Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌ನಲ್ಲಿ 4ನೇ ಕ್ರಮಾಂಕಕ್ಕೆ ಕೆಎಲ್ ರಾಹುಲ್ ಸೂಕ್ತ: ವೆಂಗ್‌ಸರ್ಕಾರ್

ವಿಶ್ವಕಪ್ ನಲ್ಲಿ ರಾಹುಲ್ ಸ್ಥಾನ ಏನು ಗೊತ್ತಾ..? | Oneindia kannada
World Cup: KL Rahul could be an option for No. 4 spot, says Dilip Vengsarkar

ನವದೆಹಲಿ, ಮೇ 17: ಮೇ 30ರಿಂದ ಆರಂಭಗೊಳ್ಳಲಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ 4ನೇ ಕ್ರಮಾಂಕ ಯಾರಿಗೆ ಲಭಿಸಲಿದೆ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಆದರೆ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ದಿಲೀಪ್ ವೆಂಗ್‌ಸರ್ಕಾರ್ ಅವರು 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಕೆಎಲ್ ರಾಹುಲ್ ಉತ್ತಮ ಆಯ್ಕೆ ಎಂದಿದ್ದಾರೆ.

ವಿರಾಟ್ ಕೊಹ್ಲಿ ಬಳಗ ಈ ಸಾರಿ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ವರೆಗಂತೂ ಸುಲಭವಾಗಿ ಲಗ್ಗೆಯಿಡಲಿದೆ ಎಂದು ಹೇಳಿರುವ ವೆಂಗ್‌ಸರ್ಕಾರ್, ಇಂಗ್ಲೆಂಡ್ ಪರಿಸ್ಥಿತಿಗೆ ಕನ್ನಡಿಗ ರಾಹುಲ್ ಹೊಂದಿಕೊಳ್ಳಬಲ್ಲರು. ಇಂಗ್ಲೆಂಡ್‌ ನೆಲದಲ್ಲಿ ತಂತ್ರವಾಗಿಯೂ ಅದು ಕೆಲಸಕ್ಕೆ ಬರಬಲ್ಲದು ಎಂದು ಅಭಿಪ್ರಾಯಿಸಿದ್ದಾರೆ.

'ನಮ್ಮಲ್ಲಿ ಸ್ಥಿರ ಆರಂಭಿಕ ಆಟಗಾರರಾಗಿ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಇದ್ದಾರೆ. 3ನೇ ಕ್ರಮಾಂಕ ವಿರಾಟ್ ಕೊಹ್ಲಿಗೆ ಒಳ್ಳೇದು. ಇನ್ನು 4ನೇ ಕ್ರಮಾಂಕದಲ್ಲಿ ರಾಹುಲ್ ತಂದರೆ ಅದು ಪೂರಕ ಬ್ಯಾಟಿಂಗ್ ತಂತ್ರವಾಗಲಿದೆ. ಹೀಗಾಗಿ ನನ್ನ ಪ್ರಕಾರ 4ನೇ ಕ್ರಮಾಂಕಕ್ಕೆ ಸ್ಪೆಶಾಲಿಷ್ಟ್ ಬ್ಯಾಟ್ಸ್ಮನ್ ಬೇಕು' ಎಂದು ವೆಂಗ್‌ಸರ್ಕಾರ್ ವಿವರಿಸಿದ್ದಾರೆ.

ಎಂಎಸ್‌ಕೆ ಮುಂದಾಳತ್ವದ ಆಯ್ಕೆ ಸಮಿತಿ 'ತ್ರೀ ಡೈಮೆನ್ಶನಲ್' ವಿಜಯ್ ಶಂಕರ್ ಅವರನ್ನು 4ನೇ ಕ್ರಮಾಂಕದಲ್ಲಿ ಇಳಿಸುವ ಇಂಗಿತ ವ್ಯಕ್ತಪಡಿಸಿತ್ತು. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಕಿಂಗ್ಸ್ XI ಪಂಜಾಬ್ ಪರ ಉತ್ತಮ ಪ್ರದರ್ಶನ ನೀಡಿರುವುದರಿಂದ ಭಾರತ ವಿಶ್ವಕಪ್ ಆಡುವ XIರಲ್ಲಿ ರಾಹುಲ್ ಸ್ಥಾನ ಗಿಟ್ಟಿಸಿಕೊಳ್ಳುವುದನ್ನು ನಿರೀಕ್ಷಿಸಲಾಗಿದೆ.

Story first published: Friday, May 17, 2019, 10:23 [IST]
Other articles published on May 17, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+