ವಿಶ್ವಕಪ್ ಟ್ರೋಫಿ ಮೇಲೆ ಭಾರತೀಯರ ಕಣ್ಣು: 140 ಕೋಟಿ ಜನರ ಕನಸು ಬೆನ್ನತ್ತಿರುವ 11 ಆಟಗಾರರು ಇವರೇ!
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಭಾನುವಾರ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲು ಸಿದ್ಧವಾಗಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಈ ಪಂದ್ಯಕ್ಕೆ ಆತಿಥ್ಯವಹಿಸಲಿದ್ದು ಕ್ರಿಕೆಟ್ ಜಗತ್ತು ಈ ಪಂದ್ಯದ ಮೇಲೆ ಚಿತ್ತ ನೆಟ್ಟಿದೆ. ಇನ್ನು ಟೀಮ್ ಇಂಡಿಯಾ ಸುಮಾರು ಒಂದು ದಶಕದಿಂದ ಯಾವುದೇ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈ ವಿಶ್ವಕಪ್ ಮೂಲಕ ಭಾರತದ ಈ ಐಸಿಸಿ ಟ್ರೋಫಿಯ ಬರ ನೀಗಲಿದೆ ಎನ್ನುವ ನಿರೀಕ್ಷೆ ಕೋಟ್ಯಂತರ ಅಭಿಮಾನಿಗಳಲ್ಲಿದೆ.
ಟೀಮ್ ಇಂಡಿಯಾ ಈ ಬಾರಿಯ ವಿಶ್ವಕೊ್ ಟೂರ್ನಿಯಲ್ಲಿ ಆರಂಭದಿಂದಲೇ ಅಬ್ಬರದ ಪ್ರದರ್ಶನ ನೀಡುತ್ತಾ ಬಂದಿದ್ದು ಎಲ್ಲಾ ಪಂದ್ಯದಲ್ಲಿಯೂ ಗೆಲುವು ಸಾಧಿಸಿದೆ. ಹೀಗಾಗಿ ಅದೇ ರೀತಿಯ ಪ್ರದರ್ಶನವನ್ನು ಫೈಬಲ್ ಪಂದ್ಯದಲ್ಲಿಯೂ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ತನ್ನ ಅತ್ಯುತ್ತಮ ಪ್ರದರ್ಶನದ ವಿಶ್ವಾಸ ಮೂಡಿಸಿದೆ.

ಹಾಗಾದರೆ ಈ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಡುವ 11 ಬಳಗ ಹೇಗಿರಲಿದೆ ಎನ್ನುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಹಾಗಾಗಿ ಈ ಬಾರಿಯ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರುವ ಕನಸನ್ನು ನನಸಾಗಿಸಲು ಹೊರಟಿರುವ ಆ 11 ಆಟಗಾರರು ಯಾರು ಎನ್ನುವುದರ ಮಾಹಿತಿ ಇಲ್ಲಿದೆ. ಮುಂದೆ ಓದಿ..
ಅಗ್ರ ಕ್ರಮಾಂಕದಲ್ಲಿ ರೋಹಿತ್-ಗಿಲ್-ಕೊಹ್ಲಿ
ಟೀಮ್ ಇಂಡಿಯಾದ ಅಗ್ರ ಕ್ರಮಾಂಕ ಅತ್ಯಂತ ಬಲಿಷ್ಠವಾಗಿದೆ. ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಭಾರತಕ್ಕೆ ಅದ್ಭುತ ಆರಂಭವನ್ನು ನೀಡಿಕೊಂಡು ಬಂದಿದ್ದು ಫೈನಲ್ ಪಂದ್ಯದಲ್ಲಿಯೂ ಭಾರತ ತಂಡದಿಂದ ಸ್ಪೋಟಕ ಆರಂಭವನ್ನು ನಿರೀಕ್ಷಿಸಬಹುದು. ರೋಹಿತ್ ಶರ್ಮಾ ಆರಂಭದಿಂದಲೇ ಮುನ್ನುಗ್ಗಿ ರನ್‌ಗಳಿಸಲು ಮುಂದಾಗಲಿದ್ದರೆ ಶುಬ್ಮನ್ ಗಿಲ್ ಅವರು ತಮ್ಮ ಶೈಲಿಯಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದು ಫೈನಲ್‌ನಲ್ಲಿಯೂ ಅವರಿಂದ ಮತ್ತೊಂದು ಬೃಹತ್ ಇನ್ನಿಂಗ್ಸ್ ನಿರೀಕ್ಷಿಸಲಾಗುತ್ತಿದೆ.
