For Quick Alerts
ALLOW NOTIFICATIONS  
For Daily Alerts
 

5 ಎಸೆತಗಳ ಅಂತರದಲ್ಲಿ 2 ದೊಡ್ಡ ವಿಕೆಟ್ ಕಳೆದುಕೊಂಡ ಭಾರತ: ವೈರಲ್ ಆಯ್ತು ವಿರಾಟ್ ಪ್ರತಿಕ್ರಿಯೆ!: ವಿಡಿಯೋ

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈನಲ್ ಪಂದ್ಯದಲ್ಲಿ ಮೂಖಾಮುಖಿಯಾಗಿದೆ. ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಫೈನಲ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಭಾರತ ತಂಡವನ್ನು ಮೊದಲಿಗೆ ಬ್ಯಾಟಿಂಗ್‌ಗೆ ಆಹ್ವಾನಿಸಿದೆ. ಟಾಸ್ ಸೋತ ಟೀಮ್ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಎಂದಿನಂತೆ ಸ್ಪೋಟಕ ಆರಂಭ ನೀಡಿದರು.

ಶುಬ್ಮನ್ ಗಿಲ್ ನಾಲ್ಕು ರನ್‌ಗಳಿಸಿ ವಿಕೆಟ್ ಕಳೆದುಕೊಳ್ಳುವ ಮೂಲಕ 30 ರನ್‌ಗಳಾಗುವಷ್ಟರಲ್ಲಿ ಟೀಮ್ ಇಂಡಿಯಾ ಮೊದಲ ಆಘಾತ ಅನುಭವಿಸಿತು. ಆದರೆ ನಂತರವೂ ನಾಯಕ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಜೊತೆಗೆ ಸೇರಿಕೊಂಡು ಅಬ್ಬರದ ಪ್ರದರ್ಶನ ಮುಂದುವರಿಸಿದರು. ಮೂರಿ ಸಿಕ್ಸರ್ ನಾಲ್ಕು ಬೌಂಡರಿ ಬಾರಿಸಿದ ರೋಹಿತ್ ಶರ್ಮಾ ಅರ್ಧ ಶತಕದ ಸನಿಹದಲ್ಲಿದ್ದರು.

World cup final: India lost 2 big wicket in 5 balls, Virat Kohli reaction goes viral

ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಓವರ್‌ನಲ್ಲಿ ಎರಡನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ರೋಹಿತ್ ಶರ್ಮಾ ಮೂರನೇ ಎಸೆತದಲ್ಲಿ ಬೌಂಡರಿ ಸಿಡಿಸಿದರು. ಆದರೆ ನಾಲ್ಕನೇ ಎಸೆತದಲ್ಲಿ ಮತ್ತೊಮ್ಮೆ ಮುನ್ನುಗ್ಗಿ ಬಾರಿಸಲು ಮುಂದಾದ ರೋಹಿತ್ ಈ ಎಸೆತದಲ್ಲಿ ಎಡವಿದರು. ರೋಹಿತ್ ಶರ್ಮಾ ಬ್ಯಾಟ್‌ನ ಅಂಚಿಗೆ ಬಡಿದ ಚೆಂಡು ಮೇಲಕ್ಕೆ ಹಾರಿತು. ಕವರ್‌ಪಾಯಿಂಟ್‌ನಿಂದ ಹಿಂದಕ್ಕೆ ಓಡಿದ ಟ್ರಾವಿಸ್ ಹೆಡ್ ಅಮೋಘ ಕ್ಯಾಚ್ ಪಡೆದರು. ಈ ಮೂಲಕ ಟೀಮ್ ಇಂಡಿಯಾ ನಾಯಕನ ವಿಕೆಟ್ ಕಬಳಿಸಿದರು.

1
1-2023

ಇದಾದ ನಾಲ್ಕನೇ ಎಸೆತದಲ್ಲಿಯೇ ಕ್ರೀಸ್‌ಗೆ ಆಗಮಿಸಿದ್ದ ಶ್ರೇಯಸ್ ಐಯ್ಯರ್ ಕೂಎ ವಿಕೆಟ್ ಕಳೆದುಕೊಂಡದರು. ನಾಯಕ ಪ್ಯಾಟ್ ಕಮ್ಮಿನ್ಸ್ ಎಸೆತ ಶ್ರೇಯಸ್ ಐಯ್ಯರ್ ಬ್ಯಾಟನ್ನು ಸವರಿಕೊಂಡು ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ ಕೈ ಸೇರಿತು. ಈ ಮೂಲಕ ಮೂರನೇ ವಿಕೆಟನ್ನು ಕೂಡ ಕಳೆದುಕೊಂಡಿತು. ಈ ಮೂಲಕ ಕಳೆದ ಎರಡು ಪಂದ್ಯಗಳಲ್ಲಿ ಶತಕಗಳನ್ನು ಬಾರಿಸಿದ್ದ ಶ್ರೇಯಸ್ ಐಯ್ಯರ್ ಕೂಡ ಆಘಾತ ಅನುಭವಿಸಿದರು. ಈ ಹಂತದಲ್ಲಿ ಭಾರತದ ಸ್ಕೋರ್ 81 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು.

ರೋಹಿತ್ ಶರ್ಮಾ ಬ್ಯಾಟಿಂಗ್ ನಡೆಸುತ್ತಿದ್ದಾಗ ಅತ್ಯಂತ ಸುಸ್ಥಿತಿಯಲ್ಲಿದ್ದಂತೆ ಕಾಣಿಸುತ್ತಿದ್ದ ಭಾರತ ರೋಹಿತ್ ಬೆನ್ನಲ್ಲೇ ಐಯ್ಯರ್ ವಿಕೆಟ್ ಕೂಡ ಕಳೆದುಕೊಂಡ ಬಳಿಕ ಮತ್ತೆ ಸಂಕಷ್ಟಕ್ಕೆ ಸಿಲುಕಿತ್ತು. ಐಯ್ಯರ್ ಔಟಾಗುತ್ತಿರುವುದನ್ನು ಕಂಡ ನಾನ್ ಸ್ಟ್ರೈಕ್ ತುದಿಯಲ್ಲಿದ್ದ ವಿರಾಟ್ ಕೊಹ್ಲಿ ಸ್ಥಬ್ಧವಾಗಿ ನಿಂತು ತಲೆಯಾಡಿಸುತ್ತಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನು ಆ ಬಳಿಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಟೀಮ್ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡುವ ಜವಾಬ್ಧಾರಿ ವಹಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್
ಬೆಂಚ್: ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್, ಪ್ರಸಿದ್ಧ್ ಕೃಷ್ಣ

ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಬೆಂಚ್: ಸೀನ್ ಅಬ್ಬೋಟ್, ಮಾರ್ಕಸ್ ಸ್ಟೋನಿಸ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್

Story first published: Sunday, November 19, 2023, 15:49 [IST]
Other articles published on Nov 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+