ವಿಶ್ವಕಪ್: ಕಡಿಮೆ ಅಂತರದ ಸೋಲಾದರೂ ಪರಿಣಾಮ ದೊಡ್ಡದು
ಬೆಂಗಳೂರು, ಫೆ. 13 : ಆರಂಭದಿಂದಲೂ ಉತ್ತಮವಾಗಿ ಆಡಿಕೊಂಡು ಬಂದ ತಂಡ ಮಾಡಿಕೊಳ್ಳುವ ಚಿಕ್ಕ ಚಿಕ್ಕ ತಪ್ಪುಗಳಿಂದ ಅತೀ ಕಡಿಮೆ ಅಂತರದ (ರನ್) ಸೋಲು ಕಂಡು ಪಂದ್ಯಾವಳಿಯಿಂದಲೇ ಹೊರಗೆ ಬೀಳಬಹುದು. ಸೆಮಿಫೈನಲ್, ಕ್ವಾಟರ್ ಫೈನಲ್ ಹಂತದಲ್ಲಿ ಎದುರಾಗುವ ಇಂಥ ಸೋಲನ್ನು ಎಂಥ ತಂಡಗಳು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟ.
ಈ ಬಗೆಯ ಕಡಿಮೆ ಅಂತರದ ಗೆಲುವಿಗೆ ವಿಶ್ವಕಪ್ ಸಹ ಹೊರತಾಗಿಲ್ಲ. ಎಷ್ಟೋ ತಂಡಗಳ ಚಾಂಪಿಯನ್ ಕನಸಿಗೆ ಅಡ್ಡಿಯಾದ ಅಂಥ ಪಂದ್ಯಗಳ ಪಟ್ಟಿ ಇಲ್ಲಿದೆ. ಭಾರತದ ವಿರುದ್ಧ ಆಸ್ಟ್ರೇಲಿಯಾಕ್ಕೆ ಎರಡೆರಡು ಸಾರಿ ಕೇವಲ ಒಂದು ರನ್ ಜಯ ಸಿಕ್ಕಿರುವುದು ದಾಖಲೆಯಾಗಿ ಉಳಿದಿದೆ. ಚೇಸಿಂಗ್ ಮಾಡಿವ ತಂಡ ಉತ್ತಮವಾಗಿ ಆಡುತ್ತಿದ್ದರೂ ಕೊನೆ ಘಳಿಗೆಯಲ್ಲಿ ಮಾಡಿಕೊಳ್ಳುವ ಪ್ರಮಾದ ಇಂಥ ಸೋಲಿಗೆ ಕಾರಣವಾಗುತ್ತದೆ.

| ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | ಟಾಪ್ 10 ಬದಲಾವಣೆ
* ಭಾರತದ ವಿರುದ್ಧ ಆಸ್ಟ್ರೇಲಿಯಾಕ್ಕೆ 1 ರನ್ ಜಯ, ಚೆನ್ನೈ, 1987
* ಭಾರತದ ವಿರುದ್ಧ ಆಸ್ಟ್ರೇಲಿಯಾಕ್ಕೆ 1 ರನ್ ಜಯ, ಬ್ರಿಸ್ಬೇನ್, 1992
* ಇಂಗ್ಲೆಂಡ್ ವಿರುದ್ಧ ಶ್ರೀಲಂಕಾಕ್ಕೆ 2 ರನ್ ಜಯ, ನಾರ್ಥ ಸೌಂಡ್, 2007
* ಜಿಂಬಾಬ್ವೆ ವಿರುದ್ಧ ನ್ಯೂಜಿಲೆಂಡ್ ಗೆ 3 ರನ್ ಜಯ, ಹೈದ್ರಾಬಾದ್, 1987
* ಭಾರತದ ವಿರುದ್ಧ ಜಿಂಬಾಬ್ವೆಗೆ 3 ರನ್ ಜಯ, ಲೈಸೆಸ್ಟ್ ರ್, 1999
* ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್ ಗೆ 3 ರನ್ ಜಯ, ಕೇಪ್ ಟೌನ್, 2003
* ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾಕ್ಕೆ 5 ರನ್ ಜಯ, ಮೊಹಾಲಿ, 1996
* ವೆಸ್ಟ್ ಇಂಡೀಸ್ ವಿರುದ್ಧ ಶ್ರೀಲಂಕಾಕ್ಕೆ 6 ರನ್ ಜಯ, ಕೇಪ್ ಟೌನ್, 2003
* ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಗೆ 6 ರನ್ ಜಯ, ಕೇಪ್ ಟೌನ್, 2011
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications