ವಾಂಖೆಡೆಯಲ್ಲಿ ಭಾರತದ ಬ್ಯಾಟಿಂಗ್ ವೈಭವ: ಶ್ರೀಲಂಕಾಗೆ ಗೆಲ್ಲಲು ಬೃಹತ್ ಗುರಿ
ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದೆ. ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಆಗಾರರ ಅಮೋಘ ಬ್ಯಾಟಿಂಗ್‌ನ ಕಾರಣದಿಂದಾಗಿ ಟೀಮ್ ಇಂಡಿಯಾ ಬೃಹತ್ ಮೊತ್ತ ಕಲೆ ಹಾಕುವಲ್ಲಿ ಯಶಸ್ವುಯಾಗಿದೆ. ಈ ಪಂದ್ಯದಲ್ಲಿ ಶ್ರೀಲಂಕಾಗೆ ಗೆಲ್ಲಲು ಭಾರತ ತಂಡ ಬರೊಬ್ಬರಿ 358 ರನ್‌ಗಳ ಗುರಿ ನಿಗದಿಪಡಿಸಿದೆ.
ಟೀಮ್ ಇಂಡಿಯಾ ಪರವಾಗಿ ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದು ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಐಯ್ಯರ್. ಆರಂಭದಲ್ಲಿ ಗಿಲ್ ಹಾಗೂ ಕೊಹ್ಲಿ ಇನ್ನಿಂಗ್ಸ್ ಕಟ್ಟಿದರೆ ಶ್ರೇಯಸ್ ಐಯ್ಯರ್ ರನ್ ವೇಗವನ್ನು ಹೆಚ್ಚಿಸಿ ಬೃಹತ್ ಮೊತ್ತದತ್ತ ಹೆಜ್ಜೆಯಿಡಲು ಕಾರಣವಾದರು. ಶುಬ್ಮನ್ ಗಿಲ್ ನರ್ವಸ್ ನೈಂಟಿಗೆ ವಿಕೆಟ್ ಕಳೆದುಕೊಂಡರೆ ಕೊಹ್ಲಿ 49ನೇ ಏಕದಿನ ಶತಕಗಳಿಸುವ ಅವಕಾಶದಿಂದ ಅಲ್ಪ ಅಂತರದಿಂದ ವಂಚಿತವಾದರು.

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿಯೇ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದರು. ಆದರೆ ಬಳಿಕ ಜೊತೆಯಾಟ ಶುಬನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಭರ್ಜರಿ ಜೊತೆಯಾಟ ನೀಡುವ ಮೂಲಕ ಅಬ್ಬರಿಸಿದರು. 189 ರನ್‌ಗಳ ಜೊತೆಯಾಟವಾಡುತ್ತಿದ್ದ ಸಂದರ್ಭದಲ್ಲಿ 92 ರನ್‌ಗಳಿಸಿ ಶತಕದತ್ತ ಹೆಜ್ಜೆಯಿಡುತ್ತಿದ್ದಾಗ ಅನಗತ್ಯ ಹೊಡೆತಕ್ಕೆ ಮುಂದಾಗಿ ವಿಕೆಟ್ ಕಳೆದುಕೊಂಡರು. ಈ ಮೂಲಕ ಗಿಲ್ ಶತಕವಂಚಿತವಾದರು.
ಮತ್ತೊಂದೆಡೆ ವಿರಾಟ್ ಕೊಹ್ಲಿ ತಮ್ಮ 49ನೇ ಶತಕದತ್ತ ಹೆಜ್ಜೆಡಯಿಡುತ್ತಿದ್ದಾಗಲೇ ಅವರು ಕೂಡ ಲಂಕಾ ವೆಗಿ ಮದುಶಂಕಾಗೆ ಬಲಿಯಾದರು. ಈ ಮೂಲಕ ಮತ್ತೊಮ್ಮೆ 49ನೇ ಶತಕದ ಅಂಚಿನಲ್ಲಿ ಎಡವು ನಿರಾಸೆ ಅನುಭವಿಸಿದ್ದಾರೆ. 94 ಎಸೆತಗಳನ್ನು ಎದುರಿಸಿದ ಕೊಹ್ಲಿ 88 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ನಂತರ ಶ್ರೇಯಸ್ ಐಯ್ಯರ್ ಸ್ಪೋಟಕ ಪ್ರದರ್ಶನ ನೀಡುವ ಮೂಲಕ ತಂಡದ ರನ್ ವೇಗವನ್ನು ಹೆಚ್ಚಿಸಿದರು. 56 ಎಸೆತಗಳನ್ನು ಎದುರಿಸಿದ ಐಯ್ಯರ್ 82 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಇನ್ನು ಉಳಿದಂತೆ ಕೆಎಲ್ ರಾಹುಲ್ 21 ರನ್‌ಗಳಿಸಿದರೆ ಸೂರ್ಯಕುಮಾರ್ ಯಾದವ್ 12 ರನ್‌ಗಳ ಕೊಡುಗೆ ನೀಡಿದರು. ರವೀಂದ್ರ ಜಡೇಜಾ ಅವರ ಬ್ಯಾಟ್‌ನಿಂದ 35 ರನ್‌ಗಳ ಕೊಡುಗೆ ಬಂದಿದೆ.
ಇನ್ನು ಶ್ರೀಲಂಕಾ ಪರವಾಗಿ ದಿಲ್ಶನ್ ಮದುಶಂಕ ಈ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದು ಮಿಂಚಿದ್ದಾರೆ. ಆದರೆ 10 ಓವರ್‌ಗಳಲ್ಲಿ ಅವರು 80 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು ಎನ್ನುವುದು ಕೂಡ ಗಮನಾರ್ಹ ಅಂಶ. ಒಂದು ವಿಕೆಟ್ ದುಶ್ಮಂತ ಚಮೀರಾ ಪಾಲಾಯಿತು. ಇನ್ನು ಈ ಪಂದ್ಯದಲ್ಲಿಯೂ ಶ್ರೀಲಂಕಾದ ಸ್ಪಿನ್ನರ್‌ಗಳು ಮಿಂಚಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ.
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ನಾಯಕ & ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ದುಶನ್ ಹೇಮಂತ, ಮಹೇಶ್ ತೀಕ್ಷಣ, ಕಸುನ್ ರಜಿತ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ
ಬೆಂಚ್: ಧನಂಜಯ ಡಿ ಸಿಲ್ವಾ, ಚಾಮಿಕಾ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಕುಸಲ್ ಪೆರೇರಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications