ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿದಕ್ಕೆ ಸ್ವತಃ ನಾಯಕನಿಗೇ ಅಚ್ಚರಿ: ಫೈನಲ್ ಪಂದ್ಯಕ್ಕೂ ಮುನ್ನ ಪ್ಯಾಟ್ ಕಮ್ಮಿನ್ಸ್ ಹೇಳಿದ್ದಿಷ್ಟು!
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಈ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಅಮೋಘ ಪ್ರದರ್ಶನ ನೀಡುವ ಮೂಲಕ ಅಬ್ಬರಿಸಿದರೆ ಆಸ್ಟ್ರೇಲಿಯಾ ತಂಡ ಆರಂಭದಲ್ಲಿ ಭಾರೀ ಹಿನ್ನಡೆ ಅನುಭವಿಸಿದ ಹೊರತಾಗಿಯೂ ಬಳಿಕ ಅದ್ಭೂತವಾಗಿ ತಿರುಗಿಬಿದ್ದು ಪ್ರಶಸ್ತಿ ಸುತ್ತಿಗೆ ತಲುಪಿದೆ.
ಆಸ್ಟ್ರೇಲಿಯಾ ತಂಡ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದರ ಬಗ್ಗೆ ಸ್ವತಃ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಪ್ಯಾಟ್ ಕಮ್ಮಿನ್ಸ್ ಆರಂಭದಲ್ಲಿ ಅನುಭವಿಸಿದ ಸೋಲಿನ ಬಳಿಕ ಆಸ್ಟ್ರೇಲಿಯಾ ತಂಡ ಕಮ್‌ಬ್ಯಾಕ್ ಮಾಡಿ ಈ ಹಂತದವರೆಗೆ ತಲುಪಲಿದೆ ಎಂದು ನಾನು ಭಾವಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಎರಡು ಪಂದ್ಯಗಳಲ್ಲಿಯೂ ಸೋಲು ಅನುಭವಿಸಿತ್ತು. ಟೂರ್ನಿಯಲ್ಲಿ ಭಾರತದ ವಿರುದ್ಧ ಪಂದ್ಯವನ್ನಾಡುವ ಮೂಲಕ ಅಭಿಯಾನ ಆರಂಭಿಸಿದ ಆಸ್ಟ್ರೇಲಿಯಾಗೆ ಭಾರತ ಆಘಾತ ನೀಡಿತ್ತು. ಅದಾದ ಬಳಿಕ ದಕ್ಷಿಣ ಆಫ್ರಿಕಾ ತಂಡದ ವಿರುದ್ಧವೂ ಆಸ್ಟ್ರೇಲಿಯಾ ತಂಡ ಸೋಲು ಅನುಭವಿಸಿತ್ತು. ಆದರೆ ಮೂರನೇ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಿ ಗೆಲುವಿ ಸಾಧಿಸುವ ಮೂಲಕ ಗೆಲುವಿನ ಲಯವನ್ನು ಕಂಡುಕೊಂಡಿತ್ತು.
ಲಕ್ನೋದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿಯೂ ಆಸ್ಟ್ರೇಲಿಯಾದ ಆರಂಭದಲ್ಲಿ ಭಾರೀ ಹಿನ್ನಡೆ ಅನುಭವಿಸಿತ್ತು. ಒಂದು ಹಂತದಲ್ಲಿ ಶ್ರೀಲಂಕಾ 100/0 ರನ್‌ಗಳಿಸಿ ಸಂಪೂರ್ಣ ಮೇಲುಗೈ ಸಾಧಿಸಿತ್ತು. ಆದರೆ ಅದಾದ ಬಳಿಕ ಮುಂದಿನ 112 ರನ್‌ಗಳಲ್ಲಿ ಶ್ರೀಲಂಕಾದ ಎಲ್ಲಾ 10 ವಿಕೆಟ್‌ಗಳನ್ನು ಕೆಡವಿ ಹಾಕುವ ಮೂಲಕ ಕಮ್‌ಬ್ಯಾಕ್ ಮಾಡಿತ್ತು ಆಸ್ಟ್ರೇಲಿಯಾ.
ಫೈನಲ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಬಳಿ ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕ ಶ್ರೀಲಂಕಾ ವಿರುದ್ಧವೂ 100/0 ಸ್ಥಿತಿಯಲ್ಲಿದ್ದಾಗ ಹೇಗಿತ್ತು ಮನಸ್ಥಿತಿ ಎನ್ನುವ ಪ್ರಶ್ನೆಗೆ ಪ್ಯಾಟ್ ಕಮ್ಮಿನ್ಸ್ ಉತ್ತರ ನೀಡಿದ್ದಾರೆ.
"ಖಂಡಿತವಾಗಿಯೂ ಆ ಹಂತದಲ್ಲಿ ನಾವು ಸೆಮಿಫೈನಲ್‌ಗೆ ಪ್ರವೇಶಿಸಿಬೇಕು ಎಂದಿದ್ದರೆ ಉಳಿದ ಪಂದ್ಯದಲ್ಲಿ ಯಾವುದೇ ತಪ್ಪುಗಳನ್ನು ಕೂಡ ಮಾಡುವಂತೆಯೇ ಇರಲಿಲ್ಲ. ಅದೃಷ್ಟವಶಾತ್ ನಾವು ಅದನ್ನು ಸಾಧ್ಯವಾಗಿಸಿದ್ದೇವೆ. ಆದರೆ ನಾವು ಆರಂಭದಲ್ಲಿ ಎರಡು ಉತ್ತಮ ತಂಡಗಳನ್ನು ಎದುರಿಸಿದ್ದೆವು. ಹಾಗಾಗಿ ನಾವು ಲಯಕ್ಕೆ ಮರಳಿದರೆ ಖಂಡಿತವಾಗಿಯೂ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಭಾವಿಸಿದ್ದೆವು. ಅದು ಸಾಧ್ಯವಾಗಿದೆ" ಎಂದಿದ್ದಾರೆ ಪ್ಯಾಟ್ ಕಮ್ಮಿನ್ಸ್.
ಇನ್ನು ಸಂಪೂರ್ಣ ತಂಡವಾಗಿ ಈ ಬಾರಿಯ ವಿಶ್ವಕಪ್‌ನಲ್ಲಿ ಈವರೆಗೆ ಒಂದೂ ಪಂದ್ಯವನ್ನು ಕೂಡ ನಾವು ಆಡಿಲ್ಲ ಎಂದಿದ್ದಾರೆ ಪ್ಯಾಟ್ ಕಮ್ಮಿನ್ಸ್. "ನಾವು ಈ ವಿಶ್ವಕಪ್‌ನಲ್ಲಿ ಪರಿಪೂರ್ಣವಾದ ಪಂದ್ಯವನ್ನು ಒಂದೂ ಆಡಿಲ್ಲ. ನೆದರ್ಲೆಂಡ್ಸ್ ವಿರುದ್ಧ ಆಡಿರಬಹುದು. ಆದರೆ ಅದನ್ನು ಹೊರತುಪಡಿಸಿ ಪರಿಪೂರ್ಣ ಆಟ ನಮ್ಮಿಂದ ಬಂದಿಲ್ಲ" ಎಂದಿದ್ದಾರೆ.
"ನಾವು ದೊಡ್ಡ ಗೆಲುವು ಸಾಧಿಸಿಲ್ಲ. ಪ್ರತಿ ಪಂದ್ಯಕ್ಕೂ ನಾವು ಸಾಕಷ್ಟು ಹೋರಾಟ ನಡೆಸಿದ್ದೇವೆ. ಆದರೆ ನಾವು ಗೆಲ್ಲುವ ದಾರಿಯನ್ನು ಕಂಡುಕೊಂಡಿದ್ದೇವೆ. ವಿಭಿನ್ನ ಸಂದರ್ಭಗಳಲ್ಲಿ ಬೇರೆ ಬೇರೆ ಆಟಗಾರರು ತಂಡದ ಗೆಲುವಿಗಾಗಿ ನಿಂತಿದ್ದಾರೆ. ಇದರಿಂದಾಗಿ ಯಾವುದೇ ತಂಡದ ಸವಾಲು ಎದುರಿಸಲು ನಾವು ಸಂಪೂರ್ಣ ವಾಗಿಉತ್ತಮ ಸ್ಥಿತಿಯಲ್ಲಿರಬೇಕಾಗಿಲ್ಲ ಎಂದು ಅರ್ಥ ಮಾಡಿಕೊಂಡಿದ್ದಯ ನಾವು ಅದರ ಮೂಲಕ ದಾರಿ ಕಂಡುಕೊಳ್ಳಬಹುದು" ಎಂದಿದ್ದಾರೆ ಪ್ಯಾಟ್ ಕಮ್ಮಿನ್ಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications