World cup 2023: ಪಾಕಿಸ್ತಾನ vs ಬಾಂಗ್ಲಾದೇಶ ಮುಖಾಮುಖಿ: ಸಮಯ, ಪಿಚ್ ರಿಪೋರ್ಟ್, ಸಂಭಾವ್ಯ ಆಡುವ ಬಳಗ
ವಿಶ್ವಕಪ್ ಟೂರ್ನಿಯ 31 ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಲಿದ್ದು ಪೈಪೋಟಿಯ ಪ್ರದರ್ಶನವನ್ನು ಕ್ರಿಕೆಟ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಆದರೆ ಈ ಎರಡು ತಂಡಗಳು ಕೂಡ ಈವರೆಗಿನ ಪಂದ್ಯಗಳಲ್ಲಿ ಹೀನಾಯವಾದ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಪಾಕಿಸ್ತಾನ ತಂಡ ಬಳಿಕ ಸತತವಾಗಿ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಈ ಮೂಲಕ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಸ್ಪರ್ಧೆಯಿಂದ ಬಹುತೇಕ ಹೊರಬಿದ್ದಂತಾಗಿದೆ. ಹಾಗಿದ್ದರೂ ಪಾಕ್ ಪಡೆ ತನ್ನ ಕೊನೆಯ ಪ್ರಯತ್ನವನ್ನು ಮುಂದುವರಿಸಲಿದೆ. ಮತ್ತೊಂದೆಡೆ ಬಾಂಗ್ಲಾದೇಶ ಟೂರ್ನಿಯಲ್ಲಿ ಆಡಿದ ಆರು ಪಂದ್ಯಗಳ ಪೈಕಿ ಗೆಲುವು ಸಾಧಿಸಿದ್ದು ಕೇವಲ ಒಂದು. ಹೀಗಾಗಿ ಮತ್ತೊಂದು ಗೆಲುವಿಗಾಗಿ ಈ ಪಂದ್ಯದಲ್ಲಿ ಸರ್ವ ಪ್ರಯತ್ನ ನಡೆಸಲಿದೆ.

ಪಂದ್ಯ ಸಮಯ ಹಾಗೂ ನೇರಪ್ರಸಾರದ ಮಾಹಿತಿ
ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳ ವಿರುದ್ಧದ ಪಂದ್ಯ ಮಂಗಳವಾರ ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದ್ದು 1:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಈ ಪಂದ್ಯದ ನೇರಪ್ರಸಾರ ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ಇರಲಿದ್ದು ಹಾಟ್‌ಸ್ಟಾರ್‌ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದಾಗಿದೆ.
ಪಾಕಿಸ್ತಾನ ತಂಡ
ಬಾಬರ್ ಆಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಇಫ್ತಿಕರ್ ಅಹ್ಮದ್, ಸೌದ್ ಶಕೀಲ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಂ ಜೂನಿಯರ್, ಹಾರಿಸ್ ರೌಫ್, ಉಸಾಮಾ ಮಿರ್, ಹಸನ್ ಅಲಿ, ಫಖರ್ ಜಮಾನ್, ಅಘಾ ಸಲ್ಮಾನ್
ಬಾಂಗ್ಲಾದೇಶ ತಂಡ
ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಲಿಟ್ಟನ್ ದಾಸ್, ತಂಜಿದ್ ಹಸನ್, ಮೆಹಿದಿ ಹಸನ್ ಮಿರಾಜ್, ನಜ್ಮುಲ್ ಹೊಸೈನ್ ಶಾಂಟೊ, ಮಹಮ್ಮದುಲ್ಲಾ, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ, ನಸುಮ್ ಅಹ್ಮದ್, ತೌಹಿದ್ ಹೃದಯ್, ಹಸನ್ ಮಹಮೂದ್, ತಂಝಿಮ್ ಹಸನ್ ಸಾಕಿಬ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications