For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್, ಭಾರತ vs ಆಸೀಸ್: ಪ್ರಬಲ ಎದುರಾಳಿ ತಂಡಗಳ ಜಿದ್ದಾಜಿದ್ದಿ ಸಮರ!

By R Kaushik, London
World Cup: India vs Australia, Preview: A no-holds barred contest between similar foes

ಲಂಡನ್, ಜೂನ್ 8: ಸೋಲು ಗೆಲುವಿನ ಸಂಖ್ಯೆಗಳು ನಿಮಗೆ ಪುರಾವೆ ನೀಡಲಾರವೋ ಏನೋ. ಆದರೆ ಕ್ರಿಕೆಟ್ ಜಗತ್ತಿನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಅತ್ಯಂತ ಪ್ರಬಲ ತಂಡಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂತೂ ನಾನೇ ಬಾಸ್ ಅಂತ ಬೀಗುತ್ತಿದ್ದ ಆಸ್ಟ್ರೇಲಿಯಾಕ್ಕೆ ಕಠಿಣ ಸಾಲೆಸೆಯುವ ತಂಡವಾಗಿ ಭಾರತ ಗುರುತಿಸಿಕೊಂಡಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ತವರಿನಲ್ಲಿ ಮತ್ತು ವಿದೇಶಿ ನೆಲ ಹೀಗೆ ಎರಡುಸಾರಿ ವಿಶ್ವಕಪ್ ಟ್ರೋಫಿ ಎತ್ತಿದ ಹೆಗ್ಗಳಿಕೆಗೆ ಭಾರತ ತಂಡದ್ದು. ವಿಶ್ವದ ಎಲ್ಲಾ ತಾಣಗಳಲ್ಲೂ ಭರ್ಜರಿ ಆಟ ಪ್ರದರ್ಶಿಸಬಲ್ಲ ಸಾಮರ್ಥ್ಯಕ್ಕಾಗಿ ಟೀಮ್ ಇಂಡಿಯಾ ವಿಶ್ವ ಮಟ್ಟದಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. ಭಾರತದ ಈ ಸ್ಥಿತಿಯೇ ಅದನ್ನು ಹಿಂದಕ್ಕೆ ಹೆಜ್ಜೆಯಿಡಲು ಬಿಡಲೊಲ್ಲದು.

ಭಾರತ vs ಆಸ್ಟ್ರೇಲಿಯಾ, ಜೂನ್ 9, Live ಸ್ಕೋರ್‌ಕಾರ್ಡ್ ಇಲ್ಲಿದೆ

1
43657

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯನ್ನು ಗಮನಿಸಿದರೆ ಆಸ್ಟ್ರೇಲಿಯಾ ಮುಂಚೂಣಿಯಲ್ಲಿದೆ. ಈವರೆಗೆ ಇತ್ತಂಡಗಳ ನಡುವಣ ಸಮರದಲ್ಲಿ ಆಸ್ಟ್ರೇಲಿಯಾ ಒಟ್ಟು 77 ಸಾರಿ ಜಯ ಗಳಿಸಿದೆ. ಭಾರತ 49 ಬಾರಿ ಮೇಲುಗೈ ಸಾಧಿಸಿದೆ. ಇನ್ನು 10 ಪಂದ್ಯಗಳು ಫಲಿತಾಂಶವಿಲ್ಲವಾಗಿ ಘೋಷಿಸಲ್ಪಟ್ಟಿದೆ.

ಏಕದಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಬ್ಲೂ ಬಾಯ್ಸ್ ಮತ್ತು ಕಾಂಗರೂ ಪಡೆ ನಡುವೆ ಒಟ್ಟು 11 ಪಂದ್ಯಗಳು ನಡೆದಿವೆ. ಇದರಲ್ಲೂ ಆಸ್ಟ್ರೇಲಿಯಾದ್ದೇ ಮೇಲುಗೈ. 3 ಪಂದ್ಯಗಳನ್ನು ಭಾರತ ಗೆದ್ದಿದ್ದರೆ, ಬರೋಬ್ಬರಿ 8 ಪಂದ್ಯಗಳ ಫಲಿತಾಂಶ ಆಸೀಸ್ ಕಡೆಗೆ ವಾಲಿತ್ತು.

ಎರಡೂ ತಂಡಗಳು ಈ ಬಾರಿಯ ವಿಶ್ವಕಪ್‌ನಲ್ಲಿ ಅತ್ಯಂತ ಪ್ರಬಲ ತಂಡಗಳು ಅನ್ನೋದಕ್ಕೆ ಇನ್ನೊಂದು ಉದಾಹರಣೆಯಿದೆ. ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1ರಿಂದ ಜಯಿಸಿತ್ತು. ಅದೇ ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ಆಸೀಸ್ 5 ಪಂದ್ಯಗಳ ಏಕದಿನ ಸರಣಿಯನ್ನು 3-2ರಿಂದ ಗೆದ್ದುಕೊಂಡಿತ್ತು.

{headtohead_cricket_3_1}

ಜೂನ್ 9ರ ಭಾನುವಾರ ಲಂಡನ್‌ನ ಕೆನ್ನಿಂಗ್ಟನ್ ಓವಲ್ ಮೈದಾನ ಮತ್ತೊಂದು ಜಿದ್ದಾಜಿದ್ದಿಯ ವಿಶ್ವಕಪ್ ಪಂದ್ಯಾಟಕ್ಕೆ ಸಾಕ್ಷಿಯಾಗಲಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಕಾದಾಡುತ್ತಿವೆ. ಆಸ್ಟ್ರೇಲಿಯಾ ಆಡಿರುವ 2ರಲ್ಲಿ ಕ್ರಮವಾಗಿ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಜಯ ಸಾಧಿಸಿದೆ. ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಗೆದ್ದಿತ್ತು.

ಈವರೆಗಿನ ವಿಶ್ವಕಪ್ ಪಂದ್ಯಗಳ ಫಲಿತಾಂಶದ ಆಧಾರದಲ್ಲೂ ಭಾನುವಾರದ ಪಂದ್ಯ ಅತ್ಯಂತ ಮಹತ್ವದ್ದು. ಮತ್ತು ಅಷ್ಟೇ ಕುತೂಹಲಕೆರಳಿಸಿದೆ. ಯಾಕೆಂದರೆ ಇಲ್ಲಿ ಗೆಲ್ಲುವ ತಂಡಕ್ಕೆ ಸೆಮಿಫೈನಲ್ ಅರ್ಹತಾ ಸುತ್ತು ಸುಲಭವೆನಿಸಲಿದೆ. ಆಸ್ಟ್ರೇಲಿಯಾ ಒಟ್ಟು 5 ಸಾರಿ ವಿಶ್ವಕಪ್ ಜಯಿಸಿದ್ದರೆ, ಭಾರತ 2 ಸಾರಿ ವಿಶ್ವಕಪ್ ಚಾಂಪಿಯನ್ ಆಗಿ ಮಿನುಗಿದೆ. ಅಂತೂ ಆಸೀಸ್-ಭಾರತ ಕದನ ಜಿದ್ದಾಜಿದ್ದಿ ಅನ್ನಿಸುವುದರಲ್ಲಿ ಅನುಮಾನವಿಲ್ಲ.

(ಸುಮಾರು 20 ವರ್ಷಗಳಿಂದಲೂ ಕ್ರಿಕೆಟ್ ಬರವಣಿಗಾಗಿ ಗುರುತಿಸಿಕೊಂಡಿರುವ ಆರ್ ಕೌಶಿಕ್ ಅವರು ಲಂಡನ್‌ನಲ್ಲಿದ್ದು, ಇದು 7ನೇ ಬಾರಿಗೆ ವಿಶ್ವಕಪ್ ಟೂರ್ನಿ ಕವರ್ ಮಾಡುತ್ತಿದ್ದಾರೆ, ಮೈಖೇಲ್‌ಗಾಗಿ ವಿಶೇಷ ಲೇಖನಗಳನ್ನು ಬರೆಯುತ್ತಿದ್ದಾರೆ)

Story first published: Saturday, June 8, 2019, 23:15 [IST]
Other articles published on Jun 8, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+