ವಿಶ್ವಕಪ್ 2019: ಭಾರತ ತಂಡದ ಶಕ್ತಿಯ ಗುಟ್ಟು ಬಿಚ್ಚಿಟ್ಟ ರಾಹುಲ್ ದ್ರಾವಿಡ್

ಮುಂಬೈ, ಮೇ 18: ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯಲಿರುವ 2019ರ ವಿಶ್ವಕಪ್, ಹೈ ಸ್ಕೋರಿಂಗ್ ವಿಶ್ವಕಪ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಹೀಗಿದ್ದೂ ಟೀಮ್ ಇಂಡಿಯಾವು ಟೂರ್ನಿಯಲ್ಲಿ ಮೇಲುಗೈ ಸಾಧಿಸಲು ಇರುವ ಅವಕಾಶವನ್ನು ಭಾರತದ ಬ್ಯಾಟಿಂಗ್ ದಂತಕತೆ, ಕನ್ನಡಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಬ್ಯಾಟಿಂಗ್ ಪಿಚ್‌ನಲ್ಲಿ ಪಂದ್ಯವಿರುವಾಗ ಎದುರಾಳಿ ಬ್ಯಾಟ್ಸ್ಮನ್‌ಗಳನ್ನು ಕಟ್ಟಿ ಹಾಕಲು ನಮ್ಮ ಬೌಲಿಂಗ್ ವಿಭಾಗ ಸಮರ್ಥವಿರಬೇಕು. ಆದ್ದರಿಂದ ಬಲಿಷ್ಠ ಬೌಲಿಂಗ್ ವಿಭಾಗ ಈ ಸಾರಿಯ ವಿಶ್ವಕಪ್‌ನಲ್ಲಿ ತಂಡದ ನೆರವಿಗೆ ಬರಲಿದೆ ಎಂದು 'ಗ್ರೇಟ್ ವಾಲ್ ಆಫ್ ಇಂಡಿಯಾ' ಅಭಿಪ್ರಾಯಿಸಿದ್ದಾರೆ.
'ಕಳೆದ ವರ್ಷ 'ಎ' ತಂಡದ ಪ್ರವಾಸದ ವೇಳೆ ಇಂಗ್ಲೆಂಡ್ ಪರಿಸ್ಥಿತಿಯನ್ನು ನಾನು ಗಮನಿಸಿದಂತೆ, ಈ ಬಾರಿಯದ್ದು ಹೈ ಸ್ಕೋರಿಂಗ್ ವಿಶ್ವಕಪ್ ಅನ್ನಿಸಲಿದೆ. ಹಾಗಾಗಿ ಪಂದ್ಯದ ಮಧ್ಯ ಭಾಗದಲ್ಲಿ ವಿಕೆಟ್ ಪಡೆಯಬಲ್ಲ ಬೌಲರ್‌ಗಳು ನಮ್ಮ ಪಾಲಿಗೆ ಪ್ರಮುಖರಾಗಿ ಕಾಣಿಸುತ್ತಾರೆ' ಎಂದು ದ್ರಾವಿಡ್ ನುಡಿದರು.
ಮಾತು ಮುಂದುವರೆಸಿದ ಮಾಜಿ ನಾಯಕ, 'ಎದುರಾಳಿ ತಂಡ ರನ್ ಕದಿಯುವಿಕೆಗೆ ಕಡಿವಾಣ ಹಾಕಬಲ್ಲ ಬೌಲರ್‌ಗಳಿರುವುದರಿಂದ ಈ ವಿಚಾರದಲ್ಲಿ ಭಾರತ ತಂಡ ಅದೃಷ್ಠಶಾಲಿ. ವಿಕೆಟ್ ಪಡೆಯಬಲ್ಲ ಜಸ್‌ಪ್ರೀತ್ ಬೂಮ್ರಾ, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್ ಅವರಂತ ಬೌಲರ್‌ಗಳನ್ನು ನಾವು ಹೊಂದಿದ್ದೇವೆ' ಎಂದು ವಿವರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications