Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾಲಿ ಚಾಂಪಿಯನ್ನರ ಗರ್ವ ಭಂಗ: ರಚಿನ್- ಕಾನ್ವೆ ದಾಖಲೆಯ ಆಟಕ್ಕೆ ಕಂಗಾಲಾದ ಇಂಗ್ಲೆಂಡ್!!

ಏಕದಿನ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ನ್ಯೂಜಿಲೆಂಡ್ ಅಬ್ಬರದ ಆಟವನ್ನಾಡಿದ್ದು ಭಾರೀ ಅಂತರದಿಂದ ಗೆಲುವು ಸಾಧಿಸಿದೆ. ಮೊದಲಿಗೆ ಬೌಲಿಂಗ್‌ನಲ್ಲಿ ಮಿಂಚಿದ ನ್ಯೂಜಿಲೆಂಡ್ ತಂಡ ಬೃಹತ್ ಇಂಗ್ಲೆಂಡ್ ಪಡೆ ಬೃಹತ್ ಮೊತ್ತವನ್ನು ಗಳಿಸದಂತೆ ತಡೆಯುವಲ್ಲಿ ಯಶಸ್ವಿಯಾಗಿತ್ತು. ನಂತರ ಬ್ಯಾಟಿಂಗ್‌ನಲ್ಲಿ ನೀಡಿದ ಪ್ರದರ್ಶನಕ್ಕೆ 9 ವಿಕೆಟ್‌ಗಳ ಭಾರೀ ಅಂತರದಿಂದ ನ್ಯೂಜಿಲೆಂಡ್ ತಂಡ ಗೆದ್ದು ಬೀಗಿದೆ.

ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಜೋ ರೂಟ್ ಅವರ ಅದ್ಭುತ ಪ್ರದರ್ಶನದಿಂದಾಗಿ 272 ರನ್‌ಗಳನ್ನು ಗಳಿಸಲು ಶಕ್ತವಾಯಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡ ಆರಂಭದಲ್ಲಿಯೇ ಆಘಾತ ಅನುಭವಿಸಿತು. ಆರಂಭಿಕ ಆಟಗಾರ ವಿಲ್ ಯಂಗ್ ತಾನು ಎದುರಿಸಿದ ಮೊದಲ ಎಸೆತದಲ್ಲಿಯೇ ವಿಕೆಟ್ ಕಳೆದುಕೊಂಡು ತಂಡಕ್ಕೆ ಆಘಾತ ನೀಡಿದರು. ಆದರೆ ಅದಾದ ಬಳಿಕ ಇಂಗ್ಲೆಂಡ್ ತಂಡಕ್ಕೆ ಆಗಿದ್ದು ಆಘಾತದ ಮೇಲೆ ಆಘಾತ.

World cup, match 1: New Zealand beat england by 9 wickets at Ahmadabad

ಕಾನ್ವೆ-ರಚಿನ್ ಅಜೇಯ ಆಟ
ಮೊದಲ ವಿಕೆಟ್ ಶೀಘ್ರವಾಗಿ ಕಳೆದುಕೊಂಡ ಬಳಿಕ ಮೂರನೇ ಕ್ರಮಾಂಕದಲ್ಲಿ ರಚಿನ್ ರವೀಂದ್ರ ಕಣಕ್ಕಿಳಿದರು. ಈ ಜೋಡಿ ಇಂಗ್ಲೆಂಡ್ ತಂಡದ ಬೌಲಿಂಗ್ ದಾಳಿಯನ್ನು ಸತತವಾಗಿ ದಂಡಿಸುತ್ತಾ ಸಾಗಿದತು. ಇಂಗ್ಲೆಂಡ್ ತಂಡಕ್ಕೆ ಮತ್ತೆ ಯಾವುದೇ ಒಂದು ಅವಕಾಶವನ್ನು ನೀಡದ ಕಿವೀಸ್ ಪಡೆ ಅಮೋಘವಾಗಿ ರನ್ ಬೆನ್ನಟ್ಟುತ್ತಾ ಮುನ್ನುಗ್ಗಿತು. ಡೆವೋನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಇಬ್ಬರು ಕೂಡ ಅಜೇಯ ಶತಕವನ್ನು ಕೂಡ ಸಂಪೂರ್ಣಗೊಳಿಸಿದರು.

ಈ ಪಂದ್ಯದಲ್ಲಿ ಡೆವೀನ್ ಕಾನ್ವೆ 121 ಎಸೆತಗಳಲ್ಲಿ 152 ರನ್‌ಗಳನ್ನು ಬಾರಿಸಿ ಅಬ್ಬರಿಸಿದರು. 19 ಬೌಂಡರಿ ಹಾಗೂ 3 ಸಿಕ್ಸರ್‌ಗಳ್ನು ಈ ಇನ್ನಿಂಗ್ಸ್ ಒಳಗೊಂಡಿತ್ತು. ಇನ್ನು ಮತ್ತೊಂದೆಡೆ ಯುವ ಆಟಗಾರ ರಚಿನ್ ರವೀಂದ್ರ ಕೇವಲ 96 ಎಸೆತಗಳನ್ನು ಎದುರಿಸಿದ್ದು 123 ರನ್‌ಗಳನ್ನು ಕಲೆಹಾಕಿದರು. 11 ಬೌಂಡರಿ ಹಾಗೂ 5 ಸಿಕ್ಸರ್‌ಗಳು ಈ ಇನ್ನಿಂಗ್ಸ್‌ನಲ್ಲಿದ್ದವು. ಇಂಗ್ಲೆಂಡ್ ತಂಡದ ನೀಡಿದ 283 ರನ್‌ಗಳ ಸವಾಲಿನ ಗುರಿಯನ್ನು ಈ ಜೋಡಿ ಕೇವಲ 36.2 ಓವರ್‌ಗಳಲ್ಲಿಯೇ ತಲುಪಿ ಅಮೋಘ ಗೆಲುವು ಸಾಧಿಸಿ ಸಂಭ್ರಮಿಸಿದೆ.

ಇನ್ನು ಇದಕ್ಕೂ ಮುನ್ನ ಇಂಗ್ಲೆಂಡ್ ತಂಡ ಮೊದಲ ವಿಕೆಟ್‌ಗೆ 40 ರನ್‌ಗಳ ಜೊತೆಯಾಟವನ್ನು ಪಡೆದ ಬಳಿಕ ಉತ್ತಮ ಜೊತೆಯಾಟ ಪಡೆಯಲು ವಿಫಲವಾಯಿತು. ಹೀಗಾಗಿ 118 ರನ್‌ಗಳಾಗುವಷ್ಟರಲ್ಲಿ 4 ವಿಕೆ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಕಿವಿಸ್ ಬೌಲಿಂಗ್ ವಿಭಾಗದ ಮೇಲುಗೈ ಸ್ಪಷ್ಟವಾಗಿತ್ತು. ಆದರೆ ಅನುಭವಿ ಆಟಗಾರ ಜೋ ರೂಟ್ ಹಾಗೂ ನಾಯಕ ಜೋಸ್ ಬಟ್ಲರ್ ಅದ್ಭುತ ಜೊತೆಯಾಟ ನೀಡುವ ಮೂಲಕ ಚೇತರಿಕೆ ನೀಡಿದರು.

ಜೋ ರೂಟ್ ಈ ಪಂದ್ಯದಲ್ಲಿ 77 ರನ್‌ಗಳನ್ನು ಗಳಿಸಿದರೆ ಜೋಸ್ ಬಟ್ಲರ್ 43 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಈ ಮೂಲಕ ಇಂಗ್ಲೆಂಡ್ ಈ ಪಂದ್ಯದಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 282 ರನ್‌ಗಳನ್ನು ಕಲೆ ಹಾಕುವಲ್ಲಿ ಯಶಸ್ವಿಯಾಯಿತು. ಹೀಗಾಗಿ ನ್ಯೂಜಿಲೆಂಡ್ ತಂಡ ಸವಾಲಿನ ಗುರಿ ಪಡೆದುಕೊಂಡಿತು.

ಇಂಗ್ಲೆಂಡ್: ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್

ಬೆಂಚ್: ಬೆನ್ ಸ್ಟೋಕ್ಸ್, ಗಸ್ ಅಟ್ಕಿನ್ಸನ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ

ನ್ಯೂಜಿಲೆಂಡ್: ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ & ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್
ಬೆಂಚ್: ಲಾಕಿ ಫರ್ಗುಸನ್, ಇಶ್ ಸೋಧಿ, ಟಿಮ್ ಸೌಥಿ

Story first published: Thursday, October 5, 2023, 21:00 [IST]
Other articles published on Oct 5, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+