Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪರ್ತ್: ಭಾರತಕ್ಕೆ ಆಘಾತ! ವೇಗಿ ಶಮಿ ಅಲಭ್ಯ

ಪರ್ತ್, ಫೆ.27: ಯುಎಇ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಫ್ಯಾನ್ಸ್ ಮುನಿಸಿಕೊಂಡಿರುವ ಸುದ್ದಿ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಸುದ್ದಿ ಟೀಂ ಮ್ಯಾನೇಜ್ಮೆಂಟ್ ನಿಂದ ಬಂದಿದೆ. ವೇಗಿಗಳಿಗೆ ನೆರವಾಗುವ ಪರ್ತ್ ಪಿಚ್ ನಲ್ಲಿ ಪ್ರಮುಖ ವೇಗಿ ಮಹಮ್ಮದ್ ಶಮಿ ಅಲಭ್ಯರಾಗಿದ್ದಾರೆ.

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮಹಮ್ಮದ್ ಶಮಿ ಅವರು ವಾಕಾ ಮೈದಾನದಲ್ಲಿ ಕ್ರೀಸಿಗಿಳಿಯುತ್ತಿಲ್ಲ. ಮಹಮ್ಮದ್ ಶಮಿ ಅವರ ಎಡಗಾಲಿಗೆ ಗಾಯವಾಗಿದ್ದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧದ ಪಂದ್ಯವಾಡಲು ಸಾಧ್ಯವಾಗುತ್ತಿಲ್ಲ ಎಂದು ಟೀಂ ಇಂಡಿಯಾ ಪ್ರಕಟಿಸಿದೆ.

ಗಾಯಗೊಂಡು ಚೇತರಿಸಿಕೊಂಡಿರುವ ಮತ್ತೊಬ್ಬ ವೇಗಿ ಭುವನೇಶ್ವರ್ ಕುಮಾರ್ ಅವರು ಕಣಕ್ಕಿಳಿಯುವ ಸಾಧ್ಯತೆಯಿದೆ. ವಿಶ್ವಕಪ್ 2015ರಲ್ಲಿ 2 ಪಂದ್ಯಗಳಿಂದ ಶಮಿ 6 ವಿಕೆಟ್ ಕಿತ್ತಿದ್ದು, 10.83 ವಿಕೆಟ್ ಸರಾಸರಿ ಹಾಗೂ 3.82 ಎಕಾನಮಿ ಹೊಂದಿದ್ದಾರೆ.

World Cup: Mohammed Shami ruled out of UAE game

ಪಾಕಿಸ್ತಾನ ವಿರುದ್ಧ 4/35 ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ 2 ವಿಕೆಟ್ ಕಿತ್ತು ರನ್ ನಿಯಂತ್ರಿಸಿದ್ದರು. ಹೀಗಾಗಿ ಶಮಿ ಇಲ್ಲದಿರುವುದು ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತವಾಗಬಹುದು.

24 ವರ್ಷ ವಯಸ್ಸಿನ ಶಮಿ 42 ಏಕದಿನ ಕ್ರಿಕೆಟ್ ಪಂದ್ಯಗಳಿಂದ 76 ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ. ಮಾ.6 ರಂದು ವೆಸ್ಟ್ ಇಂಡೀಸ್ ವಿರುದ್ಧ ನಡೆಯುವ ಪಂದ್ಯಕ್ಕೆ ಶಮಿ ಲಭ್ಯರಾಗುತ್ತಾರೆ ಎಂಬ ಭರವಸೆ ಟೀಂ ಇಂಡಿಯಾ ವ್ಯಕ್ತಪಡಿಸಿದೆ.

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+