Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಪಾಕ್ ಪಂದ್ಯದ ವೇಳೆ ಪಂತ್, ಝಿವಾ ಮಕ್ಕಳಾಟ-ವಿಡಿಯೋ

ICC World Cup 2019 : ಧೋನಿ ಮಗಳ ಜೊತೆ ಆಟವಾಡಿದ ರಿಷಬ್ ಪಂತ್ ಗೆ ಆಗಿದ್ದೇನು ಗೊತ್ತಾ..? | Oneindia Kannada
World Cup: Pant, Ziva have a blast during India-Pakistan clash

ಮ್ಯಾನ್ಚೆಸ್ಟರ್, ಜೂನ್ 17: ಭಾರತ-ಆಸ್ಟ್ರೇಲಿಯಾ ಪ್ರವಾಸ ಸರಣಿ ವೇಳೆ ಟಿಮ್ ಪೈನೆ, ತನ್ನ ಮಕ್ಕಳನ್ನು ನೋಡಿಕೊಳ್ಳುವಂತೆ ಕಾಲೆಳೆದಾಗ 'ಬೇಬಿಸಿಟ್ಟರ್ ಪಂತ್' ಎಂದು ಖ್ಯಾತಿಯಾಗಿದ್ದ ರಿಷಬ್ ಪಂತ್ ಮತ್ತೀಗ ಧೋನಿ ಪುತ್ರಿ ಝಿವಾಳೊಂದಿಗೆ ಮಕ್ಕಳಾಟಿಗೆ ಆಡಿ ಸುದ್ದಿಯಾಗಿದ್ದಾರೆ. ವಿಡಿಯೋ ವೀಕ್ಷಿಸಿದ ಬಳಿಕ ನೀವಿದನ್ನು ಮಕ್ಕಳಾಟಿಕೆ ಅನ್ನುತ್ತೀರೋ ಇಲ್ಲ ಮಂಗನಾಟ ಅನ್ನುತ್ತೀರೋ ಅದು ನಿಮಗೆ ಬಿಟ್ಟಿದ್ದು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್ ಸ್ಟೇಡಿಯಂನಲ್ಲಿ ಭಾನುವಾರ (ಜೂನ್ 16) ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯದ ವೇಳೆ ಸಾವಿರಾರು ವೀಕ್ಷಕರ ಜೊತೆ ಸ್ಟೇಡಿಯಂನಲ್ಲಿ ಧೋನಿ ಪುತ್ರಿ ಝಿವಾ ಮತ್ತು ರಿಷಬ್ ಪಂತ್ ಕೂಡ ಕುಳಿತುಕೊಂಡಿದ್ದರು.

ಮಕ್ಕಳಾಟಿಕೆಯಾಡುತ್ತ ಮಕ್ಕಳೊಂದಿಗೆ ಬೇಗನೆ ಬೆರೆಯುವ ರಿಷಬ್ ಪಂತ್, ಇತ್ತಂಡಗಳ ಪಂದ್ಯದ ವೇಳೆ ಝಿವಾ ಜೊತೆ ಸಣ್ಣ ಮಕ್ಕಳಂತೆ ಕಿರುಚಾಡಿದ್ದರು. ಈ ವಿಡಿಯೋವನ್ನು ಪಂತ್ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ವಿಡಿಯೋ ಜೊತೆಗೆ, 'ಪಾರ್ಟ್ನರ್ಸ್ ಇನ್ ಕ್ರೈಮ್' (ಅಪರಾಧದಲ್ಲಿ ಪಾಲುದಾರರು) ಎಂಬ ಸಾಲನ್ನೂ ಸೇರಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಗಾಯಾಳಾಗಿ ತಂಡದಿಂದ ಹೊರಗಿರುವುದರಿಂದ ಸ್ಟ್ಯಾಂಡ್‌ ಬೈ ಆಟಗಾರರಾಗಿ ಪಂತ್ ಅವರನ್ನು ಇಂಗ್ಲೆಂಡ್‌ಗೆ ಕರೆಸಿಕೊಳ್ಳಲಾಗಿದೆ. ಆದರೆ ಧವನ್ ಅನುಪಸ್ಥಿತಿ ವಿಜಯ್ ಶಂಕರ್‌ಗೆ ತಂಡದಲ್ಲಿ ಸ್ಥಾನ ನೀಡಿದೆ.

ಸದ್ಯ ತಾನು ಆಡುವ 11ರಲ್ಲಿ ಇಲ್ಲದಿರುವುದರಿಂದ ಪಂತ್ ಅವರು ಇಂಗ್ಲೆಂಡ್‌ನಲ್ಲಿದ್ದು ಅಭ್ಯಾಸ, ಪಂದ್ಯ ವೀಕ್ಷಣೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ನಡುನಡುವೆ ಮಕ್ಕಳಾಟಿಕೆ ಮೂಲಕವೂ ರಂಜಿಸುತ್ತಿದ್ದಾರೆ. ಅಂದ್ಹಾಗೆ ಜೂನ್ 22ರಂದು ಭಾರತ, ಅಫ್ಘಾನಿಸ್ತಾನ ತಂಡದ ಸವಾಲು ಸ್ವೀಕರಿಸಲಿದೆ.

Story first published: Monday, June 17, 2019, 16:00 [IST]
Other articles published on Jun 17, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+