ಕ್ಲಾನೆಸ್ ಮತ್ತೊಂದು ಅಬ್ಬರದ ಶತಕ: ಇಂಗ್ಲೆಂಡ್‌ಗೆ ಗೆಲ್ಲಲು ಭರ್ತಿ 400 ರನ್ ಗುರಿ
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹರಿಣಗಳ ಪಡೆ ರನ್ ಮಳೆ ಹರಿಸಿದ್ದು ಇಂಗ್ಲೆಂಡ್ ತಂಡಕ್ಕೆ ಬೃಹತ್ ಗುರಿ ಮುಂದಿಟ್ಟಿದೆ. ಹೆನ್ರಿಕ್ ಕ್ಲಾಸೆನ್ ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದ್ದು ಅವರಿಗೆ ಮಾರ್ಕೋ ಜಾನ್ಸನ್ ಕೂಡ ಅದ್ಭುವಾದ ಸಾಥ್ ನೀಡಿದ್ದಾರೆ. ಹೀಗಾಗಿ ನಿಗದಿತ 50 ಓವರ್‌ಗಳಲ್ಲಿ ದಕ್ಷಿಇಣ ಆಫ್ರಿಕಾ ತಂಡ 399 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡ ಮೊದಲ ವಿಕೆಟನ್ನು ಎರಡನೇ ಎಸೆತದಲ್ಲಿಯೇ ಕಳೆದುಕೊಂಡಿತ್ತು. ಕ್ವಿಂಟನ್ ಡಿಕಾಕ್ ಅಗ್ಗಕ್ಕೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ಆದರೆ ಎರಡನೇ ವಿಕೆಟ್‌ಗೆ ರೀಸ್ ಹೆಂಡ್ರಿಕ್ಸ್ ಹಾಗೂ ರಾಸ್ಸೀ ವಾನ್ ಡರ್ ಡುಸೆನ್ 121 ರನ್‌ಗಳ ಬೃಹತ್ ಜೊತೆಯಾಟ ನೀಡಿದರು. ಡುಸೆನ್ 60 ರನ್‌ಗಳಿಸಿ ವಿಕೆಟ್ ಕಲೆದುಕೊಂಡರೆ ಹೆಂಡ್ರಿಕ್ಸ್ 85 ರನ್‌ಗಳಿಸಿ ಔಟಾದರು.

ನಂತರ ಐಡೆನ್ ಮಾರ್ಕ್ರಮ್ ಹಾಗೂ ಕ್ಲಾಸೆನ್ ಮತ್ತೊಂದು ಉತ್ತಮ ಜೊತೆಯಟದಲ್ಲಿ ಭಾಗಿಯಾದರು. ಮಾರ್ಕ್ರಮ್ 42 ರನ್‌ಗಳಿಗೆ ಔಟಾದರೆ ನಂತರ ಬಂದ ಡೇವಿಡ್ ಮಿಲ್ಲರ್ 5 ರನ್‌ಗಳಿಗೆ ಔಟಾಗಿ ನಿರಾಸೆಯುಂಟು ಮಾಡಿದರು. ಆದರೆ ಬಳಿಕ ಕಣಕ್ಕಿಳಿದ ಮಾರ್ಕೋ ಜಾನ್ಸನ್ ಕ್ಲಾಸೆನ್ ಜೊತೆಗೆ ಅಮೋಘ ಜೆತೆಯಾಟದಲ್ಲಿ ಭಾಗಿಯಾದರು.
ಕ್ಲಾಸೆನ್ ಹಾಗೂ ಜಾನ್ಸನ್ ಜೋಡಿ 76 ಎಸೆತಗಳಲ್ಲಿ ಬರೊಬ್ಬರಿ 151 ರನ್‌ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ. 67 ಎಸೆತಗಳನ್ನು ಎದುರಿಸಿದ ಕ್ಲಾಸೆನ್ 109 ರನ್‌ಗಳನ್ನು ಬಾರಿಸಿ ಅಂತಿಮ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡರು. ಇನ್ನು ಮಾರ್ಕೋ ಜಾನ್ಸನ್ 42 ಎಸೆತಗಳಲ್ಲಿ 75 ರನ್ ಬಾರಿಸಿ ಅಜೇಯವಾಗುಳಿಸಿದ್ದಾರೆ. ಈ ಇಬ್ಬರ ಅಬ್ಬರದ ಆಟದಿಂದಾಗಿ ದಕ್ಷಿಣ ಆಫ್ರಿಕಾ 399 ರನ್‌ಗಳನ್ನು ಬಾರಿಸಿದೆ.
ಇಂಗ್ಲೆಂಡ್: ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್), ಡೇವಿಡ್ ವಿಲ್ಲಿ, ಆದಿಲ್ ರಶೀದ್, ಗಸ್ ಅಟ್ಕಿನ್ಸನ್, ಮಾರ್ಕ್ ವುಡ್, ರೀಸ್ ಟೋಪ್ಲಿ
ಬೆಂಚ್: ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಸ್ಯಾಮ್ ಕರ್ರಾನ್, ಲಿಯಾಮ್ ಲಿವಿಂಗ್ಸ್ಟೋನ್
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೋಟ್ಜಿ, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ
ಬೆಂಚ್: ತೆಂಬಾ ಬವುಮಾ, ತಬ್ರೈಜ್ ಶಮ್ಸಿ, ಆಂಡಿಲೆ ಫೆಹ್ಲುಕ್ವಾಯೊ, ಲಿಜಾದ್ ವಿಲಿಯಮ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications