Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಈ ನಾಲ್ವರನ್ನು ಕಟ್ಟಿ ಹಾಕಿದರೆ ಭಾರತ ವಿಶ್ವಕಪ್ ಗೆಲ್ಲುವುದನ್ನು ತಡೆಯುವುದು ಆಸ್ಟ್ರೇಲಿಯಾಗೆ ಅಸಾಧ್ಯ!!

ವಿಶ್ವಕಪ್ 2023 ಅಂತಿಮ ಘಟ್ಟ ತಲುಪಿದ್ದು ಫೈನಲ್ ಪಂದ್ಯ ಮಾತ್ರವೇ ಬಾಕಿಯಿದೆ. ಭಾನುವಾರ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಎರಡು ತಂಡಗಳ ಪೈಕಿ ಆಟಗಾರರ ಫಾರ್ಮ್ ನೋಡಿದಾಗ ನಿಶ್ಚಿತವಾಗಿ ಭಾರತ ಈ ಫೈನಲ್ ಪಂದ್ಯ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಆದರೆ ಆಸ್ಟ್ರೇಲಿಯಾ ತಡ ಈಗಾಗಲೇ ಐದು ಬಾರಿ ವಿಶ್ವಕಪ್ ಟ್ರೋಫಿನ್ನು ಎತ್ತಿಹಿಡಿದಿರುವ ತಂಡವಾಗಿದ್ದು ಯಾವ ಕಾರಣಕ್ಕೂ ಆಸಿಸ್ ಪಡೆಯನ್ನು ಹಗುರವಾಗಿ ಪಡಿಗಣಿಸುವಂತಿಲ್ಲ ಎನ್ನುವುದು ಅತ್ಯಂತ ಸ್ಪಷ್ಟ.

ಇನ್ನು ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳ ಮಧ್ಯೆ ಕಠಿಣ ಪೈಪೋಟಿ ನಡೆಯುವುದು ನಿಶ್ಚಿತ. ಈಗಾಗಲೇ ಲೀಗ್ ಹಂತದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದಾಗ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಸುಲಭವಾಗಿ ಮಣಿಸಿತ್ತು. ಹಾಗಾಗಿ ಭಾರತ ತಂಡದ ಆಟಗಾರರ ಆತ್ಮವಿಶ್ವಾಸ ಹೆಚ್ಚಿರಲಿದೆ.

World cup final: These 4 players from Australia definitely threat for India in the Finals

ಆದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಆಸ್ಟ್ರೇಲಿಯಾದ ಈ ನಾಲ್ವರು ಆಟಗಾರರು ಸವಾಲಾಗಲಿದ್ದಾರೆ. ಈ ನಾಲ್ಕು ಆಟಗಾರರನ್ನು ಭಾರತಕ್ಕೆ ಕಟ್ಟಿ ಹಾಕಲು ಸಾಧ್ಯವಾದರೆ ಟೀಮ್ ಇಂಡಿಯಾ ಗೆಲುವು ನಿಶ್ಚಿತ. ಹಾಗಾದರೆ ಆ ಆಟಗಾರರು ಯಾರು? ಮುಂದೆ ಓದಿ

ಡೇವಿಡ್ ವಾರ್ನರ್

ಆಸ್ಟ್ರೇಲಿಯಾದ ಸ್ಪೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ನೆಚ್ಚಿನ ಆಟಗಾರ ಎನ್ನುವುದರಲ್ಲಿ ಅನುಮಾನವಿಲ್ಲ. ಐಪಿಎಲ್‌ನಿಂದಾಗಿ ಈ ಆಸಿಸ್ ಆಟಗಾರ ಭಾರತೀಯ ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗಿದ್ದಾರೆ. ಇಂಥಾ ವಾರ್ನರ್ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಆಡುವ ಅವಕಾಶ ದೊರೆತಾಗ ತನ್ನ ದೇಶದ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿ ಗೆಲುವಿಗೆ ಸರ್ವ ಪ್ರಯತ್ನ ನಡೆಸಲಿದ್ದಾರೆ. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುವ ಸಾಮರ್ಥ್ಯ ಹೊಂದಿರುವ ವಾರ್ನರ್ ಭಾರತದ ವಿರುದ್ಧ ಯಾವಾಗಲೂ ಗಮನಸೆಳೆಯುವ ಪ್ರದರ್ಶನ ನೀಡುತ್ತಾರೆ. ಹೀಗಾಗಿ ಈ ಆಟಗಾರನ ವಿರುದ್ಧ ಟೀಮ್ ಇಂಡಿಯಾ ಬೌಲರ್‌ಗಳು ತಕ್ಕನಾದ ಯೋಜನ ಸಿದ್ಧಪಡಿಸಬೇಕಿದೆ.

ಸ್ಟೀವ್ ಸ್ಮಿತ್

ಅನುಭವಿ ಆಟಗಾರ ಸ್ಟೀವ್ ಸ್ಮಿತ್‌ಗೆ ಭಾರತ ತಂಡ ಎಂದರೆ ಯಾವಾಗಲೂ ಅಚ್ಚುಮೆಚ್ಚು. ಯಾವುದೇ ಮಾದರಿಯಿರಲಿ ಭಾರತ ಎದುರಾಳಿ ಎಂದಾಗ ಸ್ಟೀವ್ ಸ್ಮಿತ್ ಎಂಥಾ ಕಳಪೆ ಫಾರ್ಮ್‌ನಲ್ಲಿದ್ದರೂ ಉತ್ತಮ ಪ್ರದರ್ಶನ ನೀಡಿರುವ ಉದಾಹರಣೆಯಿದೆ. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಸ್ಮಿತ್ ಬ್ಯಾಟ್‌ನಿಂದ ನಿರೀಕ್ಷಿತ ಪ್ರದರ್ಶನ ಬಾರಲಿಲ್ಲ. ಹಾಗಿದ್ದರೂ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರವಾಗಿ ಮಿಂಚಿನ ಪ್ರದರ್ಶನ ನೀಡಲು ಸ್ಮಿತ್ ಕಾಯುತ್ತಿರುತ್ತಾರೆ. ಹೀಗಾಗಿ ಈ ಆಟಗಾರನನ್ನು ಭಾರತೀಯ ಬೌಲರ್‌ಗಳು ಸಾಧ್ಯವಾದಷ್ಟು ಬೇಗನೆ ಕಟ್ಟಿ ಹಾಕಬೇಕಿದೆ.

ಗ್ಲೆನ್ ಮ್ಯಾಕ್ಸ್‌ವೆಲ್

ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಈ ವಿಶ್ವಕಪ್‌ನಲ್ಲಿ ತಾನೆಂಥಾ ಬಲಾಢ್ಯ ಆಟಗಾರ ಎನ್ನುವುದನ್ನು ವಿಶ್ವಕ್ಕೆ ಸಾರಿ ಹೇಳಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪ್ರಮುಖ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೋಡಿದ ಬಳಿಕ ಯಾವುದೇ ತಂಡಕ್ಕಾದರೂ ಆ ಹೆಸರನ್ನು ಕೇಳಿದಾಗ ಆತಂಕ ಉಂಟಾಗುವುದು ಸಹಜ. ಆದರೆ ಗ್ಲೆನ್ ಮ್ಯಾಕ್ಸ್‌ವೆಕ್ ಬ್ಯಾಟಿಂಗ್‌ನಲ್ಲಿ ಮಾತ್ರವಕಲ್ಲದೆ ಬೌಲಿಂಗ್‌ನಲ್ಲಿಯೂ ಅಪಾಯಕಾರಿಯಾಗುವ ಸಾಮರ್ಥ್ಯ ಹೊಂದಿರುವ ಆಟಗಾರ. ಹೀಗಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಈ ಸ್ಪೋಟಕ ಆಟಗಾರನ ವಿರುದ್ಧ ಭಾರತ ವಿಶೇಷ ರಣತಂತ್ರವನ್ನು ಹೆಣೆಯುವುfಉ ಅಗತ್ಯವಾಗಿದೆ.

ಆಡಂ ಜಂಪಾ

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ಬೌಲರ್‌ಗಳ ಪೈಕಿ ಆಡಂ ಜಂಪಾ ಕೂಡ ಒಬ್ಬರು. ಈ ವಿಶ್ವಕಪ್‌ನಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಜಂಪಾ ಎರಡನೇ ಸ್ಥಾನದಲ್ಲಿದ್ದಾರೆ. ಮೊಹಮ್ಮದ್ ಶಮಿ 23 ವಿಕೆಟ್‌ಗಳೊಂದಿಗೆ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ 22 ವಿಕೆಟ್ ಪಡೆದಿರುವ ಜಂಪಾ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಭಾರತೀಯ ಬ್ಯಾಟರ್‌ಗಳು ಆತ್ಮವಿಶ್ವಾಸದಿಂದ ಇದ್ದರೂ ಕೂಡ ಈ ಸ್ಪಿನ್ನರ್ ಬಗ್ಗೆ ರೋಹಿತ್ ಬಳಗ ಎಚ್ಚರ ತಪ್ಪುವಂತಿಲ್ಲ.

Story first published: Friday, November 17, 2023, 15:47 [IST]
Other articles published on Nov 17, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+