Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

9 ವರ್ಷದ ಬಳಿಕ ODI ವಿಕೆಟ್ ಪಡೆದ ವಿರಾಟ್ ಕೊಹ್ಲಿ!!: ಅನುಷ್ಕಾ ಶರ್ಮಾ ಸಂಭ್ರಮ ಹೇಗಿತ್ತು ನೋಡಿ!!

ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಬೌಲಿಂಗ್‌ನಲ್ಲಿ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ಬೌಲಿಂಗ್ ಮಾಡಿದ್ದು ಮಾತ್ರವಲ್ಲದೆ ಒಂದು ವಿಕೆಟ್ ಕೂಡ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಬರೊಬ್ಬರಿ 9 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ವಿಕೆಟ್ ಕಬಳಿಸಿದ್ದಾರೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಕಳೆದ ಕೆಲ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿಗೆ ಬೌಲಿಂಗ್ ನೀಡುವಂತೆ ಮೈದಾನದಲ್ಲಿದ್ದ ಪ್ರೇಕ್ಷಕರು ತಮ್ಮದೇ ರೀತಿಯಲ್ಲಿ ಘೋಷಣೆಯ ಮೂಲಕ ಬೇಡಿಕೆಯಿಡುತ್ತಿದ್ದರು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೂ ಪ್ರೇಕ್ಷಕರು "ಕೊಹ್ಲಿ ಕೊ ಬೌಲಿಂಗ್ ದೋ" (ಕೊಹ್ಲಿಗೆ ಬೌಲಿಂಗ್ ಕೊಡಿ) ಎಂದು ಘೋಷಣೆ ಕೂಗಿದ್ದರು. ನೆದರ್ಲೆಂಡ್ಸ್ ವಿರುದ್ಧದ ಈ ಪಂದ್ಯದಲ್ಲಿ ಕೊಹ್ಲಿ ಅಭಿಮಾನಿಗಳ ಬೇಡಿಕೆಯನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪುರಸ್ಕರಿಸಿ ಕೊಹ್ಲಿಗೆ ಬೌಲಿಂಗ್ ನೀಡಿದ್ದಾರೆ.

World Cup 2023: Virat Kohli gets wicket in ODI cricket after 9 years Anushka Sharma enjoyed in the stands

ಇನ್ನಿಂಗ್ಸ್‌ನ 23ನೇ ಓವರ್ ಎಸೆಯಲು ಕೊಹ್ಲಿಗೆ ಬೌಲಿಂಗ್ ನೀಡಿದ್ದರು ನಾಯಕ ರೋಹಿತ್ ಶರ್ಮಾ. ಈ ಓವರ್‌ನಲ್ಲಿ ಒಂದು ಎಸೆತ ಎಡ್ಜ್‌ ಆಗಿ ಬೌಂಡರಿ ಹೋದ ಕಾರಣ ಒಟ್ಟು 6 ರನ್ ಬಿಟ್ಟುಕೊಟ್ಟಿದ್ದರು ವಿರಾಟ್ ಕೊಹ್ಲಿ. ನಂತರ ಮತ್ತೆ 25ನೇ ಓವರ್‌ನಲ್ಲಿ ಕೂಡ ವಿರಾಟ್ ಕೊಹ್ಲಿ ಎಸೆದಿದ್ದರು. ಈ ಓವರ್‌ನ ಮೂರನೇ ಎಸೆತದಲ್ಲಿ ವಿರಾಟ್ ಕೊಹ್ಲಿ ನೆದರ್ಲೆಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್ ವಿಕೆಟ್ ಕಬಳಿಸಿದ್ದರು.

ವಿರಾಟ್ ಕೊಹ್ಲಿ ವಿಕೆಟ್ ಪಡೆದ ಬಳಿಕ ಪಂದ್ಯವನ್ನು ವೀಕ್ಷಿಸುತ್ತಿದ್ದ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಸಂಭ್ರಮಿಸಿದ್ದಾರೆ. ವಿರಾಟ್ ವಿಕೆಟ್ ಪಡೆದ ರೀತಿಗೆ ಅನುಷ್ಕಾ ಶರ್ಮಾ ದೊಡ್ಡ ನಗೆಯೊಂದಿಗೆ ಸಂಭ್ರಮಿಸಿದ್ದು ಇದು ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲೊ ಭರ್ಜರಿ ಅರ್ದ ಶತಕ ಸಿಡಿಸಿ ಮಿಂಚಿದ್ದಾರೆ. ಶ್ರೇಯಸ್ ಐಯ್ಯರ್ ಹಾಗೂ ಕೆಎಲ್ ರಾಹುಲ್ ಈ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ್ದಾರೆ. ಕೊಹ್ಲಿ ಜೊತೆಗೆ ನಾಉಕ ರೋಹಿತ್ ಶರ್ಮಾ ಹಾಗೂ ಶಬ್ಮನ್ ಗಿಲ್ ಅರ್ಧ ಶತಕ ಸಿಡಿಸಿದರು. ಈ ಬ್ಯಾಟಿಂಗ್‌ನ ಕಾರಣದಿಂದಾಗಿ ಟೀಮ್ ಇಂಡಿಯಾ 410 ರನ್‌ಗಳನ್ನು ಗಳಿಸಿದ್ದಾರೆ.

ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್
ಬೆಂಚ್: ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್

ನೆದರ್ಲೆಂಡ್ಸ್: ವೆಸ್ಲಿ ಬ್ಯಾರೆಸಿ, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್‌ಮನ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್, ಸ್ಕಾಟ್ ಎಡ್ವರ್ಡ್ಸ್ (ನಾಯಕ & ವಿಕೆಟ್ ಕೀಪರ್), ಬಾಸ್ ಡಿ ಲೀಡೆ, ತೇಜ ನಿಡಮನೂರು, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್
ಬೆಂಚ್: ಸಾಕಿಬ್ ಜುಲ್ಫಿಕರ್, ವಿಕ್ರಮಜಿತ್ ಸಿಂಗ್, ಶರೀಜ್ ಅಹ್ಮದ್, ನೋಹ್ ಕ್ರೋಸ್

Story first published: Sunday, November 12, 2023, 20:40 [IST]
Other articles published on Nov 12, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+