World Cup Qualifiers: ಯುಎಇಯನ್ನು ಸುಲಭವಾಗಿ ಮಣಿಸಿದ ಸ್ಕಾಟ್ಲೆಂಡ್
ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಇಂದು ಸ್ಕಾಟ್ಲೆಂಡ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ಯುಎಇ ಪಡೆಯನ್ನು ಬರೊಬ್ಬರಿ 111 ರನ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಈ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ಸತತ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡ ಆರಂಭಿಕ ಆಘಾತದ ನಂತರವೂ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿತು. ಮೊದಲಿಗೆ 48 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಸ್ಕಾಟ್ಲೆಂಡ್ ತಂಡಕ್ಕೆ ತಂಡದ ನಾಯಕ ಬೆರಿಂಗ್ಟನ್ ಆಸರೆಯಾದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಬೆರಿಂಗ್ಟನ್ ಅವರು ಭರ್ಜರಿ ಶತಕ ಸಿಡಿಸಿದ್ದು 127 ರನ್‌ಗಳ ಕೊಡುಗೆ ನೀಡಿದ್ದಾರೆ. ಇವರಿಗೆ ಮೈಕಲ್ ಲೀಸ್ಕ್ ಹಾಗೂ ಮಾರ್ಕ್ ವಾಟ್ ಉತ್ತಮ ಜೊತೆಯಾಟ ನೀಡಿದ ಕಾರಣ ನಿಗದಿತ 50 ಓವರ್‌ಗಳಲ್ಲಿ 282 ರನ್‌ಗಳನ್ನು ಗಳಿಸಿತು.

ಇನ್ನು ಸ್ಕಾಟ್ಲೆಂಡ್ ತಂಡ ನೀಡಿದ ಈ ಗುರಿಯನ್ನು ಬೆನ್ನಟ್ಟಿದ ಯುಎಇ ತಂಡ ಆರಂಭದಿಂದಲೇ ಹಿನ್ನಡೆಯನ್ನು ಅನುಭವಿಸಿತು. ಸ್ಕಾಟ್ಲೆಂಡ್ ತಂಡದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಯುಎಇ ವಿಫಲವಾಗಿದ್ದು 171 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಯಿತು. ಈ ಮೂಲಕ ಭಾರೀ ಅಂತರದಿಂದ ಸೋಲು ಅನುಭವಿಸಿದೆ.
ಸ್ಕಾಟ್ಲೆಂಡ್ ಆಡುವ ಬಳಗ: ಕ್ರಿಸ್ಟೋಫರ್ ಮ್ಯಾಕ್‌ಬ್ರೈಡ್, ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್), ಬ್ರಾಂಡನ್ ಮೆಕ್‌ಮುಲ್ಲೆನ್, ಜ್ಯಾಕ್ ಜಾರ್ವಿಸ್, ರಿಚಿ ಬೆರಿಂಗ್‌ಟನ್ (ನಾಯಕ), ತೋಮಸ್ ಮ್ಯಾಕಿಂತೋಷ್, ಮೈಕೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಸಫ್ಯಾನ್ ಷರೀಫ್, ಕ್ರಿಸ್ ಸೋಲ್
ಬೆಂಚ್: ಜಾರ್ಜ್ ಮುನ್ಸಿ, ಹಮ್ಜಾ ತಾಹಿರ್, ಆಡ್ರಿಯನ್ ನೀಲ್, ಅಲಾಸ್ಡೇರ್ ಇವಾನ್ಸ್
ಯುಎಇ ಆಡುವ ಬಳಗ: ಮುಹಮ್ಮದ್ ವಸೀಮ್ (ನಾಯಕ), ರೋಹನ್ ಮುಸ್ತಫಾ, ವೃತ್ಯ ಅರವಿಂದ್ (ವಿಕೆಟ್ ಕೀಪರ್), ಆರ್ಯನ್ಸ್ ಶರ್ಮಾ, ಆಸಿಫ್ ಖಾನ್, ಬಾಸಿಲ್ ಹಮೀದ್, ಅಲಿ ನಾಸೀರ್, ಅಯಾನ್ ಅಫ್ಜಲ್ ಖಾನ್, ಕಾರ್ತಿಕ್ ಮೇಯಪ್ಪನ್, ಜಹೂರ್ ಖಾನ್, ಜುನೈದ್ ಸಿದ್ದಿಕ್
ಬೆಂಚ್: ರಮೀಜ್ ಶಹಜಾದ್, ಎಥಾನ್ ಡಿಸೋಜಾ, ಮುಹಮ್ಮದ್ ಜವಾದುಲ್ಲಾ, ಸಂಚಿತ್ ಶರ್ಮಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications