ಇದೇ ಅಕ್ಟೋಬರ್ 5ರಿಂದ ನವೆಂಬರ್ 19 ರವರೆಗೆ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಭಾರತ ಆತಿಥ್ಯ ವಹಿಸಲಿದೆ. ಅತಿ ಶೀಘ್ರದಲ್ಲೇ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದೆಂದು ಐಸಿಸಿ ಸಿಇಒ ತಿಳಿಸಿದ್ದಾರೆ.
ಮುಖ್ಯ ಪಂದ್ಯಾವಳಿಗೂ ಮುನ್ನ 2023ರ ಐಸಿಸಿ ಏಕದಿನ ವಿಶ್ವಕಪ್ ಅರ್ಹತಾ ಪಂದ್ಯಗಳು ಜೂನ್ 18ರಂದು ಪ್ರಾರಂಭವಾಲಿದ್ದು, ಜುಲೈ 9ರಂದು ಫೈನಲ್ ಪಂದ್ಯ ನಡೆಯಲಿದೆ.

ಹತ್ತು ತಂಡಗಳು ಭಾಗವಹಿಸುವ ಪಂದ್ಯಾವಳಿಯನ್ನು ಜಿಂಬಾಬ್ವೆ ಆಯೋಜಿಸುತ್ತಿದೆ. ಅರ್ಹತಾ ಸುತ್ತಿನ ಪಂದ್ಯಾವಳಿಯ ಅಗ್ರ ಎರಡು ತಂಡಗಳು ಭಾರತದಲ್ಲಿ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲಿವೆ.
ಗಮನಾರ್ಹ ಅಂಶವೆಂದರೆ, ಆತಿಥೇಯ ಜಿಂಬಾಬ್ವೆ ತಂಡವು ಶ್ರೀಲಂಕಾ, ನೆದರ್ಲ್ಯಾಂಡ್ಸ್, ಓಮನ್ ಮತ್ತು ಯುಎಇ ತಂಡಗಳೊಂದಿಗೆ ಎ ಗುಂಪಿನಲ್ಲಿದೆ. ಹತ್ತು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ಇನ್ನು ಬಿ ಗುಂಪಿನಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್, ಐರ್ಲೆಂಡ್, ನೇಪಾಳ, ಸ್ಕಾಟ್ಲೆಂಡ್ ಮತ್ತು ಯುಎಸ್ಎ ತಂಡಗಳು ಸೇರಿವೆ.
ಕ್ರಿಕೆಟ್ ವೀಕ್ಷಕರು ಫ್ಯಾನ್‌ಕೋಡ್‌ನಲ್ಲಿ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಲೈವ್ ಆಗಿ ವೀಕ್ಷಿಸಬಹುದು.
ಐರ್ಲೆಂಡ್: ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಮಾರ್ಕ್ ಅಡೇರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಗ್ರಹಾಂ ಹ್ಯೂಮ್, ಜೋಶ್ ಲಿಟಲ್, ಆಂಡಿ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಪಿಜೆ ಮೂರ್, ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಬೆನ್ ವೈಟ್, ಕ್ರೇಗ್ ಯಂಗ್.
ನೇಪಾಳ: ರೋಹಿತ್ ಪೌಡೆಲ್ (ನಾಯಕ), ಕುಶಾಲ್ ಭುರ್ಟೆಲ್, ಆಸಿಫ್ ಶೇಖ್, ಜ್ಞಾನೇಂದ್ರ ಮಲ್ಲಾ, ಕುಶಾಲ್ ಮಲ್ಲಾ, ಆರಿಫ್ ಶೇಖ್, ದೀಪೇಂದ್ರ ಸಿಂಗ್ ಐರಿ, ಗುಲ್ಸನ್ ಝಾ, ಸೋಂಪಾಲ್ ಕಾಮಿ, ಕರಣ್ ಕೆಸಿ, ಸಂದೀಪ್ ಲಮಿಚಾನೆ, ಭೀಮ್ ಶರ್ಕಿ, ಲಲಿತ್ ರಾಜಬಂಶಿ, ಪ್ರತೀಶ್ ಜೆಸಿ, ಅರ್ಜುನ್ ಸೌದ್, ಕಿಶೋರ್ ಮಹತೋ.
ನೆದರ್ಲ್ಯಾಂಡ್ಸ್: ಸ್ಕಾಟ್ ಎಡ್ವರ್ಡ್ಸ್ (ನಾಯಕ), ಮ್ಯಾಕ್ಸ್ ಒ'ಡೌಡ್, ಲೋಗನ್ ವ್ಯಾನ್ ಬೀಕ್, ವಿಕ್ರಮ್ ಸಿಂಗ್, ಆರ್ಯನ್ ದತ್, ವಿವ್ ಕಿಂಗ್ಮಾ, ಬಾಸ್ ಡಿ ಲೀಡೆ, ನೋಹ್ ಕ್ರೋಸ್, ರಯಾನ್ ಕ್ಲೈನ್, ತೇಜಾ ನಿಡಮನೂರು, ವೆಸ್ಲಿ ಬ್ಯಾರೆಸಿ, ಶರೀಜ್ ಅಹ್ಮದ್, ಕ್ಲೇಟನ್ ಫ್ಲಾಯ್ಡ್, ಮೈಕೆಲ್ ಲೆವಿಟ್, ಸಾಕಿಬ್ ಜುಲ್ಫಿಕರ್.
