For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಹೀನಾಯ ಸೋಲಿನ ಬಳಿಕ ತಿರುಗಿಬೀಳಲು ಆಸಿಸ್ ಯೋಜನೆ ಸಿದ್ಧ: ನಾಯಕ ಪ್ಯಾಟ್ ಕಮ್ಮಿನ್ಸ್ ಹೇಳಿದ್ದೇನು?

ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಸತತ ಸೋಲಿನ ಆಘಾತಕ್ಕೆ ಒಳಗಾಗಿದೆ. ಮೊದಲಿಗೆ ಭಾರತದ ವಿರುದ್ಧ ಸೋಲು ಕಂಡಿರುವ ಆಸಿಸ್ ಪಡೆ ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿಯೂ ಎಲ್ಲಾ ವಿಭಾಗದಲ್ಲಿಯೂ ಭಾರೀ ಹೀನಾಯ ಪ್ರದರ್ಶನ ನೀಡಿದ್ದು ಬರೊಬ್ಬರಿ 134 ರನ್‌ಗಳ ಅಂತರದ ಸೋಲು ಅನುಭವಿಸಿದೆ. ಈ ಸೋಲಿನ ಬಗ್ಗೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಪ್ರೆತಿಕ್ರಿಯೆ ನೀಡಿದ್ದಾರೆ.

ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 134 ರನ್‌ಗಳ ಸೋಲಿನ ನಂತರ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಮಾತನಾಡುತ್ತಾ ಆಸ್ಟ್ರೇಲುಯಾ ತಂಡದ ಗೆಲುವಿಗಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. 1992ರ ನಂತರ ನಡೆದ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತನ್ನ ಆರಂಭಿಕ ಎರಡು ಪಂದ್ಯಗಳಲ್ಲಿ ಸೋತಿರುವುದು ಇದೇ ಮೊದಲು.

World Cup: Australia skipper Pat Cummins reaction after 134 runs defeat against South Africa

"ನನ್ನ ಪ್ರಕಾರ ಕ್ವಿಂಟನ್ ಬಹಳ ಅದ್ಭುತವಾಗಿ ಬ್ಯಾಟಿಂಗ್ ನಡೆಸಿದರು. ಅವರನ್ನು ಔಟ್ ಮಾಡಲು ನಮಗೆ ಅವಕಾಶವೇ ದೊರೆಯಲಿಲ್ಲ. ಆದರೆ ಅವರಿದ್ಧ ಸ್ಥಿತಿಯಲ್ಲಿ ನಾನು ಅವರನ್ನು 310 ರನ್‌ಗಳಿಗೆ ಆಲೌಟ್ ಮಾಡಿದ್ದು ಖುಷಿ ನೀಡಿದೆ. ಅದನ್ನು ನಾನು ಬೆನ್ನಟ್ಟಬಹುದು ಎನಿಸಿತ್ತು. ಆದರೆ ಅವರ ಬೌಲರ್‌ಗಳ ನಮ್ಮ ವಿರುದ್ಧದ ಈ ಪಂದ್ಯಕ್ಕಾಗಿ ಅದ್ಭುತವಾಗಿ ಸಿದ್ಧವಾಗಿದ್ದರು. ಅವರ ಬೌಲರ್‌ಗಳು ಅದ್ಭುತವಾಗಿ ಪ್ರದರ್ಶನ ನೀಡಿದರು. ಲೈಟ್‌ನ ಅಡಿಯಲ್ಲಿ ಅದು ಬಹಳಷ್ಟು ಪರಿಣಾಮಕಾರಿಯಾಗಿತ್ತು" ಎಂದಿದ್ದಾರೆ ಪ್ಯಾಟ್ ಕಮ್ಮಿನ್ಸ್.

ಇನ್ನು ಈ ಸಂದರ್ಭದಲ್ಲಿ ಮೊದಲಿಗೆ ಆಸ್ಟ್ರೇಲಿಯಾ ಬ್ಯಾಟಿಂಗ್ ನಡೆಸಿದ್ದರೆ ಫಲಿತಾಂಶ ಬೇರೆಯಾಗಿರುತ್ತಿತ್ತಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. "ಅದನ್ನು ಹೇಳುವುದು ಬಹಳ ಕಷ್ಟ. ಈ ಟೂರ್ನಮೆಂಟ್‌ಲ್ಲಿ ನಾವು ಪೈಪೋಟಿ ನೀಡಬೇಕಿದ್ದರೆ ನಮ್ಮ ಗೆಲುವಿಗಾಗಿ ಹೊಸ ದಾರಿಗಳನ್ನು ಕಂಡುಕೊಳ್ಳಬೇಕಿದೆ. ಅದಕ್ಕಾಗಿ ನಾವು ಮೊದಲು ಬ್ಯಾಟಿಂಗ್ ಮಾಡುತ್ತೇವಾ ಅಥವಾ ಎರಡನೇಯದಾಗಿ ಬ್ಯಾಟಿಂಗ್ ನಡೆಸುತ್ತೇವಾ ಎನ್ನುವುದು ಮುಖ್ಯವಾಗುವುದಿಲ್ಲ" ಎಂದಿದ್ದಾರೆ ಆಸಿಸ್ ನಾಯಕ.

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಬೆಂಚ್: ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಸೀನ್ ಅಬಾಟ್, ಟ್ರಾವಿಸ್ ಹೆಡ್

ದಕ್ಷಿಣ ಆಫ್ರಿಕಾ ಆಡುವ ಬಳಗ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಕಗಿಸೊ ರಬಾಡ, ತಬ್ರೈಜ್ ಶಮ್ಸಿ
ಬೆಂಚ್: ಜೆರಾಲ್ಡ್ ಕೋಟ್ಜಿ, ಲಿಜಾಡ್ ವಿಲಿಯಮ್ಸ್, ರೀಜಾ ಹೆಂಡ್ರಿಕ್ಸ್, ಆಂಡಿಲ್ ಫೆಹ್ಲುಕ್ವಾಯೊ

Story first published: Friday, October 13, 2023, 8:54 [IST]
Other articles published on Oct 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+