For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಫೈನಲ್‌: 2 ಬಾರಿ ಚಾಂಪಿಯನ್, 3 ಬಾರಿ ಫೈನಲ್‌ ಪ್ರವೇಶ: ಆದರೂ ಸಾಧ್ಯವಾಗಿಲ್ಲ ಇದೊಂದು ಮೈಲಿಗಲ್ಲು!!

By ನಾಗೇಶ್

ಐಸಿಸಿ ಏಕದಿನ ವಿಶ್ವಕಪ್ ಸರಣಿ ಕೊನೆಯ ಹಂತಕ್ಕೆ ಬಂದು ನಿಂತಿದೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಫೈನಲ್ ಪಂದ್ಯದಲ್ಲಿ ಭಾರತ, ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎಂದು ಪರಿಗಣಿಸಲಾಗಿದೆ. ಅಲ್ಲದೆ ಪ್ರಸಕ್ತ ಟೂರ್ನಿಯಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದೆ. ಹಾಗಿದ್ದರೆ ಈವರೆಗಿನ ವಿಶ್ವಕಪ್ ಟೂರ್ನಿಯ ಫೈನಲ್ ನಲ್ಲಿ ಶತಕ ಬಾರಿಸಿದ ಆಟಗಾರರ ಪಟ್ಟಿಯ ದೊಡ್ಡದಿದೆ. ಆದರೆ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಯಾವುದೇ ಒಬ್ಬ ಆಟಗಾರ ಶತಕ ಬಾರಿಸದೆ ಇರುವುದು ಶತಕದ ಬರ ಅನುಭವಿಸುತ್ತಿದೆ.

ಟೀಮ್ ಇಂಡಿಯಾ ಪರ ಏಕದಿನ ವಿಶ್ವಕಪ್ ನಲ್ಲಿನಲ್ಲಿ ಗರಿಷ್ಠ ರನ್ ಸಾಧನೆ ಮಾಡಿದ ಆಟಗಾರ ಎಂಬ ಹೆಗ್ಗಳಿಕೆ ಟೀಮ್ ಇಂಡಿಯಾದ ಮಾಜಿ ಓಪನರ್ ಗೌತಮ್ ಗಂಭೀರ್ ಅವರಿಗೆ ಸಲ್ಲುತ್ತದೆ. 2011ರ ಏಕದಿನ ವಿಶ್ವಕಪ್‌ನಲ್ಲಿ ಗೌತಮ್ ಗಂಭೀರ್ ಫೈನಲ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಈ ಪಂದ್ಯದಲ್ಲಿ ಗೌತಿ 97 ರನ್ ಗಳ ಬಿಗ್ ಇನಿಂಗ್ಸ್ ಕಟ್ಟಿ ತಂಡಕ್ಕೆ ನೆರವಾಗಿದ್ದರು. ಇವರನ್ನು ಹೊರತು ಪಡಿಸಿದರೆ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಜೇಯ 91 ರನ್ ಬಾರಿಸಿದ್ದರು.

World cup: 6 centuries registered in ODI world cup finals, But India not yet hit a hundred

ಒಟ್ಟಾರೆ ಏಕದಿನ ವಿಶ್ವಕಪ್ ನಲ್ಲಿ ಟೀಮ್ಇಂಡಿಯಾದಿಂದ ಇನ್ನು ಶತಕದ ಸಾಧನೆ ಮಾಡಿಲ್ಲ. ಆದರೆ ಬೇರೆ ದೇಶದ ಆಟಗಾರರು ವಿಶ್ವಕಪ್ ಫೈನಲ್ ನಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ. ವಿಶ್ವಕಪ್ ಫೈನಲ್ ನಲ್ಲಿ ಮೊದಲ ಶತಕವು 1975ರಲ್ಲಿ ದಾಖಲಾಗಿತ್ತು. ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಟಗಾರ ಕ್ಲೈವ್ ಲೈಡ್ ಭರ್ಜರಿ ಪ್ರದರ್ಶನ ನೀಡುವ ಮೂಲಕ ಅಬ್ಬರಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಕ್ಲೈವ್ 102ರನ್ ಬಾರಿಸಿದ್ದರು.

1979ರ ಫೈನಲ್ ಪಂದ್ಯದಲ್ಲೂ ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಟಗಾರ ವಿವಿ ರಿರ್ಚಡ್ಸ್ ಶತಕ ಬಾರಿಸಿದ್ದರು. ಇಂಗ್ಲೆಂಡ್ ವಿರುದ್ಧ ಮಹತ್ವದ ಪಂದ್ಯದಲ್ಲಿ ರಿರ್ಚಡ್ಸ್ 138 ರನ್ ಬಾರಿಸಿದ್ದರು. ಇನ್ನು 1996ರ ಫೈನಲ್ ನಲ್ಲಿ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಲಂಕಾದ ಅರವಿಂದ್ ಡಿಸಿಲ್ವಾ 107 ರನ್ ಬಾರಿಸಿ ಆರ್ಭಟಿಸಿದ್ದರು.

ಭಾರತ ದೇಶ ಎಂದೂ ಮರೆಯದ ವಿಶ್ವಕಪ್ ಫೈನಲ್ ನಲ್ಲಿ ಒಂದಾದ 2003ರ ವಿಶ್ವಕಪ್ ಫೈನಲ್. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ರಿಕ್ಕಿ ಪಾಂಟಿಂಗ್ 140ರನ್ ಸಿಡಿಸಿದ್ದರು. ಇನ್ನು ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸಮನ್ ಆಡಂ ಗಿಲ್ ಕ್ರಿಸ್ಟ್ ಶ್ರೀಲಂಕಾ 149 ರನ್ ಬಾರಿಸಿ ತಂಡದ ಪರ ಅಬ್ಬರಿಸಿದ್ದರು.

2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಶ್ರೀಲಂಕಾದ ಮಹೇಲ್ ಜಯವರ್ಧನೆ 103 ರನ್ ಬಾರಿಸಿ ಆರ್ಭಟಿಸಿದ್ದರು

Story first published: Saturday, November 18, 2023, 9:23 [IST]
Other articles published on Nov 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+