ಒಮನ್: ಜೀಶನ್ ಮಕ್ಸೂದ್ (ನಾಯಕ), ಅಕಿಬ್ ಇಲ್ಯಾಸ್ (ಉಪ ನಾಯಕ), ಜತೀಂದರ್ ಸಿಂಗ್, ಕಶ್ಯಪ್ ಪ್ರಜಾಪತಿ, ಶೋಯೆಬ್ ಖಾನ್, ಮೊಹಮ್ಮದ್ ನದೀಮ್, ಸಂದೀಪ್ ಗೌಡ್, ಅಯಾನ್ ಖಾನ್, ಸೂರಜ್ ಕುಮಾರ್, ಅದೀಲ್ ಶಫೀಕ್, ನಸೀಮ್ ಖುಷಿ, ಬಿಲಾಲ್ ಖಾನ್, ಕಲೀಮುಲ್ಲಾ, ಫಯಾಜ್ ಬಟ್, ಜೇ ಒಡೆದ್ರಾ, ಸಮಯ್ ಶ್ರೀವಾಸ್ತವ್, ರಫಿಯುಲ್ಲಾ.
ಸ್ಕಾಟ್ಲೆಂಡ್: ರಿಚಿ ಬೆರಿಂಗ್ಟನ್ (ನಾಯಕ), ಮ್ಯಾಥ್ಯೂ ಕ್ರಾಸ್, ಅಲಾಸ್ಡೇರ್ ಇವಾನ್ಸ್, ಕ್ರಿಸ್ ಗ್ರೀವ್ಸ್, ಜ್ಯಾಕ್ ಜಾರ್ವಿಸ್, ಮೈಕೆಲ್ ಲೀಸ್ಕ್, ಟಾಮ್ ಮ್ಯಾಕಿಂತೋಷ್, ಕ್ರಿಸ್ ಮ್ಯಾಕ್‌ಬ್ರೈಡ್, ಬ್ರಾಂಡನ್ ಮೆಕ್‌ಮುಲ್ಲೆನ್, ಜಾರ್ಜ್ ಮುನ್ಸಿ, ಆಡ್ರಿಯನ್ ನೀಲ್, ಸಫ್ಯಾನ್ ಷರೀಫ್, ಕ್ರಿಸ್ ಸೋಲ್, ಹಮ್ಜಾ ತಾಹಿರ್, ಮಾರ್ಕ್ ವ್ಯಾಟ್.
ಶ್ರೀಲಂಕಾ: ದಸುನ್ ಶನಕ (ನಾಯಕ), ಕುಸಲ್ ಮೆಂಡಿಸ್ (ಉಪ ನಾಯಕ & ವಿಕೆಟ್ ಕೀಪರ್), ದಿಮುತ್ ಕರುಣಾರತ್ನೆ, ಪಾತುಮ್ ನಿಸ್ಸಾಂಕ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಸದೀರ ಸಮರವಿಕ್ರಮ (ವಿಕೆಟ್ ಕೀಪರ್), ವನಿಂದು ಹಸರಂಗ, ಚಾಮಿಕ ಕರುಣಾರತ್ನ, ದುಷ್ಮಂತ ಚಮೀರ, ಕಸುನ್ ರಜಿತ, ಲಹಿರು ಕುಮಾರ, ಮಹೇಶ ತೀಕ್ಷಣ, ಮತೀಶ ಪತಿರಣ, ದುಶನ್ ಹೇಮಂತ.
ಯುಎಸ್ಎ: ಮೊನಾಂಕ್ ಪಟೇಲ್ (ನಾಯಕ), ಆರನ್ ಜೋನ್ಸ್ (ಉಪ ನಾಯಕ), ಅಭಿಷೇಕ್ ಪರಾಡ್ಕರ್, ಅಲಿ ಖಾನ್, ಗಜಾನಂದ್ ಸಿಂಗ್, ಜಸ್ದೀಪ್ ಸಿಂಗ್, ಕೈಲ್ ಫಿಲಿಪ್, ನಿಸರ್ಗ್ ಪಟೇಲ್, ನೋಸ್ತುಶ್ ಕೆಂಜಿಗೆ, ಸೈತೇಜ ಮುಕ್ಕಮಲ್ಲ, ಸೌರಭ್ ನೇತ್ರವಲ್ಕರ್, ಶಯಾನ್ ಜಹಾಂಗೀರ್, ಸ್ಟೀವನ್ ಟೇಲರ್, ಸುಶಾಂತ್ ಮೊದಾನಿ, ಉಸ್ಮಾನ್ ರಫೀಕ್.
ವೆಸ್ಟ್ ಇಂಡೀಸ್: ಶಾಯ್ ಹೋಪ್ (ನಾಯಕ), ರೋವ್‌ಮನ್ ಪೊವೆಲ್ (ಉಪ ನಾಯಕ), ಶಮರ್ ಬ್ರೂಕ್ಸ್, ಯಾನಿಕ್ ಕ್ಯಾರಿಯಾ, ಕೀಸಿ ಕಾರ್ಟಿ, ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ಕೀಮೋ ಪಾಲ್, ನಿಕೋಲಸ್ ಪೂರನ್, ರೊಮಾರಿಯೋ ಶೆಫರ್ಡ್
ಯುಎಇ ಇನ್ನು ತಂಡವನ್ನು ಘೋಷಿಸಿಲ್ಲ.