For Quick Alerts
ALLOW NOTIFICATIONS  
For Daily Alerts
 

ನಾಯಕ ರೋಹಿತ್‌ಗೆ ಆಸ್ಟ್ರೇಲಿಯಾವೇ ನೆಚ್ಚಿನ ಎದುರಾಳಿ: ಆಸಿಸ್ ಪಡೆಗೆ ಹಿಟ್‌ಮ್ಯಾನ್ ಸುನಾಮಿ ಭೀತಿ

By ನಾಗೇಶ್

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಗೆ ಕ್ಷಣಗಣನೆ ಆರಂಭವಾಗಿದೆ. ಭಾರತ 12 ವರ್ಷಗಳ ಬಳಿಕ ತನ್ನದೇ ನೆಲದಲ್ಲಿ ಫೈನಲ್ ಗೆದ್ದು ಮೂರನೇ ಬಾರಿಗೆ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯುವತ್ತ ಎದುರು ನೋಡುತ್ತಿದ್ದರೆ, 5 ಬಾರಿ ಗೆದ್ದಿರುವ ಆಸ್ಟ್ರೇಲಿಯಾ 2015ರ ನಂತರ 6ನೇ ಬಾರಿ ಗೆಲುವಿನ ಕನಸು ಕಾಣುತ್ತಿದೆ. ಆಸ್ಟ್ರೇಲಿಯಾಕ್ಕೆ ವಿಶ್ವಕಪ್ ಗೆಲ್ಲವುದು ಅಷ್ಟು ಸುಲಭವಲ್ಲ.

ಕಾಂಗರೂಗಳಿಗೆ ಬ್ಯಾಟಿಂಗ್‌ನಲ್ಲಿ ನಾಯಕ ರೋಹಿತ್, ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಹಾಗೂ ಬೌಲಿಂಗ್‌ನಲ್ಲಿ ಶಮಿ, ಬುಮ್ರಾ, ಸಿರಾಜ್, ಕುಲದೀಪ್ ಮತ್ತು ಜಡೇಜಾ ಸವಾಲು ಎದುರಿಸಬೇಕಿದೆ. ಆದರೆ ನಾಯಕ ರೋಹಿತ್ ಶರ್ಮಾ ಮಾತ್ರ ಆಸ್ಟ್ರೇಲಿಯಾವನ್ನು ಸದೆಬಡಿಯಬಲ್ಲರು. ರೋಹಿತ್‌ಗೆ ಆಸ್ಟ್ರೇಲಿಯಾದ ಬೌಲರ್ ಗಳನ್ನು ದಂಡಿಸುವುದು ಎಂದರೆ ತುಂಬಾ ಇಷ್ಟ. ರೋಹಿತ್ ಅವರ ಮೊದಲ ದ್ವಿಶತಕ ಈ ತಂಡದ ವಿರುದ್ಧವೇ, ಬೆಂಗಳೂರಿನಲ್ಲಿ ಮೂಡಿ ಬಂದಿತ್ತು.

World cup final: Indian fans waiting for Hitman Rohit Sharma show one more time against Australia

ರೋಹಿತ್ ಶರ್ಮಾ ಭಾನುವಾರ ಆಸ್ಟ್ರೇಲಿಯಾ ಬೌಲರ್‌ಗಳನ್ನು ಕಾಡಬಲ್ಲರು. ರೋಹಿತ್ ಆಸೀಸ್ ವಿರುದ್ಧ ಎಂಟು ODI ಶತಕಗಳು ಮತ್ತು ಒಂಬತ್ತು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹಲವು ವರ್ಷಗಳ ಪೈಪೋಟಿಯ ಬಗ್ಗೆಯೂ ಅವರಿಗೆ ಅರಿವಿದೆ. 10 ವರ್ಷಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧದ 7 ಏಕದಿನ ಸರಣಿಯ ಆಡಿತ್ತು. ಜೈಪುರದಲ್ಲಿ ಕಾಂಗರೂಗಳ ವಿರುದ್ಧ ರೋಹಿತ್ ಔಟಾಗದೆ 141 ರನ್ ಬಾರಿಸಿದ್ದರು. ಆಸೀಸ್ ಬೌಲರ್ ಗಳಿಗೆ ತಮ್ಮಲ್ಲಿನ ಉತ್ತಮ ಕ್ಲಾಸ್ ಮತ್ತು ಬಿರುಗಾಳಿಯ ಬ್ಯಾಟಿಂಗ್ ಅನ್ನು ತೋರಿಸಿದ್ದರು.

