Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ 2019: ಇಂಗ್ಲೆಂಡ್‌ನ ಜೋಫ್ರಾ ಆರ್ಚರ್, ಜೇಸನ್ ರಾಯ್‌ಗೆ ದಂಡ

World Cup: Archer and Roy found guilty of breaching the ICC Code of Conduct

ಲಂಡನ್, ಜೂನ್ 4: ಐಸಿಸಿ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಮತ್ತು ಆರಂಭಿಕ ಬ್ಯಾಟ್ಸ್ಮನ್ ಜೇಸನ್ ರಾಯ್‌ಗೆ ಐಸಿಸಿಯು ಪಂದ್ಯದ ಸಂಭಾವನೆಯ ಶೇ. 15ರಷ್ಟು ದಂಡ ವಿಧಿಸಿದೆ. ಸೋಮವಾರ (ಜೂನ್ 3) ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಇಂಗ್ಲೆಂಡ್-ಪಾಕಿಸ್ತಾನ ವಿಶ್ವಕಪ್ ಪಂದ್ಯದಲ್ಲಿ ಇಬ್ಬರೂ ಆಟಗಾರರು ನಿಯಮ ಉಲ್ಲಂಘಿಸಿರುವುದಾಗಿ ಐಸಿಸಿ ಹೇಳಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ನಿಧಾನಗತಿಯ ಓವರ್‌ಗಾಗಿ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್‌ಗೂ ಇದೇ ಪಂದ್ಯದಲ್ಲಿ ದಂಡ ವಿಧಿಸಲಾಗಿದೆ. ಪಾಕಿಸ್ತಾನ ಇನ್ನಿಂಗ್ಸ್‌ನ 14ನೇ ಓವರ್‌ನಲ್ಲಿ ರಾಯ್ ಮಿಸ್ ಫೀಲ್ಡಿಂಗ್ ಮಾಡಿ ಬಳಿಕ ಕೆಟ್ಟದಾಗಿ ಮಾತನಾಡಿದ್ದು ಅಂಪೈರ್‌ಗೆ ಕೇಳಿಸಿತ್ತು. ಇದಕ್ಕಾಗಿ ರಾಯ್‌ಗೆ ಪಂದ್ಯ ಸಂಭಾವನೆಯ 15 ಶೇ. ದಂಡದ ಜೊತೆಗೆ ಒಂದು ನಕಾರಾತ್ಮದ ಅಂಕವನ್ನೂ ನೀಡಲಾಗಿದೆ.

ಇನ್ನು ಜೋಫ್ರಾ ಆರ್ಚರ್ ಅಂಪೈರ್ ತೀರ್ಮಾನಕ್ಕೆ ಅಸಮ್ಮತಿ ತೋರುವ ನಡೆ ಪ್ರದರ್ಶಿಸಿದ್ದರು. ಇದೂ ಐಸಿಸಿ ನಿಯಮ ಉಲ್ಲಂಘಿಸಿದಂತೆ. ಹೀಗಾಗಿ ಅವರಿಗೂ ದಂಡ ವಿಧಿಸಿರುವುದಾಗಿ ಐಸಿಸಿ ತಿಳಿಸಿದೆ. ಈ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ತಂಡ 14 ರನ್ ಗೆಲುವನ್ನಾಚರಿಸಿತ್ತು.

ವಿಶ್ವಕಪ್ 2019ರ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ವಿರುದ್ಧ ಕೇವಲ 105 ರನ್ ಬಾರಿಸಿ ಅತೀ ಕಡಿಮೆ ತಂಡದ ರನ್‌ಗಾಗಿ ಗುರುತಿಸಿಕೊಂಡಿತ್ತಲ್ಲದೆ, 7 ವಿಕೆಟ್‌ಗಳಿಂದ ಹೀನಾಯ ಸೋಲೂ ಅನುಭವಿಸಿತ್ತು. ಆದರೆ ಇಂಗ್ಲೆಂಡ್ ಎದುರು ತಿರುಗಿದ್ದ ಪಾಕ್ ಆಡಿರುವ 2ರಲ್ಲಿ ಒಂದು ಜಯ ದಾಖಲಿಸಿದೆ.

Story first published: Tuesday, June 4, 2019, 15:31 [IST]
Other articles published on Jun 4, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+