For Quick Alerts
ALLOW NOTIFICATIONS  
For Daily Alerts
 

World cup: ಎಬಿಡಿ ಹೆಸರಿಸಿದ ಟೀಮ್ ಆಫ್ ದಿ ಟೂರ್ನಮೆಂಟ್‌ನಲ್ಲಿ ಐವರು ಭಾರತೀಯರು!!

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದರೂ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಮತ್ತೊಮ್ಮೆ ವಿಫಲವಾಗಿದೆ. ಫೈನಲ್ ಪಂದ್ಯದಲ್ಲಿ ಆಸ್ಟ್ರೆಲಿಯಾ ವಿರುದ್ಧ ಭಾರತ ಮುಗ್ಗರಿಸಿದ ಕಾರಣ ಭಾರತಕ್ಕೆ ಮತ್ತೊಮ್ಮೆ ಐಸಿಸಿ ಟೂರ್ನಿಯಲ್ಲಿ ನಿರಾಸೆ ಉಂಟಾಗಿದೆ. ಟೂರ್ನಿಯ ಬಗ್ಗೆ ವಿಶ್ಲೇಷಣೆಗಳು, ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಆಟಗಾರರ ಬಗ್ಗೆ ಗುಣಗಾನಗಳು ಸದ್ಯ ಜೋರಾಗಿ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನಿಡಿರುವ ಆಟಗಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ 'ಟೀಮ್ ಆಫ್ ದಿ ಟೂರ್ನಮಂಟ್' ಹೆಸರಿಸಿದ್ದಾರೆ. ಈ ತಂಡದಲ್ಲಿ ಭಾರತದ ಐವರು ಕ್ರಿಕೆಟಿಗರು ಸ್ಥಾನವನ್ನು ಪಡೆದುಕೊಂಡಿರುವುದು ವಿಶೇಷ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಐಯ್ಯರ್, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.

World Cup: AB de Villiers picks team of the tournament with 5 Indian players

ಎಬಿ ಡಿವಿಲಿಯರ್ಸ್ ಹೆಸರಿಸಿರುವ ಈ ತಂಡದಲ್ಲಿ ಆರಂಭಿಕರಾಗಿ ಆಸ್ಟ್ರೇಲಿಯಾದ ಆಟಗಾರ ಫೈನಲ್ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿರುವ ಟ್ರಾವಿಸ್ ಹೆಡ್ ಹಾಗೂ ಭಾರತದ ನಾಯಕ ರೋಹಿತ್ ಶರ್ಮಾಗೆ ಸ್ಥಾನ ನೀಡಲಾಗಿದೆ. ರೋಹಿತ್ ಟೂರ್ನಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು ಒಟ್ಟಾರೆಯಾಗಿ 598 ರನ್‌ಗಳನ್ನು ಗಳಿಸಿದ್ದರು.

ಮೂರನೇ ಕ್ರಮಾಂಕದಲ್ಲಿ ಈ ವಶ್ವಕಪ್‌ನಲ್ಲಿ 700ಕ್ಕೂ ಅಧಿಕ ರನ್‌ಗಳಿಸಿ ವಿಶ್ವಕಪ್ ಇತಿಹಾಸದಲ್ಲಿ ಒಂದು ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆ ಬರೆದಿರುವ ಭಾರತದ ವಿರಾಟ್ ಕೊಹ್ಲಿಗೆ ಅವಕಾಶ ನೀಡಲಾಗಿದೆ. ಇನ್ನು ನ್ಯೂಜಿಲೆಂಡ್‌ನ ಯುವ ಸೆನ್ಸೇಶನಲ್ ಆಟಗಾರ ರಚಿನ್ ರವೀಂದ್ರ ನಾಲ್ಕನೇ ಕ್ರಮಾಂಕದಲ್ಲಿ ಹಾಗೂ ಶ್ರೇಯಸ್ ಐಯ್ಯರ್ ಅವರನ್ನು ಐದನೇ ಕ್ರಮಾಂಕದಲ್ಲಿ ಹೆಸರಿಸಿದ್ದಾರೆ.

ಇನ್ನು ಆರನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಏಳನೇ ಕ್ರಮಾಂಕದಲ್ಲಿ ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ವೇಗದ ಬೌಲಿಂಗ್ ವಿಭಾಗದಲ್ಲಿ ಶ್ರೀಲಂಕಾದ ದಿಲ್ಶನ್ ಮಧುಶಂಕ ದಕ್ಷಿಣ ಆಫ್ರಿಕಾದ ಗೆಲಾಲ್ಡ್ ಕೊಯೆಟ್ಜೀ ಹಾಗೂ ಟೀಮ್ ಇಂಡಿಯಾದ ಮೊಹಮ್ಮದ್ ಶಮಿಗೆ ಸ್ಥಾನ ನೀಡಿದ್ದಾರೆ ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್.

ಎಬಿ ಡಿವಿಲಿಯರ್ಸ್ ಹೆಸರಿಸಿದ ಟೀಮ್ ಆಫ್ ದಿ ಟೂರ್ನಮೆಂಟ್ ಹೀಗಿದೆ:
ಟ್ರಾವಿಸ್ ಹೆಡ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಚಿನ್ ರವೀಂದ್ರ, ಶ್ರೇಯಸ್ ಅಯ್ಯರ್, ಗ್ಲೆನ್ ಮ್ಯಾಕ್ಸ್‌ವೆಲ್, ರವೀಂದ್ರ ಜಡೇಜಾ, ಆಡಮ್ ಝಂಪಾ, ದಿಲ್ಶನ್ ಮಧುಶಂಕ, ಜೆರಾಲ್ಡ್ ಕೋಟ್ಜಿ, ಮೊಹಮ್ಮದ್ ಶಮಿ.

Story first published: Tuesday, November 21, 2023, 20:46 [IST]
Other articles published on Nov 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+