For Quick Alerts
ALLOW NOTIFICATIONS  
For Daily Alerts
 

ನಾನಾಗಿದ್ರೆ ಪಂತ್‌ನನ್ನು ನಂ.4ರಲ್ಲಿ ಆಡಿಸುತ್ತಿದ್ದೆ: ಭಾರತದ ಮಾಜಿ ನಾಯಕ

ICC World Cup 2019 : ರಿಷಬ್ ಪಂತ್ ಗೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಹೇಳಿದ ಮಾಜಿ ನಾಯಕ..? | Rishabh Pant
World Cup: “I’d play Rishabh Pant at number 4,” says former India opener

ಲಂಡನ್, ಜೂನ್ 28: ಇಂಗ್ಲೆಂಡ್‌ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸ್ವಭಾವ ಹೊಂದಿರುವ ಯುವ ಬ್ಯಾಟ್ಸ್ಮನ್‌ ರಿಷಬ್ ಪಂತ್ ಅವರ ಸಾಮರ್ಥ್ಯವನ್ನು ಅರಿತಿರುವ ಟೀಮ್ ಇಂಡಿಯಾ ಮಾಜಿ ನಾಯಕ ಕ್ರಿಷ್ ಶ್ರೀಕಾಂತ್, ವಿಶ್ವಕಪ್‌ನಲ್ಲಿ ಪಂತ್ ಅವರನ್ನು ನಂ.4ರಲ್ಲಿ ಆಡಿಸಲು ಸಲಹೆ ನೀಡಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

21ರ ಹರೆಯದ ಚುರುಕು ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ಪಂತ್, ಗಾಯಾಳಾಗಿ ಟೂರ್ನಿಯಿಂದ ಹೊರ ಬಿದ್ದಿರುವ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಬದಲಿಗೆ 15 ಜನರ ಟೀಮ್ ಇಂಡಿಯಾದಲ್ಲಿ ಸೇರಿಕೊಂಡಿದ್ದಾರಾದರೂ ಅವರಿಗೆ ಯಾವ ಪಂದ್ಯಗಳಲ್ಲೂ ಆಡುವ 11ರಲ್ಲಿ ಸ್ಥಾನ ದೊರೆತಿಲ್ಲ.

ಸದ್ಯ ಭಾರತ ತಂಡದಲ್ಲಿ 4ನೇ ಕ್ರಮಾಂಕದಲ್ಲಿ ಆಲ್ ರೌಂಡರ್ ವಿಜಯ್ ಶಂಕರ್ ಆಡುತ್ತಿದ್ದಾರೆ. ಆದರೆ ವಿಜಯ್ ಗಮನಾರ್ಹ ಪ್ರದರ್ಶನವೇನೂ ನೀಡಿಲ್ಲ. ಹೀಗಾಗಿ ಕ್ರಿಕೆಟ್ ವಲಯ ಶಂಕರ್ ಬದಲಿಗೆ ಪಂತ್‌ಗೆ ಅವಕಾಶ ನೀಡಿಬೇಕೆಂದು ಮಾತನಾಡಿಕೊಳ್ಳುತ್ತಿದೆ.

ಪಂತ್‌ನನ್ನು 4ರಲ್ಲಿ ಆಡಿಸುತ್ತಿದ್ದೆ

ಪಂತ್‌ನನ್ನು 4ರಲ್ಲಿ ಆಡಿಸುತ್ತಿದ್ದೆ

ಭಾರತದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಆಗಿರುವ ಕೃಷ್ಣಮಾಚಾರಿ ಶ್ರೀಕಾಂತ್, ಐಸಿಸಿ ಅಂಕಣವೊಂದರಲ್ಲಿ, 'ನಾನೊಂದುವೇಳೆ ಭಾರತ ಕ್ರಿಕೆಟ್ ನಿರ್ವಹಣಾ ತಂಡದಲ್ಲಿರುತ್ತಿದ್ದರೆ, ರಿಷಬ್ ಪಂತ್ ಅವರನ್ನು ನಂ.4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಿಸುತ್ತಿದ್ದೆ. ನನ್ನ ಮಟ್ಟಿಗೆ ಪಂತ್ ಆ ಬ್ಯಾಟಿಂಗ್ ಕ್ರಮಾಂಕಕ್ಕೆ ಬೆಸ್ಟ್' ಎಂದು ಬರೆದುಕೊಂಡಿದ್ದಾರೆ.

ಇಂಗ್ಲೆಂಡ್ ಪರಿಸ್ಥಿತಿಗೆ ಸೂಕ್ತ

ಇಂಗ್ಲೆಂಡ್ ಪರಿಸ್ಥಿತಿಗೆ ಸೂಕ್ತ

'ಪಂತ್ ಈಗ ಭಾರತ ತಂಡದಲ್ಲಿದ್ದಾರೆ. ಅವರು ಆಡಲು ತಯಾರಿದ್ದಾರೆ ಕೂಡ. ಇನ್ನೂ ಪ್ರಮುಖ ವಿಚಾರವೆಂದರೆ ಇಂಗ್ಲೆಂಡ್ ನಲ್ಲಿ ಈ ಮೊದಲು ಆಡಿದ ಅನುಭವವಿರುವುದರಿಂದ ಪಂತ್ ಅಲ್ಲಿನ ಪರಿಸ್ಥಿತಿಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲರು' ಎಂದು ಭಾರತದ ಕ್ರಿಕೆಟ್ ಆಯ್ಕೆ ಸಮಿತಿಯ ಅಧ್ಯಕ್ಷರೂ ಆಗಿದ್ದ ಶ್ರೀಕಾಂತ್ ಹೇಳಿದ್ದಾರೆ.

ಪಂತ್ ಆಡಲು ಸರಿಯಾದ ಸಮಯ

ಪಂತ್ ಆಡಲು ಸರಿಯಾದ ಸಮಯ

ಕಳೆದ ಬೇಸಿಗೆಯಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಂತ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದನ್ನು ನಾವು ನೋಡಿದ್ದೇವೆ. ಆ ತಂಡವನ್ನು ಅರ್ಥೈಸಿಕೊಂಡಿರುವುದರಿಂದ ಪಂತ್‌ ಇಂಗ್ಲೆಂಡ್ ವಿರುದ್ಧ ಆಡಲು ಇದೇ ಸೂಕ್ತ ಸಮಯ ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ. ಶ್ರೀಕಾಂತ್, 1983ರ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದವರು.

ಅಜೇಯ ತಂಡ ಭಾರತ

ಅಜೇಯ ತಂಡ ಭಾರತ

ಐಸಿಸಿ ವಿಶ್ವಕಪ್ 2019ರಲ್ಲಿ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಜಯ ಸಾಧಿಸಿ, ಒಂದು ಪಂದ್ಯವನ್ನು ರದ್ದಾಗಿಸಿಕೊಂಡಿರುವ ಭಾರತ, ಟೂರ್ನಿಯಲ್ಲಿ ಸೋಲೇ ಕಾಣದ ಏಕಮಾತ್ರ ತಂಡವಾಗಿ ಮಿಂಚಿದೆ. ಜೂನ್ 30ರ ಭಾನುವಾರ ಕೊಹ್ಲಿ ಬಳಗಕ್ಕೆ ಆತಿಥೇಯ ಇಂಗ್ಲೆಂಡ್ ವಿರುದ್ಧ ಪಂದ್ಯವಿದೆ.

Story first published: Friday, June 28, 2019, 13:19 [IST]
Other articles published on Jun 28, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+