For Quick Alerts
ALLOW NOTIFICATIONS  
For Daily Alerts
 

IND vs BAN: ಏಕದಿನ ಕ್ರಿಕೆಟ್‌ನಲ್ಲಿ 48ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ; ವಿಶ್ವದಾಖಲೆಗೆ ಎರಡೇ ಹೆಜ್ಜೆ ಬಾಕಿ!

ಗುರುವಾರ, ಅಕ್ಟೋಬರ್ 19ರಂದು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 48ನೇ ಶತಕ ಬಾರಿಸಿದರು.

ಈ ಮೂಲಕ ಭಾರತದ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಅಂತಾರಾಷ್ಟ್ರೀಯ ಶತಕಗಳ ಹತ್ತಿರಕ್ಕೆ ಬಂದಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಏಕದಿನ ಶತಕಗಳ ದಾಖಲೆಯನ್ನು ಮುರಿಯಲು ಕೇವಲ ಎರಡು ಶತಕಗಳು ಮಾತ್ರ ಅಗತ್ಯವಿದೆ. ಇನ್ನು ವಿರಾಟ್ ಕೊಹ್ಲಿ ಒಟ್ಟಾರೆ 78ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದರು.

World Cup 2023: Virat Kohli Hits 48th ODI Century; India Defeats Bangladesh by 7 Wickets

2023ರ ಏಕದಿನ ವಿಶ್ವಕಪ್‌ನಲ್ಲಿ 17ನೇ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ್ದ 257 ರನ್‌ಗಳ ಚೇಸಿಂಗ್‌ನಲ್ಲಿ 41.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿದ ಭಾರತ ತಂಡವು 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಭಾರತ ತಂಡದ ಪರ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಭರ್ಜರಿ ಆರಂಭ ಒದಗಿಸಿದರು. ನಾಯಕ ರೋಹಿತ್ ಶರ್ಮಾ 40 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 48 ರನ್ ಗಳಿಸಿದರೆ, ಶುಭ್ಮನ್ ಗಿಲ್ 55 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ 53 ರನ್ ಬಾರಿಸಿದರು.

World Cup 2023: Virat Kohli Hits 48th ODI Century; India Defeats Bangladesh by 7 Wickets

ಶತಕವೀರ ವಿರಾಟ್ ಕೊಹ್ಲಿ 97 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಮೇತ ಅಜೇಯ 103 ರನ್ ಬಾರಿಸಿದರು. ಇದು ಚೇಸಿಂಗ್ ಮಾಸ್ಟರ್‌ನ ಮತ್ತೊಂದು ದಾಖಲೆಗೆ ಕಾರಣವಾಯಿತು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 26 ಸಾವಿರ ರನ್‌ಗಳ ಗಡಿ ದಾಟಿದರು.

ಇದೇ ವೇಳೆ ಕೆಎಲ್ ರಾಹುಲ್ 34 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ ಅಜೇಯ 34 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 25 ಎಸೆತಗಳಲ್ಲಿ 2 ಬೌಂಡರಿ ಮೂಲಕ 19 ರನ್ ಗಳಿಸಿದರು.

ವಿರಾಟ್ ಕೊಹ್ಲಿ ಈ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ತಮ್ಮ 3ನೇ ಶತಕ ಬಾರಿಸಿ ಶಿಖರ್ ಧವನ್ ದಾಖಲೆ ಸರಿಗಟ್ಟಿದರು. ಅಲ್ಲದೆ, ಇದು ವಿಶ್ವಕಪ್ ಚೇಸ್‌ನಲ್ಲಿ ವಿರಾಟ್ ಕೊಹ್ಲಿ ಅವರ ಮೊದಲ ಶತಕವಾಗಿದೆ.

ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಶತಕ ಗಳಿಸಿದವರು
7 - ರೋಹಿತ್ ಶರ್ಮಾ
6 - ಸಚಿನ್ ತೆಂಡೂಲ್ಕರ್
4 - ಸೌರವ್ ಗಂಗೂಲಿ
3 - ಶಿಖರ್ ಧವನ್
3 - ವಿರಾಟ್ ಕೊಹ್ಲಿ

ಭಾರತದ ಒಂದೇ ಮೈದಾನದಲ್ಲಿ ಅತಿ ಹೆಚ್ಚು ಏಕದಿನ ರನ್‌ ಗಳಿಸಿದ ಆಟಗಾರರು
587 - ವಿರಾಟ್ ಕೊಹ್ಲಿ, ವಿಶಾಖಪಟ್ಟಣ
551 - ವಿರಾಟ್ ಕೊಹ್ಲಿ, ಪುಣೆ
534 - ಸಚಿನ್ ತೆಂಡೂಲ್ಕರ್, ಬೆಂಗಳೂರು
529 - ಸಚಿನ್ ತೆಂಡೂಲ್ಕರ್, ಗ್ವಾಲಿಯರ್
496 - ಸಚಿನ್ ತೆಂಡೂಲ್ಕರ್, ಕೋಲ್ಕತ್ತಾ

Story first published: Thursday, October 19, 2023, 22:21 [IST]
Other articles published on Oct 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+