Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ ಫೈನಲ್: ಕಿವೀಸ್ vs ಇಂಗ್ಲೆಂಡ್ ಪಂದ್ಯವನ್ನು ಮಳೆ ಕಾಡಲಿದೆಯೆ?

World Cup Final: London Weather Report: Sunshine Expected, No Chance of Rain

ಲಂಡನ್, ಜುಲೈ 14: ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ಭಾನುವಾರ (ಜುಲೈ 14) ನಡೆಯಲಿರುವ ವಿಶ್ವಕಪ್ 2019ರ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ vs ಇಂಗ್ಲೆಂಡ್ ಸೆಣಸಾಡಲಿವೆ. ಪ್ರಶಸ್ತಿ ಸುತ್ತಿನ ಈ ಪಂದ್ಯದ ವೇಳೆ ಮಳೆಯ ತೊಂದರೆಯಿಲ್ಲ, ಬಿಸಿಲು ಇರಲಿದೆ ಎಂದು ವರದಿ ಹೇಳಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಲಂಡನ್ ಹವಾಮಾನ ವರದಿಯ ಪ್ರಕಾರ ಫೈನಲ್ ಪಂದ್ಯದ ವೇಳೆ ಬಿಸಿಲು ಹೆಚ್ಚಿರಲಿದೆ. ಟೂರ್ನಿಯುದ್ದಕ್ಕೂ ಕಣ್ಣಮುಚ್ಚಾಲೆ ಆಟವಾಡಿದ್ದ ಮಳೆ ಸೆಮಿಫೈನಲ್ ಪಂದ್ಯದ ವೇಳೆಯೂ ತೊಂದರೆ ನೀಡಿತ್ತು. ಹೀಗಾಗಿಯೇ ಭಾರತ-ಕಿವೀಸ್ ಸೆಮಿಫೈನಲ್ ಪಂದ್ಯ 2 ದಿನಗಳ ಕಾಲ ಮುಂದುವರೆದಿತ್ತು.

ಇಂಗ್ಲೆಂಡ್ vs ನ್ಯೂಜಿಲೆಂಡ್, ಫೈನಲ್, ಜುಲೈ 14, Live ಸ್ಕೋರ್‌ಕಾರ್ಡ್

1
43691

ಭಾನುವಾರ ಫೈನಲ್ ಪಂದ್ಯದ ಟಾಸ್ ವೇಳೆ ಕೊಂಚ ಮೋಡ ಕವಿದ ವಾತಾವರಣವಿರುವ ಸಾಧ್ಯತೆಯಿದೆಯಾದರೂ ಮಳೆಯಾಗುವ ಸಂಭವ ಇಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ವಿಶ್ವಕಪ್ 2019ರ ಫೈನಲ್ ಹಣಾಹಣಿ 50 ಓವರ್‌ಗಳವರೆಗೆ ಅಡಚಣೆಯಿಲ್ಲದೆ ಮುಂದುವರೆಯುವುದು ನಿರೀಕ್ಷಿತ. ಪಂದ್ಯ 3 pmಗೆ ಆರಂಭಗೊಳ್ಳಲಿದೆ. ಹಾಗೂ ಮಳೆಯಿಂದ ಪಂದ್ಯಕ್ಕೆ ತೊಂದರೆಯಾದರೆ, ಮೀಸಲು ದಿನವಾದ ಸೋಮವಾರ (ಜುಲೈ 15) ಪಂದ್ಯ ಮುಂದುವರೆಯಲಿದೆ.

ಟೂರ್ನಿಯಾರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಇಂಗ್ಲೆಂಡ್ ಲೀಗ್ ಕೊನೇ ಹಂತದಲ್ಲಿ ಸೆಮಿಫೈನಲ್ ಅವಕಾಶ ಕಳೆದುಕೊಳ್ಳುವ ಭೀತಿ ಎದುರಿಸಿತ್ತು. ನ್ಯೂಜಿಲೆಂಡ್ ಕೂಡ ಇಂಥದ್ದೇ ಸಂದರ್ಭ ಎದುರುಗೊಂಡಿತ್ತು. ಆದರೆ ಅದೇ ಎರಡು ತಂಡಗಳೀಗ ಪ್ರಶಸ್ತಿ ಸುತ್ತಿಗೆ ಬಂದಿದೆ. ನಿರಾಯಾಸವಾಗಿ ಸೆಮಿಫೈನಲ್ ಪ್ರವೇಶಿಸಿದ್ದ ಆಸ್ಟ್ರೇಲಿಯಾ-ಭಾರತ ಎರಡೂ ತಂಡಗಳೂ ಸೆಮಿಫೈನಲ್‌ನಲ್ಲೇ ಹೊರ ಬಿದ್ದಿವೆ.

Story first published: Sunday, July 14, 2019, 12:03 [IST]
Other articles published on Jul 14, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+