1
1-2023

ಆ ಶತಕವು ಮೂರು ವರ್ಷಗಳ ಶತಕದ ಬರವನ್ನು ಕೊನೆಗೊಳಿಸುವಲ್ಲಿ ನೆರವಾಗಿತ್ತು. ಮಾತ್ರವಲ್ಲದೆ ಭಾರತ 43.3 ಓವರ್ಗಳಲ್ಲಿ ಸವಾಲಿನ 359 ರನ್ಗಳನ್ನು ಬೆನ್ನಟ್ಟಲು ಸಾಧ್ಯವಾಗಿಸಿತು. ವಿರಾಟ್ ಕೊಹ್ಲಿ 52 ಎಸೆತಗಳಲ್ಲಿ ಅಜೇಯ ಶತಕವನ್ನು ಗಳಿಸಿದ್ದರು. ಕೊಹ್ಲಿ ಅವರ ಏಕದಿನ ಇತಿಹಾಸದಲ್ಲಿ ಇದಕ್ಕಿಂತ ಹೆಚ್ಚು ಸ್ಫೋಟಕ ಇನ್ನಿಂಗ್ಸ್ ಆಡಿರಲಿಲ್ಲ. ಇದೇ ಪಂದ್ಯದಿಂದಲೇ ರೋಹಿತ್ ವೈಟ್ ಬಾಲ್ ಮಾದರಿಯಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಆಗಿ ಫಿಕ್ಸ್ ಆದರು. ಇದೇ ಸರಣಿಯಲ್ಲಿ ದೀಪಾವಳಿಯ ಆಸುಪಾಸಿನಲ್ಲಿ ನಡೆದ ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ರೋಹಿತ್ ದ್ವಿಶತಕ ಸಿಡಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು.

ರೋಹಿತ್ ಶರ್ಮಾ ಅವರ ಅಂಕಿಅಂಶಗಳನ್ನು ಗಮನಿಸಿದರೆ, ಭಾರತದ ನಾಯಕ ಆಸ್ಟ್ರೇಲಿಯಾ ವಿರುದ್ಧ 44 ODI ಪಂದ್ಯಗಳಲ್ಲಿ 58.30 ರ ಅತ್ಯುತ್ತಮ ಸರಾಸರಿಯಲ್ಲಿ 2332 ರನ್ ಗಳಿಸಿದ್ದಾರೆ. ಕಾಂಗರೂಗಳ ವಿರುದ್ಧ 8 ಶತಕಗಳ ಜೊತೆಗೆ 9 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಆಸೀಸ್ ತಂಡದ ವಿರುದ್ಧ ರೋಹಿತ್ 187 ಬೌಂಡರಿ ಮತ್ತು 84 ಸಿಕ್ಸರ್ಗಳನ್ನು ಬಾರಿಸಿದ್ದಾರೆ.

ಭಾರತ ಅಹಮದಾಬಾದ್ನಲ್ಲಿ ಇದುವರೆಗೆ ಏಕದಿನ ಪಂದ್ಯವನ್ನು ಸೋತಿಲ್ಲ. 1987ರಲ್ಲಿ ಇದೇ ಮೈದಾನದಲ್ಲಿ ಅಕ್ಟೋಬರ್ 26ರಂದು ಜಿಂಬಾಬ್ವೆ ವಿರುದ್ಧ ಮೊದಲ ಪಂದ್ಯ ಗೆದ್ದಿತ್ತು. ಆಗ ಭಾರತ 192 ರನ್ಗಳ ಗುರಿಯನ್ನು 7 ವಿಕೆಟ್ಗಳಿಂದ ಸುಲಭವಾಗಿ ಗೆದ್ದಿತ್ತು. ಇದಾದ ಬಳಿಕ 2011ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು 4 ವಿಕೆಟ್ಗಳಿಂದ ಸೋಲಿಸಿತ್ತು. 261 ರನ್ಗಳ ಗುರಿಯನ್ನು ಭಾರತ 6 ವಿಕೆಟ್ ಕಳೆದುಕೊಂಡು ಸಾಧಿಸಿತು

Story first published: Sunday, November 19, 2023, 9:08 [IST]
Other articles published on Nov 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+