Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ 2023: ಭಾರತ vs ಆಸ್ಟ್ರೇಲಿಯಾ ಸೆಣೆಸಾಟಕ್ಕೆ ಇದೆಯಾ ಮಳೆಯ ಆತಂಕ? ಇಲ್ಲಿದೆ ಮಾಹಿತಿ

ಏಕದಿನ ವಿಶ್ವಕಪ್ ಟೂರ್ನಿ ಆರಂಭವಾಗಿ ಅದಾಗಲೇ ಮೂರು ದಿನಗಳು ಕಳೆದಿವೆ. ಈ ಬಾರಿಯ ಟೂರ್ನಿಯ ಐದನೇ ಪಂದ್ಯದಲ್ಲಿ ಆಯೊಥೇಯ ಭಾರತ ತಂಡ ಮೊದಲ ಪಂದ್ಯವನ್ನಾಡುತ್ತಿದ್ದು ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲು ಸಿದ್ಧವಾಗಿದೆ. ಈ ಬಾರಿಯ ವಿಶ್ವಕಪ್ ಟೂರ್ನಿಯ ಮೊದಲ ಹೈವೋಲ್ಟೇಜ್ ಪಂದ್ಯ ಇದಾಗಿದ್ದು ಅಭಿಮಾನಿಗಳು ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ.

ವಿಶ್ವದ ಎರಡು ಬಲಿಷ್ಠ ತಂಡಗಳ ನಡುವಿನ ಈ ಬಾರಿಯ ವಿಶ್ವಕಪ್ ಸೆಣೆಸಾಟ ಕ್ರಿಕೆಟ್ ಅಭಿಮಾನಿಗಳನ್ನು ಕಾತರದಿಂದ ಕಾಯುವಂತೆ ಮಾಡಿದೆ. ಈ ಪಂದ್ಯಕ್ಕೆ ಚೆನ್ನೈನ ಚೆಪಾಕ್ ಕ್ರೀಡಾಂಗಣ ಆತಿಥ್ಯಯ ವಹಿಸಿಕೊಂಡಿದ್ದು ಪೂರ್ಣ ಪ್ರಮಾಣದಲ್ಲಿ ಕ್ರೀಡಾಂಗಣ ತುಂಬಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಲ್ಲದೆ ಭಾನುವಾರ ಕೂಡ ಆಗಿರುವ ಕಾರಣ ಟಿವಿ ಮೊಬೈಲ್ ಮೂಲಕವೂ ಕೋಟ್ಯಂತರ ಅಭಿಮಾನಿಗಳು ಪಂದ್ಯವನ್ನು ಕಣ್ತಿಂಬಿಕೊಳ್ಳಲು ಸಿದ್ಧವಾಗಿದ್ದಾರೆ.

World cup: India vs Australia high voltage match at Chennai: weather updates, will rain play spoil sport?

ಆದರೆ ಈ ಸಂದರ್ಭದಲ್ಲಿ ಮಳೆಯ ಆತಂಕವೂ ಇದ್ದೇ ಇದೆ. ಇಂಥಾ ಹೈವೀಲ್ಟೇಜ್ ಪಂದ್ಯ ಮಳೆಗೆ ಆಹುತಿಯಾದರೆ ಅಭಿಮಾನಿಗಳೀಗೆ ದೊಡ್ಡ ಪ್ರಮಾಣದಲ್ಲಿ ನಿರಾಸೆಯಾಗುವುದು ಖಂಡಿತಾ. ಈಗಾಗಲೇ ವಿಶ್ವಕಪ್ ಟೂರ್ನಿಗೂ ಮುನ್ನ ಐಸಿಸಿ ಆಯೋಜಿಸಿದ್ದ ಭಾರತದ ಎರಡು ಅಭ್ಯಾಸ ಪಂದ್ಯಗಳು ಕೂಡ ಮಳೆಗೆ ಆಹುತಿಯಾಗಿತ್ತು. ಹೀಗಾಗಿ ಈ ಪಂದ್ಯಕ್ಕೂ ಮಳೆ ಅಡ್ಡಿಯುಂಟು ಮಾಡಲಿದೆಯಾ ಎನ್ನುವ ಪ್ರಶ್ನೆ ಕಾಡುತ್ತಿದೆ.

ಮಳೆಯ ಆತಂಕ ಇದೆಯಾ?

ವೆದರ್‌.ಕಾಮ್‌ನ ಸದ್ಯದ ಮಾಹಿತಿಯ ಪ್ರಕಾರ ಪಂದ್ಯದ ಆರಂಭದ ಸಮಯದಲ್ಲಿ ಅಂದರೆ ಮಧ್ಯಾಹ್ನ 1:30ರ ವೇಳೆಗೆ ಸಣ್ಣ ಪ್ರಮಾಣದಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಈ ರೀತಿಯ ವಾತಾವರಣ ರಾತ್ರಿ 10:30ರ ವರೆಗೂ ಮುಂದುವರಿಯಲಿದೆ. ಆದರೆ ಮಧ್ಯ ರಾತ್ರಿ 11;30ರ ವೇಳೆಗೆ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ ಎನ್ನುತ್ತಿದೆ ಈಗಿನ ಹವಾಮಾನ ವರದಿ. ಇದು ಕ್ರಿಎಕಟ್ ಅಭಿಮಾನಿಗಳಿಗೆ ನಿಜಕ್ಕೂ ಸಂತಸದ ಸಂಗತಿ. ಪಂದ್ಯದ ಮುಕ್ತಾಯದ ವರೆಗೂ ಮಳೆಯಾಗುವ ಸಾಧ್ಯತೆ ಬಹಳ ಕಡಿಮೆಯಿದ್ದು ಈ ಆತಂಕ ಸ್ವಲ್ಪ ಮಟ್ಟಿಗೆ ದೂರವಾದಂತಾಗಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್, ಶಾರ್ದೂಲ್ ಠಾಕೂರ್, ಶುಭಮನ್ ಗಿಲ್

ಆಸ್ಟ್ರೇಲಿಯಾ ತಂಡ: ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್, ಸೀನ್ ಅಬಾಟ್, ಟ್ರಾವಿಸ್ ಹೆಡ್, ಮಾರ್ಕಸ್ ಸ್ಟೊಯಿನಿಸ್, ಜೋಶ್ ಇಂಗ್ಲಿಸ್

Story first published: Sunday, October 8, 2023, 9:03 [IST]
Other articles published on Oct 8, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+