For Quick Alerts
ALLOW NOTIFICATIONS  
For Daily Alerts
 

World Cup 2023: ಅಭ್ಯಾಸದ ವೇಳೆ ಅಭಿಮಾನಿಗಳಿಗೆ ನಿರಾಸೆ ಮಾಡದ ಕೊಹ್ಲಿ; ಪುಣೆಯಲ್ಲಿ ಕಿಂಗ್ ದಾಖಲೆ ಹೇಗಿದೆ?

ಕಳೆದ ಶನಿವಾರ ಅಹಮದಾಬಾದ್‌ನಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದ ಭಾರತ ತಂಡ ಸತತ ಮೂರನೇ ಗೆಲುವಿನ ನಂತರ ಅಲ್ಪ ವಿರಾಮವನ್ನು ತೆಗೆದುಕೊಂಡಿದೆ.

ರೋಹಿತ್ ಶರ್ಮಾ ಪಡೆಯು ಕೆಲವು ದಿನಗಳ ಹಿಂದೆ ಪುಣೆಗೆ ಆಗಮಿಸಿದೆ. ಗುರುವಾರ, ಅಕ್ಟೋಬರ್ 19ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ಕ್ರೀಡಾಂಗಣದಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ನಾಲ್ಕನೇ ಪಂದ್ಯಕ್ಕೆ ಮುಂಚಿತವಾಗಿ ಮಂಗಳವಾರ ಅಭ್ಯಾಸವನ್ನು ಪ್ರಾರಂಭಿಸಿತು.

World Cup 2023: Virat Kohli Signs Autographs For Fans During Practice Session; Kohlis Record in Pune

ಪುಣೆಯ ಮೈದಾನದಲ್ಲಿ ಎಲ್ಲಾ ಮಾದರಿಯ ಪಂದ್ಯಗಳಲ್ಲಿ ಅಸಾಧಾರಣ ದಾಖಲೆಯನ್ನು ಹೊಂದಿರುವ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕಠಿಣ ಅಭ್ಯಾಸದ ಅವಧಿಗಾಗಿ ಮಂಗಳವಾರ ಆಗಮಿಸಿದರು.

ನೆಟ್ಸ್ ಸೆಷನ್‌ಗೆ ಮುಂಚಿತವಾಗಿ, ವಿರಾಟ್ ಕೊಹ್ಲಿ ಮೈದಾನದಲ್ಲಿದ್ದ ಪ್ರೇಕ್ಷಕರ ದೊಡ್ಡ ಗುಂಪಿನ ಮನಸ್ಸುಗಳನ್ನು ಗೆದ್ದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಅವರು ಆಟೋಗ್ರಾಫ್ ನೀಡುವ ಮೂಲಕ ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ.

World Cup 2023: Virat Kohli Signs Autographs For Fans During Practice Session; Kohlis Record in Pune

2023ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಪಂದ್ಯಾವಳಿಯಲ್ಲಿನ ತಮ್ಮ ಮೊದಲ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧ ತಲಾ ಅರ್ಧಶತಕ ಗಳಿಸಿದ್ದಾರೆ.

ಕಳೆದ ವಾರ ಅಹಮದಾಬಾದ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬ್ಯಾಟರ್ ವಿರಾಟ್ ಕೊಹ್ಲಿ ಕೇವಲ 16 ರನ್‌ಗಳಿಗೆ ಔಟಾದರು.

ಇದೇ ವೇಳೆ ಆಸ್ಟ್ರೇಲಿಯಾದ ಮಾಜಿ ನಾಯಕ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರು ವಿರಾಟ್ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾ ಅವರನ್ನು ಎಲ್ಲಾ ಸ್ವರೂಪಗಳಲ್ಲಿ ನಾಯಕರನ್ನಾಗಿ ಮಾಡಲು ಬಿಸಿಸಿಐ ಸರಿಯಾದ ಆಯ್ಕೆ ಮಾಡಿದೆ ಎಂದು ತಿಳಿಸಿದ್ದಾರೆ.

ಭಾರತ ತಂಡ ತವರು ನೆಲದಲ್ಲಿ ಐಸಿಸಿ ವಿಶ್ವಕಪ್ ಪಂದ್ಯಾವಳಿ ಆಡುವುದರಿಂದ ಪ್ರಸ್ತುತ ನಾಯಕ ರೋಹಿತ್ ಶರ್ಮಾ ಅವರನ್ನು ಆದರ್ಶ ನಾಯಕ ಎಂದು ರಿಕಿ ಪಾಂಟಿಂಗ್ ಕರೆದಿದ್ದಾರೆ. ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್‌ನೊಂದಿಗೆ ತಮ್ಮ ಪ್ರಮುಖ ಪಾತ್ರದ ಮೇಲೆ ಕೇಂದ್ರೀಕರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದಿದ್ದಾರೆ.

ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಇದುವರೆಗೆ 7 ಏಕದಿನ ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 64ರ ಅದ್ಭುತ ಸರಾಸರಿಯಲ್ಲಿ 448 ರನ್ ಬಾರಿಸಿದ್ದಾರೆ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ತಲಾ ಒಂದೊಂದು ಶತಕ ಸಿಡಿಸಿದ್ದಾರೆ.

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 2017ರಲ್ಲಿ ಇಂಗ್ಲೆಂಡ್ ವಿರುದ್ಧ 350 ರನ್‌ಗಳ ಬೃಹತ್ ಚೇಸಿಂಗ್‌ನಲ್ಲಿ 122 ರನ್ ಗಳಿಸಿದ್ದರು. ಆಗ ಭಾರತವು ನಾಲ್ಕು ವಿಕೆಟ್‌ಗಳನ್ನು ಆರಂಭದಲ್ಲಿ ಕಳೆದುಕೊಂಡಿತು ಮತ್ತು ಕೇದಾರ್ ಜಾಧವ್ ಅವರನ್ನು ಜೊತೆಗಾರರನ್ನಾಗಿ ಹೊಂದಿದ್ದರು, ಜಾಧವ್ ಸಹ ಭರ್ಜರಿ ಶತಕ ಸಿಡಿಸಿದ್ದರು.

ಇನ್ನು ವೆಸ್ಟ್ ಇಂಡೀಸ್ ವಿರುದ್ಧ 2018ರಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದರೂ, ಭಾರತ ಸೋಲಿನ ಫಲಿತಾಂಶ ಪಡೆದುಕೊಂಡಿತು. ಅದೇನೇ ಇದ್ದರೂ ಪುಣೆ ಮೈದಾನದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಅಂಕಿಅಂಶ ಹೊಂದಿದ್ದು, ಬಾಂಗ್ಲಾದೇಶ ವಿರುದ್ಧದ ಮುಂದಿನ ವಿಶ್ವಕಪ್ ಪಂದ್ಯದಲ್ಲಿ ಮತ್ತೊಮ್ಮೆ ಘರ್ಜಿಸಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳು ನಂಬಿದ್ದಾರೆ.

Story first published: Wednesday, October 18, 2023, 10:18 [IST]
Other articles published on Oct 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+