World Cup Qualifiers: ರೋಚಕ ಸೆಣೆಸಾಟದಲ್ಲಿ ಐರ್ಲೆಂಡ್‌ಗೆ ಆಘಾತ ನೀಡಿದ ಒಮನ್
ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯವಾಳಿಯಲ್ಲಿ 4ನೇ ಪಂದ್ಯದಲ್ಲಿ ಐರ್ಲೆಂಡ್ ಹಾಗೂ ಒಮನ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಎರಡು ತಮಡಗಳು ಕೂಡ ಅಮೋಘ ಹೋರಾಟ ಪ್ರದರ್ಶಿಸಿದ್ದು ಐರ್ಲೆಂಡ್ ತಂಡವನ್ನು ಒಮನ್ ಭರ್ಜರಿ ಐದು ವಿಕೆಟ್‌ಗಳ ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಒಮನ್ ಶುಭಾರಂಭ ಮಾಡಿದೆ.
ಈ ಪಂದ್ಯದಲ್ಲಿ ಒಮನ್ ತಂಡ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮಧ್ಯಮ ಕ್ರಮಾಂಕದ ಆಟಗಾರರಾದ ಹ್ಯಾರಿ ಟೆಕ್ಟರ್ ಹಾಗೂ ಡಾಕ್ರೆಲ್ ಅವರ ಅಮೋಘ ಬ್ಯಾಟಿಂಗ್‌ನ ಕಾರಣದಿಂದಾಗಿ ನಿಗದಿತ 50 ಓವರ್‌ಗಳಲ್ಲಿ ಐರ್ಲೆಂಡ್ ತಂಡ 7 ವಿಕೆಟ್ ಕಳೆದುಕೊಂಡು 281 ರನ್‌ಗಳನ್ನು ಗಳಿಸಿ ಒಮಾನ್ ತಂಡಕ್ಕೆ ಕಠಿಣ ಗುರಿಯನ್ನು ಮುಂದಿಟ್ಟಿತ್ತು.

ಐರ್ಲೆಂಡ್ ತಂಡದ ಈ ಗುರಿಯನ್ನು ಬೆನ್ನಟ್ಟಿದ ಒಮನ್ ಮೊದಲ ವಿಕೆಟನ್ನು ಬೇಗನೆ ಕಳೆದುಕೊಂಡಿದ್ದರೂ ಉಳಿದ ದಾಂಟಿಗರು ಅಮೋಘ ಪ್ರದರ್ಶನ ನೀಡಿದರು. ಕಶ್ಯಪ್ ಪ್ರಜಾಪತಿ 72 ರನ್‌ಗಳಿಸಿದರೆ ಆಕಿಬ್ ಇಲ್ಯಾಸ್ 52 ರನ್, ನಾಯಕ ಜೀಶನ್ ಮಕ್ಸೂದ್ 59 ಹಾಗೂ ಮೊಹಮ್ಮದ್ ನದೀಮ್ 46 ರನ್‌ಗಳಿಸಿದರು. ಹೀಗಾಗಿ ಐರ್ಲೆಂಡ್ ನೀಡಿದ್ದ 282 ರನ್‌ಗಳ ಗುರಿಯನ್ನು ಇನ್ನೂ 11 ಎಸೆತಗಳು ಬಾಕಿಯಿರುವಂತೆಯೇ 5 ವಿಕೆಟ್ ಕಳೆದುಕೊಂಡು ಗೆದ್ದುಬೀಗಿದೆ.
ಐರ್ಲೆಂಡ್ ಆಡುವ ಬಳಗ: ಪಾಲ್ ಸ್ಟಿರ್ಲಿಂಗ್, ಆಂಡಿ ಮ್ಯಾಕ್‌ಬ್ರೈನ್, ಆಂಡ್ರ್ಯೂ ಬಲ್ಬಿರ್ನಿ(ನಾಯಕ), ಹ್ಯಾರಿ ಟೆಕ್ಟರ್, ಲೊರ್ಕನ್ ಟಕರ್(ವಿಕೆಟ್ ಕೀಪರ್), ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಗ್ರಹಾಂ ಹ್ಯೂಮ್, ಜೋಶುವಾ ಲಿಟಲ್, ಬೆಂಜಮಿನ್ ವೈಟ್
ಒಮನ್ ಆಡುವ ಬಳಗ: ಕಶ್ಯಪ್ ಪ್ರಜಾಪತಿ, ಜತೀಂದರ್ ಸಿಂಗ್, ಶೋಯೆಬ್ ಖಾನ್, ಜೀಶನ್ ಮಕ್ಸೂದ್ (ನಾಯಕ), ಮೊಹಮ್ಮದ್ ನದೀಮ್, ಅಯಾನ್ ಖಾನ್, ನಸೀಮ್ ಖುಷಿ(ವಿಕೆಟ್ ಕೀಪರ್), ಬಿಲಾಲ್ ಖಾನ್, ಜೇ ಒಡೆದ್ರಾ, ಫಯಾಜ್ ಬಟ್, ಅಕಿಬ್ ಇಲ್ಯಾಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications