ಟೀಮ್ ಇಂಡಿಯಾದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ. ಎಂಎಸ್‌ಡಿ ಟೀಮ್ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರು. ಐಸಿಸಿಯ ಎಲ್ಲ ಟ್ರೋಫಿಗಳನ್ನು ಗೆದ್ದ ನಾಯಕ. ಧೋನಿ ಅವರ ಚಾಣಕ್ಷತನವನ್ನು ಈಗಿನ ನಾಯಕರು ತಮ್ಮಲ್ಲಿ ಮೈಗೂಡಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಇದೇ ಸಾಲಿಗೆ ಸೇರಲು ಟೀಮ್ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ ತೆರೆಯ ಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಸ್ಟಾರ್ ಓಪನರ್ ರೋಹಿತ್ ಶರ್ಮಾ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಪ್ರಸಕ್ತ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
2007ರಲ್ಲಿ ಟಿ20 ತಂಡವನ್ನು ಮುನ್ನಡೆಸಿದ್ದ ಮಹೇಂದ್ರ ಸಿಂಗ್ ಧೋನಿ ಅವರ ಗರಡಿಯಲ್ಲಿ ಪಳಗಿದ ಯುವಕ ರೋಹಿತ್ ಶರ್ಮಾ.. 2007ರ ವಿಶ್ವಕಪ್ ನಲ್ಲಿ ಯುವ ಆಟಗಾರನಾಗಿ ತಂಡ ಸೇರಿಕೊಂಡ ರೋಹಿತ್ ಇಂದು ತಂಡವನ್ನು ಮುನ್ನಡೆಸುತ್ತಿದ್ದಾರೆ. ರೋಹಿತ್ ಶರ್ಮಾ ಅವರ ಕ್ಯಾಪ್ಟನ್ಸಿ ನೋಡಿದರೆ, ಧೋನಿ ಅವರ ನೆರಳು ಕಾಣದೆ ಇರದು. ಮೈದಾನದಲ್ಲಿ ಶಾಂತ ಸ್ವಭಾವದ ರೋಹಿತ್, ಭಾನುವಾರ ತಮ್ಮ ಹೆಸರಿನ ಮುಂದೆ ವಿಶ್ವಕಪ್ ವಿಜೇತ ತಂಡದ ನಾಯಕ ಎಂಬ ಹಣೆ ಪಟ್ಟಿಯನ್ನು ಹಚ್ಚಿಕೊಳ್ಳಲು ಮೈದಾನಕ್ಕೆ ಇಳಿಯಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಧೋನಿ ಅವರ ಗರಡಿಯಲ್ಲಿ ಪಳಗಿದ್ದರಿಂದ, ಮಾಹಿ ಪ್ರಯೋಗಿಸುತ್ತಿದ್ದ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದಾರೆ. ಹಲವು ವರ್ಷಗಳ ಕಾಲ ಧೋನಿ ಜೊತೆ ಡ್ರೆಸ್ಸಿಂಗ್ ರೂಮ್ ಶೇರ್ ಮಾಡಿರುವ ಹಿಟ್ ಮ್ಯಾನ್್ಡ, ಕೂಲ್ ಕ್ಯಾಪ್ಟನ್ ನಡೆಗಳನ್ನು ಮೈಗೂಡಿಸಿಕೊಂಡಿದ್ದಾರೆ.
ಈ ಬಗ್ಗೆ ದೇಶಕ್ಕೆ ತಡವಾಗಿ ಅರ್ಥವಾಗಿದೆ. ಅದು ಹೇಗಪ್ಪಾ ಅಂದ್ರೆ, ಫೈನಲ್ಗೂ ಮುನ್ನ ನಡೆದ ಪತ್ರಿಕಾಗೋಷ್ಟಿಯಲ್ಲಿ ಫೈನಲ್್ೆ ಗೆ ಏನು ಹೊಸ ಪ್ಲ್ಯಾನ್ ಎಂದು ಕೇಳಿದ ಪ್ರಶ್ನೆಗೆ, ರೋಹಿತ್ ನೀಡಿದ ಉತ್ತರ ಎಲ್ಲವನ್ನೂ ನೆನಪಿಸುತ್ತದೆ. 'ನಾವು ಬೇರೆ ಏನೂ ಹೊಸತನ್ನು ಮಾಡಲು ಬಯಸುವುದಿಲ್ಲ. ನಾವು ಗೆಲ್ಲುವ ರೀತಿಯಲ್ಲಿಯೇ ನಾವು ಗೆಲ್ಲಲು ಬಯಸುತ್ತೇವೆ. ಮತ್ತು ವಿಭಿನ್ನವಾಗಿರುವುದಕ್ಕೆ ಸಂಬಂಧಿಸಿದಂತೆ, 2007 ರಲ್ಲಿ ಎಂಎಸ್ ಅವರು ವಿಭಿನ್ನವಾಗಿ ಏನನ್ನೂ ಮಾಡಿದ್ದಾರೆ ಎಂದು ನಾನು ಭಾವಿಸಿರಲಿಲ್ಲ. ನಾವು ಯಾವ ಮನಸ್ಥಿತಿಯೊಂದಿಗೆ ಮುನ್ನಡೆಯುತ್ತೇವೋ ಅದೇ ಮನಸ್ಥಿತಿಯೊಂದಿಗೆ ಮುನ್ನಡೆಯುತ್ತೇವೆ ಎಂದಿದ್ದಾರೆ.
ಇದೇ ವೇಳೆ 2011ರ ವಿಶ್ವಕಪ್ ಫೈನಲ್ ಬಗ್ಗೆಯೂ ಮಾತನಾಡಿರುವ ರೋಹಿತ್, '2011 ತುಂಬಾ ಭಾವನಾತ್ಮಕ ಮತ್ತು ಕಷ್ಟಕರ ಸಮಯವಾಗಿತ್ತು. ಆದರೆ ಈಗ ನಾನು ತುಂಬಾ ಸಂತೋಷವಾಗಿದ್ದೇನೆ. ಫೈನಲ್ನಲ್ಲಿ ತಂಡವನ್ನು ಮುನ್ನಡೆಸುತ್ತೇನೆ ಎಂದು ನಾನು ಯೋಚಿಸಿರಲಿಲ್ಲ. ಆದರೆ ನೀವು ಬಯಸಿದರೆ, ಅದು ಸಂಭವಿಸುತ್ತದೆ. ನಾನು ತಂಡದಲ್ಲಿ ಉತ್ತಮ ಸ್ಥಾನ ಗಳಿಸಲು ಬಯಸಿದ್ದೆ ಎಂದಿದ್ದಾರೆ.