For Quick Alerts
ALLOW NOTIFICATIONS  
For Daily Alerts
 

ಕೇವಲ ನಿನ್ನಿಂದ ಮಾತ್ರ ಇದು ಸಾಧ್ಯ: ಗೆಳೆಯನ ಆಟಕ್ಕೆ ಮನಸೋತ ಕೊಹ್ಲಿ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಗ್ಲೆನ್ ಮ್ಯಾಕ್ಸ್‌ವೆಲ್ ಆಡಿದ ನಂಬಲಸಾಧ್ಯವಾದ ಇನ್ನಿಂಗ್ಸ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೆ ದಿಗ್ಗಜರು ಕೂಡ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಕೂಡ ಆರ್‌ಸಿಬಿ ತಂಡದ ಸಹ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಈ ಆಟವನ್ನು ಕೊಂಡಾಡಿದ್ದಾರೆ.

ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಕಳೆದ ಮೂರು ಆವೃತ್ತಿಗಳಿಂದ ಆರ್‌ಸಿಬಿ ತಂಡದ ಪರವಾಗಿ ಜೊತೆಯಾಗಿ ಆಡುತ್ತಿದ್ದಾರೆ. ವಿಶ್ವಕಪ್‌ನಲ್ಲಿ ನೀಡಿರುವ ಈ ಅಮೋಘ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ವಿರಾಟ್ ಕೊಹ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ.

World cup 2023: Virat Kohli praises Glenn Maxwell after double hundred said Only you could do this

ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿರಾಟ್ ಕೊಹ್ಲಿ ಮ್ಯಾಕ್ಸ್‌ವೆಲ್ ಆಟವನ್ನು ಮೆಚ್ಚಿ ಕೊಂಡಾಡಿದ್ದಾರೆ. "ಕೇವಲ ನಿನ್ನಿಂದ ಮಾತ್ರ ಇದು ಸಾಧ್ಯ. ವಿಲಕ್ಷಣ" ಎಂದು ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ ವಿರಾಟ್ ಕೊಹ್ಲಿ. ಈ ಮೂಲಕ ತಮ್ಮ ಗೆಳೆಯನ ಸಾಧನೆಗೆ ಮೆಚ್ಚುಗೆಯನ್ನು ತಿಳಿಸಿದ್ದಾರೆ.

ಆಸ್ಟ್ರೇಲಿಯಾ 18.3 ಓವರ್‌ಗಳಲ್ಲಿ ಏಳು ವಿಕೆಟ್‌ಗಳ ನಷ್ಟಕ್ಕೆ 91 ರನ್ ಗಳಿಸಿ ಒದ್ದಾಡುತ್ತಿದ್ದಾಗ ಮ್ಯಾಕ್ಸ್‌ವೆಲ್‌ಗೆ ತಂಡವನ್ನು ಪಾರು ಮಾಡುವ ದೊಡ್ಡ ಜವಾಬ್ಧಾರಿಯಿತ್ತು. ಈ ಇನ್ನಿಂಗ್ಸ್‌ನಲ್ಲಿ ಮ್ಯಾಕ್ಸ್‌ವೆಲ್ ಎಲ್‌ಬಿಡಬ್ಲ್ಯು ತೀರ್ಪನ್ನು ರಿವ್ಯೂ ಮೂಲಕ ತಮ್ಮ ಪರವಾಗುವಂತೆ ಮಾಡಿಕೊಂಡ ಬಳಿಕ ಶಾರ್ಟ್ ಫೈನ್ ಲೆಗ್‌ನಲ್ಲಿ ಮುಜೀಬ್ ಉರ್ ರೆಹಮಾನ್ ಅವರಿಂದ ಸುಲಭ ಕ್ಯಾಚ್‌ ಕೈಚೆಲ್ಲಿದ ಜೀವದಾನವನ್ನು ಪಡೆದುಕೊಂಡರು. ಇದರ ಲಾಭವನ್ನು ಪಡೆದುಕೊಂಡು ಅಫ್ಘನ್ನರಿಗೆ ಮತ್ತೆ ಅವಕಾಶವೇ ಇಲ್ಲದಂತೆ ಇನ್ನಿಂಗ್ಸ್ ಬೆಳೆಸಿದರು.

ಅಲ್ಲಿಂದ ಮ್ಯಾಕ್ಸ್‌ವೆಲ್ ಹಿಂತಿರುಗಿ ನೋಡಲೇ ಇಲ್ಲ. ಗಾಯಕ್ಕೆ ತುತ್ತಾದರೂ ಗೆಲುವನ್ನು ಮಾತ್ರವೇ ಚಿತ್ತದಲ್ಲಿಟ್ಟುಕೊಂಡು ಆಡಿದ ಮ್ಯಾಕ್ಸ್‌ವೆಲ್ 128 ಎಸೆತಗಳಲ್ಲಿ 21 ಬೌಂಡರಿ ಮತ್ತು 10 ಸಿಕ್ಸರ್‌ಗಳೊಂದಿಗೆ 201 ರನ್ ಗಳಿಸಿ ಅಜೇಯವಾಗುಳಿಯುವ ಮೂಲಕ ಜಗತ್ರೇ ನಿಬ್ಬೆರಗಾಗುವಂಥಾ ಗೆಲುವಿಗೆ ಕಾರಣವಾದರು. ಪ್ಯಾಟ್ ಕಮ್ಮಿನ್ಸ್ ಅವರೊಂದಿಗೆ ಎಂಟನೇ ವಿಕೆಟ್‌ಗೆ 202 ರನ್‌ಗಳ ಜೊತೆಯಾಟವನ್ನಾಡಿದ್ದಾರೆ.

ಇನ್ನು ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಕೂಡ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಈ ಟೂರ್ನಿಯಲ್ಲಿ ಈವರೆಗೆ ಟೀಮ್ ಇಂಡಿಯಾ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನ್ನುವ ಹೆಗ್ಗಳಿಕೆ ಕೂಡ ಹೊಂದಿದ್ದಾರೆ. ಇನ್ನು ಕೊಹ್ಲಿ ಕಳೆದ ಭಾನುವಾರ 35ನೇ ಹುಟ್ಟುಹಬ್ಬವನ್ನು ಆಚರಿಸಿದ್ದು ಅದೇ ದಿನ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಇದು ಏಕದಿನ ಕ್ರಿಕೆಟ್‌ಲ್ಲಿ ಕೊಹ್ಲಿ ಸಿಡಿಸಿದ 49ನೇ ಶತಕವಾಗಿದ್ದು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಸರಿಗಟ್ಟಿದ್ದಾರೆ.

Story first published: Wednesday, November 8, 2023, 12:52 [IST]
Other articles published on Nov 8, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+