ವಿಶ್ವಕಪ್ ಅರ್ಹತಾ ಸುತ್ತಿನ ಟೂರ್ನಿಯ 9ನೇ ಪಂದ್ಯದಲ್ಲಿ ಇಂದು ಶ್ರೀಲಂಕಾ ಹಾಗೂ ಒಮನ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಒಮನ್ ತಂಡ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ.
ಈ ಟೂರ್ನಿಯಲ್ಲಿ ಒಮನ್ ತಂಡ ಆಡಿರುವ ಎರಡು ಪಂದ್ಯಗಳಲ್ಲಿ ನೀಡಿರುವ ಪ್ರದರ್ಶನದಿಂದಾಗಿ ಸಾಕಷ್ಟು ಆತ್ಮಿಶ್ವಾಸದಲ್ಲಿರುವುದರಲ್ಲಿ ಅನುಮಾನವಿಲ್ಲ. ಎರಡು ಪಂದ್ಯಗಳಲ್ಲಿ ಎರಡನ್ನೂ ಗೆದ್ದಿರುವ ಒಮನ್ ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಬೃಹತ್ ಮೊತ್ತವನ್ನು ಬೆನ್ನಟ್ಟಿ 5 ವಿಕೆಟ್‌ಗಳ ಅಂತರದಿಂದ ಗೆದಿದ್ದರೆ ಎರಡನೇ ಪಂದ್ಯದಲ್ಲಿ ಯುಎಇ ವಿರುದ್ಧವೂ ಭರ್ಜರಿ ಗೆಲುವು ಸಾಧಿಸಿದೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿಯೂ ಮಿಂಚುವ ವಿಶ್ವಾಸದಲ್ಲಿದೆ ಒಮನ್ ಪಡೆ.

ಇನ್ನು ಶ್ರೀಲಂಕಾ ತಂಡಕ್ಕೆ ಇದು ಎರಡನೇ ಪಂದ್ಯವಾಗಿದ್ದು ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಭಾರೀ ಅಂತರದಿಂದ ಗೆಲುವು ಸಾಧಿಸಿದೆ. ಇದೀಗ ಒಮನ್ ತಂಡದ ವಿರುದ್ಧ ಕಣಕ್ಕಿಳಿಯುತ್ತಿದ್ದು ಯಾವ ರೀತಿಯ ಕಾದಾಟ ನಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಇನ್ನು ಎರಡು ತಂಡಗಳು ಕೂಡ ಈ ಪಂದ್ಯದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿಯುತ್ತಿದೆ.
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ವಾಕ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ದಸುನ್ ಶನಕ (ಸಿ), ಧನಂಜಯ ಡಿ ಸಿಲ್ವ, ವನಿಂದು ಹಸರಂಗ, ಮಹೇಶ್ ತೀಕ್ಷಣ, ಕಸುನ್ ರಜಿತ, ಲಹಿರು ಕುಮಾರ
ಬೆಂಚ್: ಮಥೀಶ ಪತಿರಣ, ದುಶನ್ ಹೇಮಂತ, ಚಾಮಿಕ ಕರುಣರತ್ನ, ದುಷ್ಮಂತ ಚಮೀರ
ಒಮನ್ ಆಡುವ ಬಳಗ: ಕಶ್ಯಪ್ ಪ್ರಜಾಪತಿ, ಜತೀಂದರ್ ಸಿಂಗ್, ಅಕಿಬ್ ಇಲ್ಯಾಸ್, ಶೋಯೆಬ್ ಖಾನ್, ಜೀಶನ್ ಮಕ್ಸೂದ್ (ಸಿ), ಮೊಹಮ್ಮದ್ ನದೀಮ್, ಅಯಾನ್ ಖಾನ್, ನಸೀಮ್ ಖುಷಿ (wk), ಬಿಲಾಲ್ ಖಾನ್, ಜೇ ಒಡೆದ್ರಾ, ಫಯಾಜ್ ಬಟ್
ಬೆಂಚ್: ಸಂದೀಪ್ ಗೌಡ್, ರಫೀವುಲ್ಲಾ, ಸಮಯ್ ಶ್ರೀವಾಸ್ತವ್, ಸೂರಜ್ ಕುಮಾರ್, ಅದೀಲ್ ಶಫೀಕ್, ಕಲೀಮುಲ್ಲಾ