ಮಧ್ಯಮ ಕ್ರಮಾಂಕ: ಶ್ರೇಯಸ್, ರಾಹುಲ್, ಸೂರ್ಯಕುಮಾರ್
ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕ ಕೂಡ ಅತ್ಯಂತ ಬಲಿಷ್ಠವಾಗಿದೆ. ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಐಯ್ಯರ್ ಅವರಿಂದ ಬಂದಿರುವ ಪ್ರದರ್ಶನ ಟೀಮ್ ಇಂಡಿಯಾದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಆಕ್ರಮಣಕಾರಿಯಾಗಿ ಆಡುವ ಐಯ್ಯರ್ ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿಯೂ ಅದ್ಭುತ ಆಟವನ್ನು ನೀಡಲು ಉತ್ಸುಕರಾಗಿದ್ದಾರೆ. ಶತತ ಎರಡು ಶತಕ ಸಿಡಿಸಿರುವ ಐಯ್ಯರ್ ಫೈನಲ್‌ನಲ್ಲಿ ಮತ್ತಷ್ಟು ಬಲ ನೀಡಲಿದ್ದಾರೆ. ಇನ್ನು ಕೆಎಲ್ ರಾಹುಲ್ ಅವರಿಂದಲೂ ಕೆಲ ಅದ್ಭುತ ಪ್ರದರ್ಶನ ಬಂದಿದ್ದು ಮಧ್ಯಮ ಕ್ರಮಾಂಕದಲ್ಲಿ ಫಿನಿಷರ್ ಆಗಿಯೂ ಜವಾಬ್ಧಾರಿ ನಿರ್ವಹಿಸಿ ಯಶಸ್ಸು ಕಂಡಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್ ಸಿಕ್ಕಿರುವ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಫೈನಲ್‌ನಲ್ಲಿಯೂ ಅವಕಾಶ ದೊರೆತರೆ ಸೂರ್ಯಕುಮಾರ್ ಯಾದವ್ ಅವರಿಂದ ಮತ್ತೊಂದು ಉತ್ತಮ ಇನ್ನಿಂಗ್ಸ್ ಖಂಡಿತಾ ನಿರೀಕ್ಷಿಸಬಹುದು.
ಸ್ಪಿನ್ನರ್‌ಗಳು: ರವೀಂದ್ರ ಜಡೇಜಾ, ಕುಲ್‌ದೀಪ್
ರವೀಂದ್ರ ಜಡೇಜಾ ಟೀಮ್ ಇಂಡಿಯಾದಲ್ಲಿ ಏಳನೇ ಕ್ರಮಾಂಕವನ್ನು ಅದ್ಭುತವಾಗಿ ನಿಭಾಯಿಸಬಲ್ಲ ಆಲ್‌ರೌಂಡರ್. ಬ್ಯಾಟಿಂಗ್‌ನಲ್ಲಿ ಉತ್ತಮವಾಗಿ ಕೊಡುಗೆ ನೀಡುವ ಸಾಮರ್ಥ್ಯವಿದೆ. ಇನ್ನು ಬೌಲಿಂಗ್‌ನಲ್ಲಿಯೂ ರವೀಂದ್ರ ಜಡೇಜಾ ಎದುರಾಳಿಗೆ ಕಂಠಕವಾಗಲಿದ್ದಾರೆ. ಇನ್ನು ಕುಲ್‌ದೀಪ್ ಯಾದವ್ ಸ್ಪಿನ್ ವಿಭಾಗದಲ್ಲಿ ದೊಡ್ಡ ಬಲವಾಗಿದ್ದು ಆಸ್ಟ್ರೇಲಿಯಾಗೆ ಆಘಾತ ನೀಡಲು ಕಾತರವಾಗಿದ್ದಾರೆ.
ವೇಗಿಗಳು: ಜಸ್ಪ್ರೀತ್ ಬೂಮ್ರಾ, ಶಮಿ, ಸಿರಾಜ್
ಟೀಮ್ ಇಂಡಿಯಾದ ವೃಗದ ಬೌಲಿಂಗ್ ವಿಭಾಗ ಅತ್ಯಂತ ಮಾರಕವಾಗಿದೆ. ಜಸ್ಪ್ರೀತ್ ಬೂಮ್ರಾ ನೇತೃತ್ವದಲ್ಲಿ ಟೂರ್ನಿಯುದ್ದಕ್ಕೂ ಭಾರತದ ವೇಗಿಗಳು ಅಬ್ಬರಿಸಿದ್ದಾರೆ. ಬೂಮ್ರಾ ಅವರಿಗೆ ಹಿಸ ಚೆಂಡಿನಲ್ಲಿ ಸಾಥ್ ನೀಡುವ ಸಿರಾಜ್ ಆಕ್ರಮಣಕಾರಿ ದಾಳಿಯ ಮೂಲಕ ಎದುರಾಳಿಯನ್ನು ಕಂಗೆಡಿಸಿದ್ದಾರೆ. ಇನ್ನು ಅನುಭವಿ ಮೊಹಮ್ಮದ್ ಶಮಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಈಗಾಗಲೇ ಹಲವು ಪಂದ್ಯಗಳಲ್ಲಿ ಭಾರತ ತಂಡದ ಗೆಲುವಿನಲ್ಲಿ ಶಮಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸಿದ್ದಾರೆ.
ಟೀಮ್ ಇಂಡಿಯಾದ ಸಂಭಾವ್ಯ XI
ರೋಹಿತ್ ಶರ್ಮಾ(ನಾಯಕ) ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಐಯ್ಯರ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲ್‌ದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications