Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ 2023: ಭಾರತ vs ಆಸ್ಟ್ರೇಲಿಯಾ ಫೈನಲ್ ಪಂದ್ಯಕ್ಕೆ ಅಂಫೈರ್ ಹಾಗೂ ಮ್ಯಾಚ್ ರೆಫ್ರಿ ಯಾರು ಗೊತ್ತಾ!!

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಫೈನಲ್ ಪಂದ್ಯದ ಮೇಲೆ ಜಗತ್ತಿನ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ. ಅತ್ಯಂತ ಪ್ರತಿಷ್ಠಿತ ಟೂರ್ನಿಯಲ್ಲಿ ಚಾಂಪಿಯನ್ ಎನಿಸುವ ತಮಡ ಯಾವುದು ಎನ್ನುವುದು ಎಲ್ಲರ ಕುತೂಹಲ. ಈ ಪಂದ್ಯದಲ್ಲಿ ಮೈದಾನಲ್ಲಿ ಕಾರ್ಯನಿರ್ವಹಿಸುವ ಅಂಫೈರ್‌ಗಳು ಹಾಗೂ ಮ್ಯಾಚ್ ರೆಫ್ರಿ ಯಾರು ಎನ್ನುವುದನ್ನು ಐಸಿಸಿ ಬಹಿರಂಗಪಡಿಸಿದೆ.

ಐಸಿಸಿ ಶುಕ್ರವಾರ ಈ ಬಾರಿಯ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವ ಅಂಫೈರ್‌ಗಳು ಹಾಗೂ ಮ್ಯಾಚ್ ರೆಫ್ರಿಯನ್ನು ಬಹಿಂಗಪಡಿಸಿದೆ. ರಿಚರ್ಡ್ ಕೆಟಲ್‌ಬೊರೊ, ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ಜೋಯೆಲ್ ವಿಲ್ಸನ್ ಈ ಪಂದ್ಯವನ್ನು ಸಂಪೂರ್ಣವಾಗಿ ನಿರ್ವಹಿಸಲಿದ್ದಾರೆ. ಜಿಂಬಾಬ್ವೆಯ ಆಂಡಿ ಪಿಕ್ರಾಫ್ಟ್ ಈ ಫೈನಲ್ ಪಂದ್ಯದ ರೆಫ್ರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

World Cup Final: ICC announced umpires and match referee to officiate in India vs Australia final match

ಇಂಗ್ಲೀಷ್ ಅಂಪೈರ್‌ಗಳಾದ ರಿಚರ್ಡ್ ಕೆಟಲ್‌ಬೊರೊ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್ ಆನ್‌ಫೀಲ್ಡ್ ಅಂಫೈರ್‌ಗಳಾಗಿ ಕಣಕ್ಕಿಳಿಯಲಿದ್ದಾರೆ. ಟ್ರಿನಿಡಾಡ್ ಮತ್ತು ಟೊಬಾಗೋದ ಜೋಯೆಲ್ ವಿಲ್ಸನ್ ಮೂರನೇ ಅಫೈರ್ ಜವಾಬ್ಧಾರಿ ವಹಿಸಿಕೊಳ್ಳಲಿದ್ದಾರೆ. ಜಿಂಬಾಬ್ವೆಯ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ ಆಂಡಿ ಪಿಕ್ರಾಫ್ಟ್ ಮ್ಯಾಚ್ ರೆಫ್ರಿಯಾಗಿರಲಿದ್ದಾರೆ. ಗಮನಾರ್ಹ ಅಂಶವೆಂದರೆ ಕೆಟಲ್‌ಬರೋ ಮತ್ತು ಇಲ್ಲಿಂಗ್‌ವರ್ತ್ ಇಬ್ಬರೂ ಕೂಡ 2019ರಲ್ಲಿ ಭಾರತ vs ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದಲ್ಲಿ ಅಂಫೈರ್‌ಗಳಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಜೋಯಲ್ ವಿಲ್ಸನ್ ಮೂರನೇ ಅಂಪೈರ್ ಮತ್ತು ಆಂಡಿ ಪೈಕ್ರಾಫ್ಟ್ ಮ್ಯಾಚ್ ರೆಫರಿಯಾಗಿದ್ದರು. ಇಲ್ಲಿಂಗ್‌ವರ್ತ್ ಅವರು ಹಿಂದಿನ ಎರಡು ODI ವಿಶ್ವಕಪ್‌ಗಳಲ್ಲಿ ಅಂಪೈರ್ ಪ್ಯಾನೆಲ್‌ಗಳ ಭಾಗವಾಗಿದ್ದರು ಮತ್ತು 1992ರ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿ ವುಇಶ್ವಕಪ್ ಅಭಿಯಾನ ಮುಗಿಸಿದ್ದ ಇಂಗ್ಲೆಂಡ್ ತಂಡದ ಭಾಗವಾಗಿದ್ದರು.

2015ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್‌ ಪಂದ್ಯದಲ್ಲಿ ಕೆಟಲ್‌ಬರೋ ಅಂಪೈರ್ ಆಗಿದ್ದರು. ಕೆಟಲ್‌ಬರೋ ಈ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ನೆದರ್‌ಲ್ಯಾಂಡ್ಸ್ ಪಂದ್ಯದ ಸಂದರ್ಭದಲ್ಲಿ ತಮ್ಮ 100ನೇ ಏಕದಿನ ಪಂದ್ಯವನ್ನು ನಿರ್ವಹಿಸಿದರು ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಅಂಪೈರ್‌ಗಳಲ್ಲಿ ಒಬ್ಬರಾಗಿ ಖ್ಯಾತಿಯನ್ನು ಗಳಿಸಿದ್ದಾರೆ.

Story first published: Friday, November 17, 2023, 22:47 [IST]
Other articles published on Nov 17, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+