Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

World Cup Qualifiers: ವಿಲಿಯಮ್ಸ್ ಅಬ್ಬರದ ಶತಕ: ದಾಖಲೆಯ ಅಂತರದಿಂದ ಗೆದ್ದ ಜಿಂಬಾಬ್ವೆ

ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ವಿರುದ್ಧ ಜಿಂಬಾಬ್ವೆ ದಾಖಲೆಯ ಅಂತರದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ನಾಯಕ ಶಾನ್ ಮಿಲಿಯಮ್ಸ್ ಅವರ ಬೃಹತ್ ಶತಕದ ನೆರವಿನಿಂದ 408 ರನ್‌ಗಳನ್ನು ಗಳಿಸಿ ತನ್ನ ಐತಿಹಾಸಿಕ ಸಾಧನೆ ಮಾಡಿತು. ಏಕದಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 400ಕ್ಕೂ ಅಧಿಕ ರನ್‌ಗಳಿಸಿದ ಸಾಧನೆ ಮಾಡಿತು ಜಿಂಬಾಬ್ವೆ.

ಟಾಸ್ ಗೆದ್ದ ಯುಎಸ್‌ಎ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡು ಜಿಂಬಾಬ್ವೆ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಈ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡ ಜಿಂಬಾಬ್ವೆ ಬ್ಯಾಟಿಂಗ್‌ನಲ್ಲಿ ಪರಾಕ್ರಮ ತೋರಿದೆ. ಅದರಲ್ಲೂ ನಾಯಕ ಶಾನ್ ವಿಲಿಯಮ್ಸ್ ಅಮೋಗ 174 ರನ್‌ಗಳನ್ನು ಪೇರಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣವಾದರು. ಆರಂಭಿಕ ಆಟಗಾರ ಗುಂಬೀ 78 ರನ್‌ಗಳಿಸಿದರೆ ಸಿಕಂದರ್ ರಾಜಾ ಈ ಪಂದ್ಯದಲ್ಲಿ 48 ರನ್‌ಗಳ ಕೊಡುಗೆ ನೀಡಿದ್ದಾರೆ. ರಿಯಾಬ್ ಬರ್ಲ್ ಅವರಿಂದ 47 ರನ್‌ಗಳ ಕೊಡುಗೆ ಬಂದಿತು. ಹೀಗಾಗಿ ಜಿಂಬಾಬ್ವೆ ತಂಡ ಈ ಪಂದ್ಯದಲ್ಲಿ ನಿಗದಿತ 50 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 408 ರನ್‌ಗಳಿಸಿತು.

World Cup Qualifiers, match 17th: Zimbabwe won by 304 runs against USA

ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಯುಎಸ್‌ಎ ತಂಡ ಆರಂಭದಿಂದಲೇ ಮುಗ್ಗರಿಸುತ್ತಾ ಸಾಗಿತು. ಅಗ್ರ ಕ್ರಮಾಂಕದ ಯಾವುದೇ ಆಟಗಾರ ಕೂಡ ಸಣ್ಣ ಪ್ರತಿರೋಧವನ್ನು ಒಡ್ಡಲು ಕೂಡ ಸಾಧ್ಯವಾಗಲಿಲ್ಲ. ಅಭಿಶೇಕ್ ಪರಾಡ್ಕರ್ ಹಾಗೂ ಜಸ್ದೀಪ್ ಸಿಂಗ್ ಮಾತ್ರ ಕ್ರಮವಾಗಿ 24 ರನ್ ಹಾಗೂ 21 ರನ್‌ಗಳನ್ನು ಗಳಿಸುವ ಮೂಲಕ ತಂಡದ ಮೊತ್ತ ನೂರರ ಗಡಿದಾಟಲು ಕಾರಣವಾದರು. ಅಂತಿಮವಾಗಿ ಕೇವಲ 104 ರನ್‌ಗಳಿಸಿದ ಯುಎಸ್‌ಎ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.

ಈ ಮೂಲಕ ಜಿಂಬಾಬ್ವೆ ಏಕದಿನ ಕ್ರಿಕೆಟ್ ಇತಿಹಾಸದ ಎರಡೇ ಅತಿ ದೊಡ್ಡ ಗೆಲುವು ಸಾಧಿಸಿ ದಾಖಲೆ ಬರೆದಿದೆ. ಈ ಪಂದ್ಯದಲ್ಲಿ ಬರೊಬ್ಬರಿ 304 ರನ್‌ಗಳ ಅಂತರದಿಂದ ಜಿಂಬಾಬ್ವೆ ತಂಡ ಗೆಲುವು ಸಾಧಿಸಿದ್ದು ಈ ಐತಿಹಾಸಿಕ ಸಾಧನೆ ಮಾಡಿದಂತಾಗಿದೆ. ತಂಡದ ಸರ್ವಾಂಗೀಣ ಪ್ರದರ್ಶನ ಈ ವಿಶೇಷ ದಾಖಲೆಗೆ ಕಾರಣ ಎನ್ನುವುದರಲ್ಲಿ ಅನುಮಾನವಿಲ್ಲ.

ಜಿಂಬಾಬ್ವೆ ಆಡುವ ಬಳಗ: ತಡಿವಾನಾಶೆ ಮರುಮಣಿ, ಇನ್ನೋಸೆಂಟ್ ಕೈಯಾ, ವೆಸ್ಲಿ ಮಾಧೆವೆರೆ, ಶಾನ್ ವಿಲಿಯಮ್ಸ್ (ನಾಯಕ), ಸಿಕಂದರ್ ರಜಾ, ರಿಯಾನ್ ಬರ್ಲ್, ಜಾಯ್ಲಾರ್ಡ್ ಗುಂಬಿ (ವಿಕೆಟ್ ಕೀಪರ್), ಬ್ರಾಡ್ ಇವಾನ್ಸ್, ಲ್ಯೂಕ್ ಜೊಂಗ್ವೆ, ವೆಲ್ಲಿಂಗ್ಟನ್ ಮಸಕಡ್ಜಾ, ರಿಚರ್ಡ್ ನ್ಗರವಾ
ಬೆಂಚ್: ಕ್ರೇಗ್ ಎರ್ವಿನ್, ಕ್ಲೈವ್ ಮದಂಡೆ, ಬ್ಲೆಸಿಂಗ್ ಮುಜರಬಾನಿ, ತೆಂಡೈ ಚತಾರಾ

ಯುಎಸ್‌ಎ ಆಡುವ ಬಳಗ: ಸ್ಟೀವನ್ ಟೇಲರ್, ಸುಶಾಂತ್ ಮೊದಾನಿ, ಮೊನಾಂಕ್ ಪಟೇಲ್ (ನಾಯಕ), ಆರನ್ ಜೋನ್ಸ್, ಗಜಾನಂದ್ ಸಿಂಗ್, ಶಯಾನ್ ಜಹಾಂಗೀರ್ (ವಿಕೆಟ್ ಕೀಪರ್), ನಿಸರ್ಗ್ ಪಟೇಲ್, ನೋಸ್ತುಶ್ ಕೆಂಜಿಗೆ, ಜಸ್ದೀಪ್ ಸಿಂಗ್, ಉಸ್ಮಾನ್ ರಫೀಕ್, ಅಭಿಷೇಕ್ ಪರಾಡ್ಕರ್
ಬೆಂಚ್: ಸೈತೇಜ ಮುಕ್ಕಮಲ್ಲ, ಸೌರಭ್ ನೇತ್ರವಲ್ಕರ್, ಅಲಿ ಖಾನ್, ಕೈಲ್ ಫಿಲಿಪ್

Story first published: Monday, June 26, 2023, 20:20 [IST]
Other articles published on Jun 26, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+