Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

World cup: ಆಸ್ಪತ್ರೆಗೆ ದಾಖಲಾದ ಭಾರತ ತಂಡದ ಆಟಗಾರ ಶುಬ್ಮನ್ ಗಿಲ್: ಪಾಕ್ ಪಂದ್ಯಕ್ಕೆ ಬಹುತೇಕ ಡೌಟ್

ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಅವರ ರಕ್ತದಲ್ಲಿ ಪ್ಲೆಟ್ಲೇಟ್‌ಗಳು ಕಡಿಮೆಯಾಗಿರುವ ಕಾರಣದಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ. ಚೆನ್ನೈನ ಆಸ್ಪತ್ರೆಗೆ ಗಿಲ್ ದಾಖಲಾಗಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆಯಿಂದಾಗಿ ಗಿಲ್ ಮುಂದಿನ ಶನಿವಾರ ನಡೆಯಲಿರುವ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೂ ಲಭ್ಯವಿರುವುದು ಬಹುತೇಕ ಅನುಮಾನ. ಈಗಾಗಲೇ ಶುಬ್ಮನ್ ಗಿಲ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಿಂದ ಹೊರಬಿದ್ದಿದ್ದರು. ಎರಡನೇ ಪಂದ್ಯ ಅಫ್ಘಾನಿಸ್ತಾನದ ವಿರುದ್ಧ ನಡೆಯಲಿದ್ದು ಅದಕ್ಕೂ ಅಲಭ್ತವಾಗಲಿದ್ದಾರೆ ಎನ್ನುವುದು ಖಚಿತವಾಗಿದೆ.

World Cup: Indian opener Shubman Gill admited to Hospital in Chennai, doubt for match against Pakistan

ಕ್ರಿಕ್ ಬಜ್ ವರದಿಯ ಪ್ರಕಾರ ಶುಬ್ಮನ್ ಗಿಲ್ ಅವರ ರಕ್ತದಲ್ಲಿ ಪ್ಲೆಟ್ಲೆಟ್‌ಗಳ ಸಂಖ್ಯೆ ಕಡಿಮೆಯಾಗಿದೆ. ಅದೇ ಕಾರಣಕ್ಕಾಗಿ ಅವರು ತಂಡದ ಜೊತೆಗೆ ದೆಹಲಿಗೆ ಪ್ರಯಾಣಿಸಿಲ್ಲ. ದೆಹಲಿಯಲ್ಲಿ ಭಾರತ ಈ ಬಾರಿಯ ವಿಶ್ವಕಪ್ ಟೂರ್ನಿಯ ಎರಡೇ ಪಂದ್ಯವನ್ನು ಆಡಲಿದ್ದು ಅಫ್ಘಾನಿಸ್ತಾನ ತಂಡ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಪಂದ್ಯವನ್ನು ಆಡಲಿದೆ.

"ಪ್ಲೇಟ್ಲೆಟ್ ಎಣಿಕೆ ಕಡಿಮೆಯಾದ ಕಾರಣ ತಂಡದ ಜೊತೆಗೆ ಪ್ರಯಾಣಿಸುವುದ್ನು ತಪ್ಪಿಸಲು ವೈದ್ಯಕೀಯ ತಂಡ ಸಲಹೆ ನೀಡಿದೆ. ಇದಕ್ಕೂ ಮುನ್ನ ಸೋಮವಾರ ಬಿಸಿಸಿಐ ಶುಬ್ಮನ್ ಗಿಲ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು ದೆಹಲಿ ಪಂದ್ಯಕ್ಕೆ ಗಿಲ್ ಲಭ್ಯವಿಲ್ಲ ಎಂದು ಖಚಿತಪಡಿಸಿತ್ತು.

Story first published: Tuesday, October 10, 2023, 9:25 [IST]
Other articles published on Oct 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+