Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಕದಿನ ಕ್ರಿಕೆಟ್ ಗೆ ಮೈಕಲ್ ಕ್ಲಾರ್ಕ್ ವಿದಾಯ

ಮೆಲ್ಬೋರ್ನ್, ಮಾ. 28: ಆಸ್ಟ್ರೇಲಿಯಾಕ್ಕೆ ಮತ್ತೊಂದು ವಿಶ್ವವಕಪ್ ಕಿರೀಟ ತೊಡಿಸಿ ನಾಯಕ ಮೈಕಲ್ ಕ್ಲಾರ್ಕ್ ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಹೊಂದಲು ಬಯಸಿದ್ದಾರೆ.

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ಕ್ಲಾರ್ಕ್ ತಮ್ಮ ಅಂತಿಮ ಪಂದ್ಯ ಆಡುವುದು ಖಚಿತವಾಗಿದೆ. ವಿಶ್ವಕಪ್ ಫೈನಲ್ ಪಂದ್ಯ ಮೈಕಲ್ ಕ್ಲಾರ್ಕ್ ಅವರಿಗೂ ವೃತ್ತಿಜೀವನದ ಕೊನೆಯ ಪಂದ್ಯವಾಗಲಿದೆ. ತೀವ್ರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕ್ಲಾರ್ಕ್ ಕೆಲ ಕಾಲ ತಂಡದಿಂದ ಹೊರಗುಳಿದಿದ್ದರು.[ವಿಶ್ವಕಪ್ ಜರ್ನಿ: ಅಡಿಲೇಡ್ ನ ಅಬ್ಬರದಿಂದ ಸಿಡ್ನಿ ಸೋಲಿನ ತನಕ]

World Cup: Michael Clarke to retire from one-day cricket

21 ನೇ ವರ್ಷದಲ್ಲಿ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕ್ಲಾರ್ಕ್ 244 ಪಂದ್ಯಗಳನ್ನು ಆಡಿದ್ದು 7,907 ರನ್ ಗಳಿಸಿದ್ದಾರೆ. ಜತೆಗೆ 57 ವಿಕೆಟ್ ಗಳನ್ನು ಕಿತ್ತಿದ್ದಾರೆ. ರಿಕಿ ಪಾಂಟಿಂಗ್ ನಂತರ ಆಸ್ರ್ಟೇಲಿಯಾ ಕ್ರಿಕೆಟ್ ತಂಡದ ಮುಂದಾಳತ್ವವನ್ನು ಸಮರ್ಥವಾಗಿ ನಿಭಾಯಿಸಿದ ಕೀರ್ತಿ ಕ್ಲಾರ್ಕ್ ಗೆ ಸಲ್ಲುತ್ತದೆ.[ಟೀಕೆ ಬಿಡಿ, ಧೋನಿ ಪಡೆಗೆ ಬೆನ್ನು ತಟ್ಟಿ]

ಈ ಮೂಲಕ 2015 ರ ವಿಶ್ವಕಪ್ ಅಭಿಯಾನ ಅನೇಕ ಆಟಗಾರರ ವಿದಾಯಕ್ಕೆ ಸಾಕ್ಷಿಯಾಗುತ್ತಿದೆ. ಪಾಕಿಸ್ತಾನದ ಶಾಹೀದ್ ಆಫ್ರಿದಿ, ಮುಸ್ಬಾ ಉಲ್ ಹಕ್, ಶ್ರೀಲಂಕಾದ ಕುಮಾರ ಸಂಗಕ್ಕಾರ, ಮಹೇಲಾ ಜಯವರ್ಧನೆ ಸಹ ಕೆಲ ದಿನಗಳ ಹಿಂದೆಯಷ್ಟೇ ವಿದಾಯ ಘೋಷಿಸಿದ್ದರು.

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+