World Cup Qualifiers: ಬೃಹತ್ ಮೊತ್ತ ಬೆನ್ನಟ್ಟಿದ ನೆದರ್ಲೆಂಡ್ಸ್ ವಿರುದ್ಧ ಗೆದ್ದ ಜಿಂಬಾಬ್ವೆ
ಜಿಂಬಾಬ್ವೆ ಹಾಗೂ ನೆದರ್ಲೆಂಡ್ಸ್ ತಂಡಗಳ ವಿರುದ್ಧ ನಡೆದ ವಿಶ್ವಕಪ್ ಕ್ವಾಲಿಫಯರ್‌ನ 5ನೇ ಪಂದ್ಯದಲ್ಲಿ ಜಿಂಬಾಬ್ವೆ ಅಮೋಘ ಗೆಲುವು ಸಾಧಿಸಿದೆ. ನೆದರ್ಲೆಂಡ್ಸ್ ತಂಡ ನೀಡಿದ 316 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ ಅಮೋಘ ಪ್ರದರ್ಶನ ನೀಡಿತು. ಅಗ್ರ ಕ್ರಮಾಮಖದ ಎಲ್ಲಾ ಆಟಗಾರರು ಕೂಡ ಭರ್ಜರಿ ಪ್ರದರ್ಶನ ನೀಡಿದ ಕಾರಣ ಜಿಂಬಾಬ್ವೆ ಈ ಪಂದ್ಯವನ್ನು ಗೆದ್ದು ಬೀಗಿದೆ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ನೆದರ್ಲಂಡ್ಸ್ ತಂಡ ಭರ್ಜರಿ ಆರಂಭ ಪಡೆದುಕೊಂಡಿದ್ದು ಮೊದಲ ವಿಕೆಟ್‌ಗೆ 120 ರನ್‌ಗಳ ಜೊತೆಯಾಟವನ್ನು ಪಡೆಯಿತು. ಮ್ಯಾಕ್ಸ್ ಒಡೌಡ್ ಹಾಗೂ ವಿಕ್ರಮ್ ಕಿಂತ್ ಸಿಂಗ್ ಮತ್ತು ಎಡ್ವರ್ಡ್ಸ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಕಾರಣ ನೆದರ್ಲೆಂಡ್ಸ್ 315 ರನ್‌ಗಳನ್ನು ಕಲೆಹಾಕಿತು. ವಿಕ್ರಮ್‌ಜಿತ್ ಸಿಂಗ್ 88 ರನ್‌ಗಳನ್ನು ಬಾರಿಸಿದರೆ ಮ್ಯಾಕ್ಸ್ ಒಡೌಡ್ 59 ಹಾಗೂ ಎಡ್ವರ್ಡ್ಸ್ 83 ರನ್‌ಗಳ ಕೊಡುಗೆ ನೀಡಿದರು. ಇನ್ನು ಬೌಲಿಂಗ್‌ನಲ್ಲಿ ಸಿಕಂದರ್ ರಾಜಾ 4 ವಿಕೆಟ್ ಕಬಳಿಸಿ ಅಬ್ಬರಿಸಿದರು.

ಇನ್ನು ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡದ ಪರವಾಗಿ ಆಗ್ರ ಕ್ರಮಾಂಕದ ಆಟಗಾರೆಲ್ಲರೂ ಅಮೋಘ ಪ್ರದರ್ಶನ ನೀಡಿದರು. ಆರಂಬಿಕರಾದ ಜೊಲಾರ್ಡ್ ಗುಂಬಿ ಹಾಗೂ ನಾಯಕ ಕ್ರೇಗ್ ಇರ್ವಿನ್ 80 ರನ್‌ಗಳ ಜೊತೆಯಾಟ ನೀಡಿದರು. ನಂತರ ಶಾನ್ ವಿಲಿಯಮ್ಸ್ 91 ರನ್‌ಗಳ ಕೊಡುಗೆ ನೀಡಿದರು. ಇನ್ನು ಬೌಲಿಂಗ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದ ಸಿಕಂದರ್ ರಾಜಾ ಬ್ಯಾಟಿಂಗ್‌ನ್ಲಲಿ ಅಮೋಘ ಶತಕ ಸಿಡಿಸಿ ಗೆಲುವನ್ನು ಸಾರಿದರು.
ಸಿಕಂದರ್ ರಾಜಾ ಈ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ನಾಲ್ಕು ವಿಕೆಟ್ ಪಡೆದಿದ್ದರೆ ಬ್ಯಾಟಿಂಗ್‌ನಲ್ಲಿ ಅಜೇಯು 102 ರನ್‌ಗಳನ್ನು ಗಳಿಸಿದರು. ಈ ಮೂಲಕ ಇನ್ನೂ ಬರೊಬ್ಬರಿ 55 ಎಸೆತಗಳು ಬಾಕಿಯಿರುವಂತೆಯೇ ಜಿಂಬಾಬ್ವೆ ಈ ಪಂದ್ಯದಲ್ಲಿ 6 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ.
ಜಿಂಬಾಬ್ವೆ: ಕ್ರೇಗ್ ಎರ್ವಿನ್ (ನಾಯಕ), ಕ್ಲೈವ್ ಮದಂಡೆ (ವಿಕೆಟ್ ಕೀಪರ್), ಜಾಯ್ಲಾರ್ಡ್ ಗುಂಬಿ, ವೆಸ್ಲಿ ಮಾಧೆವೆರೆ, ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ರಿಯಾನ್ ಬರ್ಲ್, ವೆಲ್ಲಿಂಗ್ಟನ್ ಮಸಕಡ್ಜಾ, ರಿಚರ್ಡ್ ನಾಗರವಾ, ಟೆಂಡೈ ಚಟಾರಾ, ಬ್ಲೆಸ್ಸಿಂಗ್ ಮುಜರಬಾನಿ
ಬೆಂಚ್: ಲ್ಯೂಕ್ ಜೊಂಗ್ವೆ, ಇನೊಸೆಂಟ್ ಕೈಯಾ, ತಡಿವಾನಾಶೆ ಮರುಮನಿ, ಬ್ರಾಡ್ ಇವಾನ್ಸ್
ನೆದರ್ಲಂಡ್ಸ್: ಸ್ಕಾಟ್ ಎಡ್ವರ್ಡ್ಸ್ (ನಾಯಕ & ವಿಕೆಟ್ ಕೀಪರ್), ಮ್ಯಾಕ್ಸ್ ಓಡೌಡ್, ವಿಕ್ರಮಜಿತ್ ಸಿಂಗ್, ಬಾಸ್ ಡಿ ಲೀಡೆ, ವೆಸ್ಲಿ ಬ್ಯಾರೆಸಿ, ತೇಜಾ ನಿಡಮನೂರು, ಶರೀಜ್ ಅಹ್ಮದ್, ಆರ್ಯನ್ ದತ್, ಲೋಗನ್ ವ್ಯಾನ್ ಬೀಕ್, ಸಾಕಿಬ್ ಜುಲ್ಫಿಕರ್, ಕ್ಲೇಟನ್ ಫ್ಲಾಯ್ಡ್
ಬೆಂಚ್: ವಿವಿಯನ್ ಕಿಂಗ್ಮಾ, ರಯಾನ್ ಕ್ಲೈನ್, ಮೈಕೆಲ್ ಲೆವಿಟ್, ನೋಹ್ ಕ್ರೋಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications