ವಿಶ್ವಕಪ್ ಟೂರ್ನಿಗೂ ಮುನ್ನ ನಡೆಯುತ್ತಿರುವ ಅರ್ಹತಾ ಸುತ್ತಿನಲ್ಲಿ ಎರಡನೇ ದಿನವಾದ ಇಂದು ಐರ್ಲೆಂಡ್ ಹಾಗೂ ಒಮನ್ ತಂಡಗಳು ಮುಖಾಮುಖಿಯಾಗಿದೆ. ಬುಲವಯೋದ ಬುಲವಯೋ ಅಥ್ಲೆಟಿಕ್ ಕ್ಲಬ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಒಮನ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಐರ್ಲೆಂಡ್ ತಂಡ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ.
ಪಿಚ್ ರಿಪೋರ್ಟ್: ಪಿಚ್‌ನಲ್ಲಿ ಉತ್ತಮ ಮಟ್ಟದಲ್ಲಿ ಹುಲ್ಲಿನ ಹೊದಿಕೆ ಇದೆ ಹೀಗಾಗಿ ವೇಗದ ಬೌಲರ್‌ಗಳು ಇಲ್ಲಿ ಉತ್ತಮ ಪ್ರದರ್ಶನ ನೀಡಲು ಅವಕಾಶವಿದೆ.ಅಭ್ಯಾಸ ಪಂದ್ಯಗಳಲ್ಲಿ ಇಲ್ಲಿ ಪೈಪೋಟಿಯ ಪಂದ್ಯಗಳು ನಡೆದಿದ್ದು ಈ ಪಂದ್ಯ ಕೂಡ ಕುತೂಹಲ ಮೂಡಿಸಿದೆ. ತಾಪಮಾನವು ಗರಿಷ್ಠ 26 ಡಿಗ್ರಿ ತಲುಪಲಿದ್ದು ಔಟ್‌ಫೀಲ್ಡ್‌ನಲ್ಲಿ ಇಬ್ಬನಿ ಬೀಳಲಿದೆ. ಆದರೆ ಇದು ಆಟದ ಮೇಲೆ ಪ್ರಮುಖ ಪ್ರಭಾವ ಬೀರುವುದಿಲ್ಲ.

Live score ಹೀಗಿದೆ
ಟೂರ್ನಿಯ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ಹಾಗೂ ನೇಪಾಳ ತಂಡಗಳ ನಡುವೆ ನಡೆದಿದ್ದು ಈ ಪಂದ್ಯದಲ್ಲಿ ಜೀಂಬಾಬ್ವೆ ನೇಪಾಳ ತಂಡವನ್ನು ಮಣಿಸಿತು. ಟಾಸ್ ಸೋತರೂ ನೇಪಾಳ ತಂಡ ಅಗ್ರ ಕ್ರಮಾಂಕದ ಆಟಗಾರರ ಅಮೋಘ ಪ್ರದರ್ಶನದಿಂದಾಗಿ ನಿಗದಿತ 50 ಓವರ್‌ಗಳಲ್ಲಿ ನೇಪಾಳ 290ರನ್‌ಗಳನ್ನು ಕಲೆಹಾಕಿತು. ಆದರೆ ಈ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡದ ಪರವಾಗಿ ಇಬ್ಬರು ಆಟಗಾರರು ಶತಕ ಸಿಡಿಸಿ ಅಬ್ಬರಿಸಿದರು. ನಾಯಕ ಕ್ರೇಗ್ ಇರ್ವಿನ್ ಹಾಗೂ ಸೀನ್ ವಿಲಿಯಮ್ಸ್ ಶತಕ ಸಿಡಿಸಿ ಅಬ್ಬರಿಸಿದರು. ಹೀಗಾಗಿ ನೇಪಾಳ ತಂಡ ನೀಡಿದ 291 ರನ್‌ಗಳ ಮೊತ್ತವನ್ನು 35 ಎಸೆತಗಳು ಬಾಕಿಯಿರುವಂತೆಯೇ ಗೆದ್ದು ಬೀಗಿತು.
ಮತ್ತೊಂದೆಡೆ ಯುಎಸ್‌ಎ ವಿರುದ್ಧ ಮೊದಲಿಗೆ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡಿಸ್ ತಂಡ ಮಧ್ಯಮ ಕ್ರಮಾಂಕದ ಆಟಗಾರರ ಅದ್ಭುತ ಪ್ರದರ್ಶನದಿಂದಾಗಿ 297ರನ್‌ಗಳಿಸಿ ಆಲೌಟ್ ಆಯಿತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಯುಎಸ್‌ಎ ತಂಡ ನಿಗದಿತ 50 ಓವರ್‌ಗಳಲ್ಲಿ 258 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಯಿತು. ಈ ಮೂಲಕ ವೆಸ್ಟ್ ಇಂಡೀಸ್ ಈ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಐರ್ಲೆಂಡ್ ಆಡುವ ಬಳಗ: ಪಾಲ್ ಸ್ಟಿರ್ಲಿಂಗ್, ಆಂಡಿ ಮ್ಯಾಕ್‌ಬ್ರೈನ್, ಆಂಡ್ರ್ಯೂ ಬಲ್ಬಿರ್ನಿ(ನಾಯಕ), ಹ್ಯಾರಿ ಟೆಕ್ಟರ್, ಲೊರ್ಕನ್ ಟಕರ್(ವಿಕೆಟ್ ಕೀಪರ್), ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಗ್ರಹಾಂ ಹ್ಯೂಮ್, ಜೋಶುವಾ ಲಿಟಲ್, ಬೆಂಜಮಿನ್ ವೈಟ್
ಒಮನ್ ಆಡುವ ಬಳಗ: ಕಶ್ಯಪ್ ಪ್ರಜಾಪತಿ, ಜತೀಂದರ್ ಸಿಂಗ್, ಶೋಯೆಬ್ ಖಾನ್, ಜೀಶನ್ ಮಕ್ಸೂದ್ (ನಾಯಕ), ಮೊಹಮ್ಮದ್ ನದೀಮ್, ಅಯಾನ್ ಖಾನ್, ನಸೀಮ್ ಖುಷಿ(ವಿಕೆಟ್ ಕೀಪರ್), ಬಿಲಾಲ್ ಖಾನ್, ಜೇ ಒಡೆದ್ರಾ, ಫಯಾಜ್ ಬಟ್, ಅಕಿಬ್ ಇಲ್ಯಾಸ್