ವಿಶ್ವಕಪ್ ಉದ್ಘಾಟನಾ ಸಮಾರಂಭ : ಕಲ್ಚರ್ ಜೊತೆ ಕ್ರಿಕೆಟ್ ಬೆರೆತ ಕ್ಷಣ
ಮೆಲ್ಬೋರ್ನ್/ಕ್ರೈಸ್ಟ್ ಚರ್ಚ್, ಫೆ.12: ಐಸಿಸಿ ವಿಶ್ವಕಪ್ 2015 ಟೂರ್ನಿಗೆ ಅಧಿಕೃತವಾಗಿ ಗುರುವಾರ ಚಾಲನೆ ಸಿಕ್ಕಿದೆ. ಕ್ರೈಸ್ಟ್ ಚರ್ಚ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ವಿವಿಧ ದೇಶಗಳ ಸಂಸ್ಕೃತಿ ಅನಾವರಣಗೊಂಡಿತು.
ಮೊದಲ ಪಂದ್ಯ ಫೆ.14ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಜಿಲ್ಯಾಂಡ್ ಮತ್ತು ಶ್ರೀಲಂಕಾ ನಡುವೆ ನಡೆಯಲಿದ್ದು, ನಂತರ ಅದೇ ದಿನ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸೆಣೆಸಲಿವೆ.
ಕೋಟ್ಯಂತರ ಅಭಿಮಾನಿಗಳನ್ನು ತನ್ನತ್ತ ಸೆಳೆದಿರುವ ಕ್ರಿಕೆಟ್ ಹಬ್ಬ ಈಗ ಶುರುವಾಗಿದೆ. 14 ತಂಡಗಳು ಫೆ.14ರಿಂದ ಮಾ.29ರ ತನಕ ನಡೆಯಲಿರುವ ಕ್ರಿಕೆಟ್ ಟೂರ್ನಿಯಲ್ಲಿ ಸೆಣಸಲಿವೆ.

ಈಗಾಗಲೇ ಎಲ್ಲಾ ತಂಡಗಳು ವಿಶ್ವಕಪ್‌ಗೆ ತಯಾರಿ ಪೂರ್ಣಗೊಳಿಸಿ ಉದ್ಘಾಟನಾ ಪಂದ್ಯ ನಡೆಯಲಿರುವ ತಾಣಕ್ಕೆ ಬಂದಿಳಿದಿವೆ. ಕ್ರೈಸ್ಟ್ ಚರ್ಚ್ ನ ನಾರ್ಥ್ ಹಗ್ಲೇ ಪಾರ್ಕ್ ನಲ್ಲೇ ಮೊದಲ ಪಂದ್ಯ ನಡೆಯಲಿದೆ.

ನ್ಯೂಜಿಲೆಂಡ್ ನಲ್ಲಿ ಸರ್ ರಿಚರ್ಡ್ ಹಾಡ್ಲಿ, ಸ್ಟೀಫನ್ ಫ್ಲೆಮಿಂಗ್ ಮತ್ತು ಬ್ರೆಂಡನ್ ಮೆಕಲಮ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಜೆ ಮೆಲ್ಬೋರ್ನ್ ನ ಸಿಡ್ನಿ ಮೇಯರ್ ಮ್ಯೂಸಿಕ್ ಬಾಲ್,ಲಿನ್ಲಿತ್‌ಹೋ ಏವ್ ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.

11 ರಾಷ್ಟ್ರಗಳ ಸಾಂಸ್ಕೃತಿಕ ಕಲಾ ವೈವಿಧ್ಯವನ್ನು ಇಲ್ಲಿ ಪ್ರದರ್ಶಿಸಲಾಗಿದೆ.
ಪ್ರಧಾನಿ ಜಾನ್ ಕೀ ಅವರ ಸಂದೇಶ:
ಮೆಲ್ಬೋರ್ನ್ ನ ಸಿಡ್ನಿ ಮೇಯರ್ ಮ್ಯೂಸಿಕ್ ಬಾಲ್,ಲಿನ್ಲಿತ್‌ಹೋ ಏವ್ ನಲ್ಲಿ ಉದ್ಘಾಟನಾ ಸಮಾರಂಭ
ವಿಶ್ವಕಪ್ 2015ರ ನಾಯಕರು
ಭಾರತದ ನಾಯಕ ಎಂಎಸ್ ಧೋನಿ ಹಾಗೂ ಪಾಕಿಸ್ತಾನದ ಮಿಸ್ಬಾ ಉಲ್ ಹಕ್
ನ್ಯೂಜಿಲೆಂಡ್ ನ ಹೇಗಲ್ ಪಾರ್ಕ್ ನ ದೃಶ್ಯ
ಕ್ರೈಸ್ಟ್ ಚರ್ಚ್ ನ ಸಮಾರಂಭದ ಇನ್ನಷ್ಟು ಚಿತ್ರಗಳು
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications