ರೂ.
ಬಿ ಎಲ್ ಬ್ಲಾಕ್‌ಗಳು 3000 ರೂ.
ಸೆಮಿಫೈನಲ್ ಪಂದ್ಯಗಳ ಟಿಕೆಟ್ ದರಗಳು
ಮೇಲಿನ ಶ್ರೇಣಿಗಳು 900 ರೂ .
ಡಿ, ಎಚ್ ಬ್ಲಾಕ್‌ಗಳು 1500 ರೂ.
ಸಿ, ಕೆ, ಬ್ಲಾಕ್‌ಗಳು 2500 ರೂ.
ಬಿ ಎಲ್ ಬ್ಲಾಕ್‌ಗಳು 3000 ರೂ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications