Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನವೀನ್ ಉಲ್ ಹಕ್‌ಗೆ ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ತಾಗಿದ 'ಕೊಹ್ಲಿ' ಬಿಸಿ!!

ವಿಶ್ವಕಪ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಇಂದು ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿತ್ತು. ಏಷ್ಯಾದ ಎರಡು ದೇಶಗಳ ನಡುವಿನ ಈ ಸೆಣೆಸಾಟದಲ್ಲಿ ಬಾಂಗ್ಲಾದೇಶ ತಂಡ ಗೆದ್ದು ಬೀಗಿದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಆದರೆ ಅಫ್ಘಾನಿಸ್ತಾನ ತಂಡ ಕಳಪೆ ಪ್ರದರ್ಶನ ನೀಡುವ ಮೂಲಕ ಭಾರೀ ಅಂತರದ ಸೋಲಿಗೆ ತುತ್ತಾಗಿದೆ.

ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ವೇಗದ ಬೌಲರ್ ನವೀನ್ ಉಲ್ ಹಕ್‌ ಮುಜುಗರವನ್ನು ಅನುಭವಿಸುವಂತಾ ಸನ್ನಿವೇಶ ಉಂಟಾಗಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ದಾಳಿಗೆ ಇಳಿಯುವ ಸಂದರ್ಭದಲ್ಲಿ ಅಭಿಮಾನಿಗಳು ಕೊಹ್ಲಿ ಕೊಹ್ಲಿ ಎಂದು ಅಫ್ಘನ್ ವೇಗಿಯನ್ನು ಕೆಣಕುವಂತೆ ಮಾಡಿದ್ದಾರೆ. ಬಾಂಗ್ಲಾದೇಶ ಹಾಘೂ ಅಫ್ಘಾನಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಈ ಘಟನೆಯನ್ನು ಬಹುತೇಕ ಯಾರೂ ಕೂಡ ನಿರೀಕ್ಷಿಸಿರಲಿಲ್ಲ. ಆದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ನವೀನ್ ಉಲ್ ಹಕ್ ಅವರನ್ನು ಕೆಣಗಲು ಕಾರಣವೂ ಇದೆ.

World cup: Indian Fans welcomes Afghanistan pacer Naveen-Ul-Haq with Kohli Chants

ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್‌ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್‌ಜೈಂಟ್ಸ್ ನಡುವಿನ ಪಂದ್ಯದ ವೇಳೆ, ನವೀನ್ ಮತ್ತು ಕೊಹ್ಲಿ ಇಬ್ಬರೂ ಮಾತಿನ ಚಕಮಕಿಯಲ್ಲಿ ತೊಡಗಿದ್ದರು. ಅದು ಪಂದ್ಯ ಮುಗಿದ ನಂತರ ಕೈಕುಲುಕಲು ನಿರಾಕರಿಸುವ ಹಂತಕ್ಕೂ ಮುಂದುವರಿದಿತ್ತು. ಅದೇ ಪಂದ್ಯದಲ್ಲಿ ನವೀನ್ ಉಲ್ ಹಕ್ ಪರವಾಗಿ ಕೊಹ್ಲಿ ವಿರುದ್ಧ ಮಾತಿನ ಚಕಮಕಿ ನಡೆಸಿದ್ದ ಗೌತರನ್ ಗಂಭೀರ್ ಈ ಹಿಂದೆ ಹಲವು ಸಂದರ್ಭಗಳಲ್ಲಿ ಕೊಹ್ಲಿ ಅಭಿಮಾನಿಗಳಿಂದ ಇದೇ ರೀತಿಯ ಮುಜುಗರಕ್ಕೆ ಒಳಗಾಗಿದ್ದರು. ಇದೀಗ ಸ್ವತಃ ನವೀನ್ ಉಲ್ ಹಕ್‌ಗೆ ಮೊದಲ ಪಂದ್ಯದಲ್ಲಿಯೇ ಇದರ ಬಿಸಿ ತಟ್ಟಿದೆ.

ಇನ್ನು ಬಾಂಗ್ಲಾದೇಶ ವಿರುದ್ಧದ ಈ ಪಂದ್ಯದಲ್ಲಿ ನವೀನ್ ಉಲ್ ಹಕ್ ಒಂದು ವಿಕೆಟ್ ಪಡೆದುಕೊಂಡರಾದರೂ ಗಮನಾರ್ಹ ಪ್ರದರ್ಶನ ಆಗಿರಲಿಲ್ಲ. 5.4 ಓವರ್‌ಗಳಲ್ಲಿ 31 ರನ್‌ಗಳನ್ನು ನೀಡಿದ ಅವರು 5.50 ಎಕಾನಮಿ ದರದಲ್ಲಿ ಬೌಲಿಂಗ್ ನಡೆಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 156 ರನ್‌ಗಳಿಸಲಷ್ಟೇ ಶಕ್ತವಾಗಿದ್ದು ಆಲೌಟ್ ಆಯಿತು. ಇದನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡ 4 ವಿಎಕಟ್‌ಗಳನ್ನು ಕಲೆದುಕೊಂಡು ಈ ಸ್ಕೋರ್ ಬೆನ್ನಟ್ಟಿದೆ. ಈ ಮೂಲಕ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ 6 ವಿಕೆಟ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.

ಬಾಂಗ್ಲಾದೇಶ ಆಡುವ ಬಳಗ: ತಂಝಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೋ, ಮೆಹಿದಿ ಹಸನ್ ಮಿರಾಜ್, ಶಕಿಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ತೌಹಿದ್ ಹೃದಯೋಯ್, ಮಹಮ್ಮದುಲ್ಲಾ, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್
ಬೆಂಚ್: ಮಹೇದಿ ಹಸನ್, ನಸುಮ್ ಅಹ್ಮದ್, ಹಸನ್ ಮಹಮೂದ್, ತಂಝಿಮ್ ಹಸನ್ ಸಾಕಿಬ್

ಅಫ್ಘಾನಿಸ್ಥಾನ ಆಡುವ ಬಳಗ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಮೊಹಮ್ಮದ್ ನಬಿ, ನಜೀಬುಲ್ಲಾ ಝದ್ರಾನ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ
ಬೆಂಚ್: ನೂರ್ ಅಹ್ಮದ್, ರಿಯಾಜ್ ಹಸನ್, ಅಬ್ದುಲ್ ರೆಹಮಾನ್, ಇಕ್ರಂ ಅಲಿಖಿಲ್

Story first published: Saturday, October 7, 2023, 18:22 [IST]
Other articles published on Oct 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+