ವಿಶ್ವಕಪ್: ವಿಶೇಷ ದಾಖಲೆ ಬರೆಯಲು ವಿರಾಟ್ ಕೊಹ್ಲಿ ಬಳಗ ಸಜ್ಜು

ಸೌತಾಂಪ್ಟನ್, ಜೂನ್ 4: ಅಂತೂ ಭಾರತ ಕ್ರಿಕೆಟ್ ತಂಡ 2019ರ ವಿಶ್ವಕಪ್ ಸ್ಪರ್ಧೆ ಆರಂಭಿಸಲು ಇನ್ನೊಂದೇ ದಿನ ಬಾಕಿ ಉಳಿದಿದೆ. ಜೂನ್ 5ರಂದು ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಅತ್ತ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಎರಡೂ ಪಂದ್ಯಗಳನ್ನೂ ಸೋತು ಒತ್ತಡದಲ್ಲಿದೆ.
ಭಾರತ vs ದಕ್ಷಿಣ ಆಫ್ರಿಕಾ ಪಂದ್ಯ, ಜೂನ್ 5, Live ಸ್ಕೋರ್‌ಕಾರ್ಡ್
ಹಾಗಂತ ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಪ್ರೋಟಿಯಾಸ್ ಅನ್ನು ಭಾರತ ಕಡೆಗಣಿಸುವಂತಿಲ್ಲ. ಯಾಕೆಂದರೆ ವಿಶ್ವಕಪ್ ನಲ್ಲಿ ಮೊದಲ ಪಂದ್ಯ ಆಡುತ್ತಿರುವ ವಿರಾಟ್ ಕೊಹ್ಲಿ ಬಳಗಕ್ಕೆ ಗೆಲುವು ಮುಖ್ಯವಾದುದು. ಜೊತೆಗೆ ಈ ಪಂದ್ಯ ಗೆದ್ದರೆ ಕೊಹ್ಲಿ ಹೆಸರಲ್ಲಿ ಮತ್ತೊಂದು ಮೈಲಿಗಲ್ಲೂ ಸ್ಥಾಪನೆಯಾಗಲಿದೆ.
{headtohead_cricket_3_6}
ಜೂನ್ 5ರಂದು ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದರೆ, ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 50ನೇ ಗೆಲುವು ದಾಖಲಿಸಿದ ಹಿರಿಮೆ ಭಾರತ ತಂಡದ್ದಾಗಲಿದೆ. ಭಾರತ ತಂಡವನ್ನು ಮುನ್ನಡೆಸಿ 49 ಪಂದ್ಯಗಳನ್ನು ಗೆದ್ದಿರುವ ಕೊಹ್ಲಿಗೆ 50 ಜಯ ದಾಖಲಿಸಲು ಇನ್ನೊಂದೇ ಗೆಲುವು ಬಾಕಿಯಿದೆ.
ಇದೇ ಪಂದ್ಯದಲ್ಲಿ ಕೊಹ್ಲಿಗೆ ಇನ್ನೊಂದು ದಾಖಲೆ ನಿರ್ಮಿಸಲೂ ಅವಕಾಶವಿದೆ. ಒಂದು ವೇಳೆ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ 157 ರನ್ ಬಾರಿಸಿದರೆ ಏಕದಿನದಲ್ಲಿ 11,000 ರನ್ ಪೂರೈಸಿದ ಭಾರತದ 3ನೇ ಆಟಗಾರರಾಗಿ ಮಿಂಚಲಿದ್ದಾರೆ. ಈ ಮೊದಲು ಸಚಿನ್ ತೆಂಡೂಲ್ಕರ್ (18426 ರನ್) ಮತ್ತು ಸೌರವ್ ಗಂಗೂಲಿ (11221 ರನ್) ಈ ಸಾಧನೆ ಮೆರೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications