World Cup Qualifiers: ಶ್ರೀಲಂಕಾ vs ಯುಎಇ, ಟಾಸ್ ರಿಪೋರ್ಟ್, ಆಡುವ ಬಳಗ, Live ಸ್ಕೋರ್
ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳು ಜಿಂಬಾಬ್ವೆಯಲ್ಲಿ ಆರಂಭವಾಗಿದ್ದ 3ನೇ ಪಂದ್ಯದಲ್ಲಿ ಶ್ರೀಲಂಕಾ ತಂಡ ಯುಎಇ ವಿರುದ್ಧ ಸೆಣೆಸಾಟಕ್ಕೆ ಇಳಿದಿದೆ. ಈ ಪಂದ್ಯದಲ್ಲಿ ಯುಎಇ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಶ್ರೀಲಂಕಾ ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ.
ಇನ್ನು ಟಾಸ್ ಗೆದ್ದ ಬಳಿಕ ಮಾತನಾಡಿದ ಯುಎಇ ನಾಯಕ ಮೊಹಮ್ಮದ್ ವಾಸಿಂ ಪಿಚ್‌ನಲ್ಲಿ ತೇವ ಇರುವ ಕಾರಣ ಮೊದಲಿಗೆ ಬೌಲಿಂಗ್ ನಡೆಸಿ ಆದಷ್ಟು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ಪ್ರುತ್ನ ನಡೆಸಲಿದ್ದೇವೆ ಎಂದಿದ್ದಾರೆ. ಆರಂಭಿಕ ಹಂತದಲ್ಲಿ ಬೇಗನೆ ವಿಕೆಟ್‌ಗಳನ್ನು ಪಡೆಯುವುದು ನಮ್ಮ ಮುಂದಿರುವ ಗುರಿ ಎಂದಿದ್ದಾರೆ. ಇನ್ನು ಶ್ರೀಲಂಕಾ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಿಂದಾಗಿ ನಾವು ಹುರುಪು ಪಡೆದುಕೊಂಡಿದ್ದೇವೆ ಎಂದಿದ್ದಾರೆ.

Live ಸ್ಕೋರ್ ಹೀಗಿದೆ
ಇನ್ನು ಶ್ರೀಲಂಕಾ ನಾಯಕ ದಾಸುನ್ ಶನಕ ಮಾತನಾಡಿದ್ದು ಈ ಪಂದ್ಯದಲ್ಲಿ ಸ್ಪಿನ್ನರ್‌ಗಳಿಂದ ಪರಿಣಾಮಕಾರಿ ಪ್ರದರ್ಶನದ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದಾರೆ. ಏಳು ಮಂದಿ ಬ್ಯಾಟರ್‌ಗಳು ಹಾಗೂ ನಾಲ್ವರು ಪೂರ್ಣಕಾಲಿಕ ಬೌಲರ್‌ಗಳೊಂದಿಗೆ ಕಣಕ್ಕಿಳಿಯುತ್ತಿರುವುದಾಗಿ ಶನಕ ಮಾಹಿತಿ ಹಂಚಿಕೊಂಡಿದ್ದಾರೆ.
ಟೂರ್ನಿಯ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ಹಾಗೂ ನೇಪಾಳ ತಂಡಗಳ ನಡುವೆ ನಡೆದಿದ್ದು ಈ ಪಂದ್ಯದಲ್ಲಿ ಜೀಂಬಾಬ್ವೆ ನೇಪಾಳ ತಂಡವನ್ನು ಮಣಿಸಿತು. ಟಾಸ್ ಸೋತರೂ ನೇಪಾಳ ತಂಡ ಅಗ್ರ ಕ್ರಮಾಂಕದ ಆಟಗಾರರ ಅಮೋಘ ಪ್ರದರ್ಶನದಿಂದಾಗಿ ನಿಗದಿತ 50 ಓವರ್‌ಗಳಲ್ಲಿ ನೇಪಾಳ 290ರನ್‌ಗಳನ್ನು ಕಲೆಹಾಕಿತು. ಆದರೆ ಈ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡದ ಪರವಾಗಿ ಇಬ್ಬರು ಆಟಗಾರರು ಶತಕ ಸಿಡಿಸಿ ಅಬ್ಬರಿಸಿದರು. ನಾಯಕ ಕ್ರೇಗ್ ಇರ್ವಿನ್ ಹಾಗೂ ಸೀನ್ ವಿಲಿಯಮ್ಸ್ ಶತಕ ಸಿಡಿಸಿ ಅಬ್ಬರಿಸಿದರು. ಹೀಗಾಗಿ ನೇಪಾಳ ತಂಡ ನೀಡಿದ 291 ರನ್‌ಗಳ ಮೊತ್ತವನ್ನು 35 ಎಸೆತಗಳು ಬಾಕಿಯಿರುವಂತೆಯೇ ಗೆದ್ದು ಬೀಗಿತು.
ಮತ್ತೊಂದೆಡೆ ಯುಎಸ್‌ಎ ವಿರುದ್ಧ ಮೊದಲಿಗೆ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡಿಸ್ ತಂಡ ಮಧ್ಯಮ ಕ್ರಮಾಂಕದ ಆಟಗಾರರ ಅದ್ಭುತ ಪ್ರದರ್ಶನದಿಂದಾಗಿ 297ರನ್‌ಗಳಿಸಿ ಆಲೌಟ್ ಆಯಿತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಯುಎಸ್‌ಎ ತಂಡ ನಿಗದಿತ 50 ಓವರ್‌ಗಳಲ್ಲಿ 258 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಯಿತು. ಈ ಮೂಲಕ ವೆಸ್ಟ್ ಇಂಡೀಸ್ ಈ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಪ್ಲೇಯಿಂಗ್ XI): ಮುಹಮ್ಮದ್ ವಸೀಮ್ (ನಾಯಕ), ಅಲಿ ನಾಸೀರ್, ವೃತ್ಯ ಅರವಿಂದ್ (ವಿಕೆಟ್ ಕೀಪರ್), ರೋಹನ್ ಮುಸ್ತಫಾ, ಬಾಸಿಲ್ ಹಮೀದ್, ಆಸಿಫ್ ಖಾನ್, ರಮೀಜ್ ಶಹಜಾದ್, ಅಯಾನ್ ಅಫ್ಜಲ್ ಖಾನ್, ಕಾರ್ತಿಕ್ ಮೆಯ್ಯಪ್ಪನ್, ಜಹೂರ್ ಖಾನ್, ಮುಹಮ್ಮದ್ ಜವಾದುಲ್ಲಾ
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಮಹೇಶ್ ತೀಕ್ಷಣ, ಕಸುನ್ ರಜಿತ, ಲಹಿರು ಕುಮಾರ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications